ಸಂಸ್ಕೃತ ಪಾಠಶಾಲೆಯಲ್ಲಿ ಸಂಸ್ಕೃತೋತ್ಸವ ಸಂಭ್ರಮ

 ಶ್ರೀ ಶಂಕರ ವಿಲಾಸ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ರವಾರ ಸಂಸ್ಕೃತೋತ್ಸವ ನೆರವೇರಿತು.ಡಾ. ಶ್ರೀ ವಿಶ್ವಾರಾಧ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.
ಶ್ರೀ ಶಂಕರ ವಿಲಾಸ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ರವಾರ ಸಂಸ್ಕೃತೋತ್ಸವ ನೆರವೇರಿತು.ಡಾ. ಶ್ರೀ ವಿಶ್ವಾರಾಧ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಸ್.ಶಿವಕುಮಾರ ಸ್ವಾಮೀಜಿ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ
ಶ್ರೀ ಅರಮನೆ ಜನಪದಕಟ್ಟೆ ಮಠದ ಆಶ್ರಯದಲ್ಲಿ ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತೆಯೊಂದಿಗೆ ನಡೆಯುತ್ತಿರುವ ಶ್ರೀ ಶಂಕರ ವಿಲಾಸ ಸಂಸ್ಕೃತ ಪಾಠಶಾಲೆಯಲ್ಲಿ ಶುಕ್ರವಾರ ಸಂಸ್ಕೃತೋತ್ಸವವನ್ನು ವೈಭವದಿಂದ ನಡೆಯಿತು.
ಸಂಸ್ಕೃತೋತ್ಸವದ ಅಂಗವಾಗಿ ಎಸ್.ಶಿವಕುಮಾರ ಸ್ವಾಮೀಜಿ ಅವರ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರಥಮಾ ಹಾಗೂ ಕಾವ್ಯ ತರಗತಿಯ ವಿದ್ಯಾರ್ಥಿಗಳಿಗೆ ಸುಭಾಷಿತ ಕಂಠಪಾಠ ಸ್ಪರ್ಧೆ ಮತ್ತು ಸಾಹಿತ್ಯ ತರಗತಿಯ ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿ ವಿಷಯದ ಕುರಿತು ಭಾಷಣ ಸ್ಪರ್ಧೆ ನಡೆಸಲಾಯಿತು.
ಶ್ರೀ ಜಂಗಮವಾಡಿ ಮಠದ ಡಾ. ಶ್ರೀ ವಿಶ್ವಾರಾಧ್ಯ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಠಶಾಲೆಯೊಂದಿಗಿನ ತಮ್ಮ ಹಿಂದಿನ ಒಡನಾಟವನ್ನು ಸ್ಮರಿಸಿದರು. ಇಲ್ಲಿ ಅಧ್ಯಯನ ಮಾಡಿದ ಅನೇಕ ಪ್ರಾಚೀನ ವಿದ್ವಾಂಸರು ಹಾಗೂ ಪೀಠಾಧಿಪತಿಗಳನ್ನು ನೆನಪಿಸಿಕೊಂಡರು. ಪಾಠಶಾಲೆಯು ಮುಂದೆಯೂ ನಿರಂತರವಾಗಿ ಯಶಸ್ಸಿನ ಪಥದಲ್ಲಿ ಮುನ್ನಡೆಯಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಅರಮನೆ ಜನಪದಕಟ್ಟೆ ಮಠದ ಪೀಠಾಧಿಪತಿ ಡಾ.ಶ್ರೀ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸಂಸ್ಕೃತದಿಂದ ಸಂಸ್ಕೃತಿ ಮತ್ತು ಸಂಸ್ಕಾರವು ಸಂಪೂರ್ಣ ವಿಶ್ವಕ್ಕೆ ದೊರೆಯುತ್ತದೆ. ಅದನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹುಕ್ಕೇರಿ ಮಠದ ಪೀಠಾಧಿಪತಿ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಎಸ್.ಜ್ಞಾನಶಂಕರ್, ಪಾಠಶಾಲೆಯ ಮುಖ್ಯ ಶಿಕ್ಷಕಿ ವಿದುಷಿ ಪಂಕಜಾಕ್ಷಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net