ಜಿಲ್ಲೆಯ ಅಗ್ರಸ್ಥಾನದಲ್ಲಿ ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್

Sadvidya Semi Residential
Sadvidya Semi Residential
Published on
ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಿಜಯನಗರದ ಎರಡನೇ ಹಂತದ ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಪಿಯು ಕಾಲೇಜಿಗೆ ಶೇ.97.89ರಷ್ಟು ಫಲಿತಾಂಶ ಬಂದಿದೆ. ಕಳೆದ ಬಾರಿಗಿಂತ ಶೇ.2ರಷ್ಟು ಫಲಿತಾಂಶವನ್ನು ಕಾಲೇಜು ಹೆಚ್ಚು ಪಡೆದುಕೊಂಡು ಜಿಲ್ಲೆಗೆ ಅಗ್ರಸ್ಥಾನ ಪಡೆದುಕೊಂಡಿದೆ.
ವಿಜ್ಞಾನ ವಿಭಾಗದಲ್ಲಿ ಶೇ.98ರಷ್ಟು ಫಲಿತಾಂಶ ಲಭಿಸಿದ್ದು, ಪರೀಕ್ಷೆ ಎದುರಿಸಿದ 310 ವಿದ್ಯಾರ್ಥಿಗಳ ಪೈಕಿ 302 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಇದರಲ್ಲಿ 158 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 143 ವಿದ್ಯಾರ್ಥಿಗಳು ಪ್ರಥಮ ಮತ್ತು 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶೇ.100ರಷ್ಟು ಫಲಿತಾಂಶ ಪಡೆದುಕೊಂಡಿದ್ದು, ಪರೀಕ್ಷೆ ಎದುರಿಸಿದ 70 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ 29 ವಿದ್ಯಾರ್ಥಿಗಳು ಉನ್ನತ, 37 ಪ್ರಥಮ, 4 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಡಿ.ಎಸ್.ಧ್ವನಿ(597) ಅಂಕ ಪಡೆದು ರಾಜ್ಯಕ್ಕೆ ಮೂರನೇ ರ‌್ಯಾಂಕ್ ಗಳಿಸಿಕೊಂಡಿದ್ದಾರೆ. ಎ.ಮರಿಯಾ ಶ್ಯಾನ್ಸಿ (596), ಜೆ.ದಿಶಾ ವರ್ಮಾ(595), ಎ.ಅಮೂಲ್ಯಾ(593) ಮತ್ತು ಎನ್.ಎಚ್.ಪೂರ್ವಿತಾ(592) ಅಂಕ ಪಡೆದುಕೊಂಡು ಕಾಲೇಜಿನ ಅತ್ಯುನ್ನತ ಶ್ರೇಣಿಯ ತೇರ್ಗಡೆಗೆ ಭಾಜನರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಸಂಜನಾ ಸಿಂಹ(592), ವಿ.ಸಮರ್ಥ್ (591) ಮತ್ತು ಜೆ.ಎಚ್.ಮನೀಶ್(589) ಅಂಕ ಪಡೆದು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net