ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದಲೂ ಗಣ್ಯರು, ಸಂಗೀತ ಕ್ಷೇತ್ರದ ಕಲಾವಿದರು ಹಾಗೂ ಅಭಿಮಾನಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಜಾನಕಿ ಅವರೊಂದಿಗೆ ಕಳೆದ ಕ್ಷಣಗಳನ್ನು ನೆನಪಿಸಿ ಕೊಂಡು ಹಲವರು ಭಾವುಕರಾದರು. ಕೆಲವರು ಅವರ ಹಾಡುಗಳನ್ನು ಗುನುಗುತ್ತಾ ತಮ್ಮ ಪ್ರೀತಿಯ ಗಾಯಕಿಗೆ ಶ್ರದ್ಧಾಂಜಲಿ ಅರ್ಪಿ ಸಿದರೆ, ಮತ್ತಷ್ಟು ಮಂದಿ ಕಣ್ಣೀರಿನ ಮೂಲಕವೇ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರು.