ಕೃಷಿ ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಅನಿಲ್ ಮಾತನಾಡಿ, ಮಂಡಳಿಯು ಈ ಬಾರಿ ಒಟ್ಟು 3400 ಮೆಟ್ರಿಕ್ ಟನ್ ರಸಗೊಬ್ಬರಕ್ಕಾಗಿ ಬೇಡಿಕೆ ನೀಡಿದ್ದು, ಈ ಪೈಕಿ 13 ಕಂಪನಿಗಳಿಂದ ಪ್ರಸ್ತುತ 1300 ಮೆಟ್ರಿಕ್ ಟನ್ ರಸಗೊಬ್ಬರ ಸರಬರಾಜು ಆಗಿದೆ. ಎಸ್‌ಒಪಿ, ಡಿಎಪಿ, ಸಿಎನ್ ಮತ್ತು ಅಮೋನಿಯಂ ಸಲ್ಫೇಟ್ ರಸಗೊಬ್ಬರಗಳು ಸರಬರಾಜಾಗಿದ್ದು, ನಾಲ್ಕು ದಾಸ್ತಾನು ಕೊಠಡಿಯಿಂದ ಮಾದರಿಯನ್ನು ಸಂಗ್ರಹಿಸಲಾಗಿದೆ. ರಸಗೊಬ್ಬರ ನಿಯಂತ್ರಣ ಕಾಯ್ದೆ 1985ರನ್ವಯ ಎಲ್ಲ ಮಾದರಿಗಳನ್ನು ರಸಗೊಬ್ಬರ ನಿಯಂತ್ರಣ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. 3-4 ದಿನಗಳಲ್ಲಿ ಪ್ರಯೋಗಾಲಯದಿಂದ ವರದಿ ಬರಲಿದ್ದು ರಸಗೊಬ್ಬರಗಳ ಬಳಕೆ ಯೋಗ್ಯವೆಂದು ವರದಿ ಬಂದಲ್ಲಿ ರೈತರಿಗೆ ವಿತರಿಸಲು ಮಂಡಳಿಗೆ ಸೂಚಿಸಲಾಗುವುದು ಎಂದರು.