ಸಾಲಿಗ್ರಾಮ: ಹನಸೋಗೆ ಗ್ರಾಮದ ನಾಯಕ ಸಮಾಜ ಮತ್ತು ತಾಲೂಕು ವಾಲ್ಮೀಕಿ ನಾಯಕ ಸಂಘದ ಬೇಡಿಕೆಯಂತೆ ಹನಸೋಗೆ ಗ್ರಾಮದ ವಾಲ್ಮೀಕಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಶಾಸಕರು 20 ಲಕ್ಷ ರೂ. ಅನುದಾನ ನೀಡಿದ್ದಾರೆ ಎಂದು ಎಂಸಿಡಿಸಿಸಿ ಬ್ಯಾಂಕ್ ನಿರ್ದೇಶಕ ದೊಡ್ಡ ಸ್ವಾಮಿಗೌಡ ತಿಳಿಸಿದರು.
ಹನಸೋಗೆ ಗ್ರಾಮದ ನಾಯಕ ಸಮಾಜದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಕೆಆರ್ ನಗರ ಮತ್ತು ಸಾಲಿಗ್ರಾಮ ತಾಲೂಕಿನ ನಾಯಕ ಸಮಾಜದ ಜನರ ಅಭಿವೃದ್ಧಿಗಾಗಿ ಅನೇಕ ವಾಲ್ಮೀಕಿ ಭವನಗಳ ಮುಂದುವರಿದ ಕಾಮಗಾರಿಗೆ ಮತ್ತು ಹೊಸ ಭವನಗಳ ನಿರ್ಮಾಣ ಮಾಡಲು ಶಾಸಕರು ಅನುದಾನ ನೀಡಿದ್ದಾರೆ. ಈಗಾಗಲೇ ಸಾಕಷ್ಟು ಕಡೆ ಕಾಮಗಾರಿ ಪ್ರಗತಿಯಲ್ಲಿವೆ. ಸಮಾಜದವರು ಇದನ್ನು ಸದುಪಯೋಗಪಡಿಸಿಕೊಳ್ಳುವ ಜತೆಗೆ ಗುಣಮಟ್ಟದ ಕೆಲಸ ಮಾಡಿಸಿಕೊಳ್ಳುವಂತೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಪ್ರಸನ್ನ ಮಾತನಾಡಿ, ಗ್ರಾಮದ ವಾಲ್ಮೀಕಿ ಸಮುದಾಯ ಭವನ ಅನುದಾನ ಇಲ್ಲದೆ ಹಲವು ವರ್ಷಗಳಿಂದ ನನೆಗುದ್ದಿಗೆ ಬಿದ್ದಿತು. ಇದನ್ನು ಅಭಿವೃದ್ಧಿಪಡಿಸಿಕೊಳ್ಳಲು ಶಾಸಕರು ಮತ್ತು ದೊಡ್ಡ ಸ್ವಾಮಿಗೌಡ ಅವರಿಗೆ ಮನವಿ ಮಾಡಿಕೊಂಡಿದ್ದೆವು. ಅದರಂತೆ 20 ಲಕ್ಷ ರೂ. ಅನುದಾನ ನೀಡಿದ್ದಾರೆ. ಅನುದಾನ ಮಂಜೂರು ಮಾಡಿಸಲು ಸಮಾಜದ ಪರವಾಗಿ ಹನಸೋಗೆ ನವೀನ್, ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯ್, ಬಂಡಳ್ಳಿ ಅಶ್ವಥ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಚೇತನ್, ಸಾಲಿಗ್ರಾಮ ತಾಲೂಕು ವಾಲ್ಮೀಕಿ ಸಂಘದ ಶ್ರಮ ಇದೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ವಾಲ್ಮೀಕಿ ಸಂಘದ ನಿರ್ದೇಶಕ ಪರಮೇಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರವಿ, ಯಜಮಾನ ಚೆಲುವನಾಯಕ, ಕೃಷ್ಣನಾಯಕ, ವಾಲೆ ರಾಮನಾಯಕ, ನಿವೃತ್ತ ಶಿಕ್ಷಕ ರಾಮನಾಯಕ, ರಾಜನಾಯಕ, ಶ್ರೀನಿವಾಸ್, ಚಂದ್ರನಾಯಕ, ಕುಮಾರ್, ಎಂಇ ಪ್ರಸನ್ನ ಇತರರು ಇದ್ದರು.