ಸಮಾಗಮ ಸಂಘಟನೆ ಸಮಾಜಕ್ಕೆ ಮಾದರಿ

ಸರಗೂರು ತಾಲೂಕಿನ ಪಡವಲು ವಿರಕ್ತ ಮಠದಲ್ಲಿ ಸಮಾಗಮ ಸಮಾನ ಮನಸ್ಕ ಗೆಳೆಯರ ಬಳಗದ 13ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕಲ್ಮಳ್ಳಿ ನಟರಾಜು ಮಾತನಾಡಿದರು. ಬಿ. ಆರ್. ಶಿವಕುಮಾರ್, ಗಜೇಂದ್ರ, ಕಾಟವಳು ನಟರಾಜು ಇತರರು ಇದ್ದರು.
ಸರಗೂರು ತಾಲೂಕಿನ ಪಡವಲು ವಿರಕ್ತ ಮಠದಲ್ಲಿ ಸಮಾಗಮ ಸಮಾನ ಮನಸ್ಕ ಗೆಳೆಯರ ಬಳಗದ 13ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಕಲ್ಮಳ್ಳಿ ನಟರಾಜು ಮಾತನಾಡಿದರು. ಬಿ. ಆರ್. ಶಿವಕುಮಾರ್, ಗಜೇಂದ್ರ, ಕಾಟವಳು ನಟರಾಜು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಉಪಾಧ್ಯಕ್ಷ ಕಲ್ಮಳ್ಳಿ ನಟರಾಜು ಹೇಳಿಕೆ
ಸರಗೂರು: ಸಮಾಗಮ ಸಮಾನ ಮನಸ್ಕ ಗೆಳೆಯರ ಬಳಗ ಯಾವುದೇ ಭಿನ್ನಭಿಪ್ರಾಯಗಳಿಲ್ಲದೆ 13ವರ್ಷ ಪೂರೈಸುವುದರ ಜತೆಗೆ ತಾಲೂಕಿನ ಇತರೆಲ್ಲ ಸಂಘಟನೆಗಕಳಿಗೆ ಮಾದರಿಯಾಗಿದೆ ಎಂದು ಗುರುಮಲ್ಲೇಶ್ವರ ಪದವೀಧರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಲ್ಮಳ್ಳಿ ನಟರಾಜು ತಿಳಿಸಿದರು.
ತಾಲೂಕಿನ ಬಿಡಗಲು ಗ್ರಾಮದ ಪಡುವಲ ಶ್ರೀ ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾಗಮ ಸಮಾನ ಮನಸ್ಕ ಗೆಳೆಯರ ಬಳಗದ 13ನೇ ವಾರ್ಷಿಕೋತ್ಸವ ಕಾರ್ಯಕ್ರಮ ಮತ್ತು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮುದಾಯದ ಜನ ನನ್ನ ಮೇಲೆ ತೋರಿದ ನಿಷ್ಕಲ್ಮಶ ಪ್ರೀತಿ ವಿಶ್ವಾಸ ನಂಬಿಕೆ ಶಾಶ್ವತವಾಗಿ ಉಳಿಸಿ ಕೊಳ್ಳಬೇಕು ಎನ್ನುವ ದೃಢ ನಿರ್ಧಾರ ಮತ್ತು ಸಂಕಲ್ಪದಿಂದ ಎಚ್. ಡಿ. ಕೋಟೆ ಮತ್ತು ಸರಗೂರಿನಲ್ಲಿ ಸಮಾಗಮ ಸಮಾನ ಮನಸ್ಕ ಗೆಳೆಯರ ಬಳಗ ಸ್ಥಾಪಿಸಿದೆ ಎಂದರು.
ಪಡುವಲ ಮಠದ ಶ್ರೀ ಮಹಾದೇವ ಸ್ವಾಮೀಜಿ ಮಾತನಾಡಿ, ದೊಡ್ಡ ಸಂಘಟನೆ ಮಾತ್ರ ಸಮಾಜ ಸೇವೆ ಎನ್ನುವ ಮನೋಭಾವ ದೂರವಾಗಬೇಕು. ಸಂಘಟನೆ ಯಶಸ್ವಿಯಾಗಿ 13 ವರ್ಷ ಪೂರೈಸಿರುವುದು ಸಂತಸ ತಂದಿದೆ ಎಂದರು.
ಮೈಸೂರಿನ ಬಸವ ಬಳಗ ಒಕ್ಕೂಟದ ವತಿಯಿಂದ ಮೈಸೂರಿನಲ್ಲಿ ನಡೆಯಲಿರುವ ಬಸವ ಜಯಂತಿ ಕರಪತ್ರವನ್ನು ಇದೆ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಅಧ್ಯಕ್ಷ ಬಿ. ಆರ್. ಶಿವಕುಮಾರ್, ಗಜೇಂದ್ರ, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಕಾಟವಾಳು ನಟರಾಜು, ನಿಕಟಪೂರ್ವ ಅಧ್ಯಕ್ಷ ಮಾದಾಪುರ ಗಿರೀಶ್ ಮೂರ್ತಿ, ಸ್ವಾಮಿ, ವಕೀಲ ಸಂಗಮೇಶ, ನಿರ್ಗಮಿತ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಮುಂದಿನ ನಿಯೋಜಿತ ಅಧ್ಯಕ್ಷ ಆನಂದ್, ಕಾರ್ಯದರ್ಶಿ ಶಿವಕುಮಾರ್ ಚಿಕ್ಕೇರೆಯೂರು ಇತರರು ಇದ್ದರು.
23 ಎಸ್ ಆರ್ ಜಿ 3.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net