ಸಮುದಾಯ ಭವನ ಕಾಮಗಾರಿಗೆ 20 ಲಕ್ಷ ರೂ. ಅನುದಾನ

: ಹುಣಸೂರು ನಗರದ ಗಾಣಿಗ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಚಾಲನೆ ನೀಡಿದರು. ನಸ್ಯ ಬಾಬು, ಪುರಿಭಟ್ಟಿ ಶಿವಣ್ಣ, ಎಂ.ಮಾನಸ, ಎಸ್.ಶರವಣ, ಇಂಟೆಕ್ ರಾಜು ಇತರರಿದ್ದಾರೆ.
: ಹುಣಸೂರು ನಗರದ ಗಾಣಿಗ ಸಮುದಾಯ ಭವನದ ಮುಂದುವರೆದ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಚಾಲನೆ ನೀಡಿದರು. ನಸ್ಯ ಬಾಬು, ಪುರಿಭಟ್ಟಿ ಶಿವಣ್ಣ, ಎಂ.ಮಾನಸ, ಎಸ್.ಶರವಣ, ಇಂಟೆಕ್ ರಾಜು ಇತರರಿದ್ದಾರೆ.
Published on
ಹುಣಸೂರು: ನಗರದ ಗಣೇಶನಗುಡಿ ಬೀದಿಯಲ್ಲಿರುವ ಗಾಣಿಗ ಸಮಾಜದ ಸಮುದಾಯ ಭವನದ 20 ಲಕ್ಷ ರೂ. ವೆಚ್ಚದಡಿ ಮುಂದುವರಿದ ಕಾಮಗಾರಿಗೆ ಶಾಸಕ ಜಿ.ಡಿ.ಹರೀಶ್‌ಗೌಡ ಶುಕ್ರವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿ, 25 ವರ್ಷಗಳ ಹಿಂದೆ ಆರಂಭಗೊಂಡ ಗಾಣಿಗ ಸಮಾಜದ ಸಮುದಾಯ ಭವನ ಇಂದಿಗೂ ಪೂರ್ಣಗೊಳ್ಳದಿರುವುದು ಬೇಸರ ಮೂಡಿಸಿದೆ. ಕಾರಣಗಳೇನೇ ಇರಲಿ, ಇದೀಗ ಜೆಡಿಎಸ್ ವರಿಷ್ಠ ನಾಯಕ, ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಸಮುದಾಯ ಕಾಮಗಾರಿ ಮುಂದುವರಿಸಲು 20 ಲಕ್ಷ ರೂ. ಅನುದಾನ ನೀಡಿದ್ದಾರೆ. 25 ವರ್ಷಗಳ ಹಳೆಯ ಕಟ್ಟಡವಾಗಿರುವುದರಿಂದ ಸಮುದಾಯ ಭವನದ ಕಾಮಗಾರಿ ಸಂಪೂರ್ಣಗೊಳ್ಳಲು ಇಂಜಿನಿಯರ್ ಮೂಲಕ ಅಂದಾಜು ವೆಚ್ಚ ಒಂದು ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಸಂಘದ ಬಳಿ 20 ಲಕ್ಷ ರೂ. ಇದ್ದು, ಮಿಕ್ಕ ಹಣವನ್ನು ನಾನು ಭರಿಸುತ್ತೇನೆ. ಮುಂದಿನ 7 ತಿಂಗಳಲ್ಲಿ ಕಾಮಗಾರಿ ಸಂಪೂರ್ಣಗೊಳಿಸುವ ರವಸೆಯನ್ನು ಇಂಜಿನಿಯರ್ ನೀಡಿದ್ದು, 2027ರ ಜನವರಿ ತಿಂಗಳಲ್ಲಿ ನಮ್ಮೆಲ್ಲರ ನೆಚ್ಚಿನ ನಾಯಕ ದೇವೇಗೌಡ ಅಪ್ಪಾಜಿ ಅವರಿಂದ ಭವನದ ಉದ್ಘಾಟನೆಯಾಗಲಿದೆ ಎಂದರು
ತಾಲೂಕಿನಲ್ಲಿ ಸಣ್ಣಪುಟ್ಟ ಸಮುದಾಯಗಳ ಸಂಖ್ಯೆ ಹೆಚ್ಚಿದ್ದು, ಇಂತಹ ಸಮುದಾಯಗಳು ಒಗ್ಗಟ್ಗಿನಿಂದ ಮುಂದುವರಿದಲ್ಲಿ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ. ಗಾಣಿಗ ಸಮಾಜವೂ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು. ಸಣ್ಣಪುಟ್ಟ ವ್ಯತ್ಯಾಸಗಳನ್ನು ಬದಿಗಿಟ್ಟು 25 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಭವನದ ಕಾಮಗಾರಿ ಪೂರ್ಣಗೊಳಿಸಿಕೊಂಡು ಸಮುದಾಯದ ಬಳಕೆಗೆ ಉಪಯೋಗಿಸಬೇಕು ಎಂದರು.
ಸಭೆಯಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಎಸ್.ಶರವಣ, ಗಾಣಿಗ ಸಮಾಜದ ಜಿಲ್ಲಾಧ್ಯಕ್ಷ ಉಮೇಶ್, ಮುಖಂಡರಾದ ಪುರಿಭಟ್ಟಿ ಶಿವಣ್ಣ, ನಸ್ಯ ಬಾಬು, ಡಾ.ಯೋಗೀಶ್, ಇಂಟೆಕ್ ರಾಜು, ಸುಬ್ಬಣ್ಣ, ಪುಟ್ಟಶೆಟ್ಟಿ, ಮನು, ಕುಮಾರ್, ನಗರಸಭೆ ಪೌರಾಯುಕ್ತೆ ಎಂ.ಮಾನಸಾ, ಸಮಾಜದವದ್ದರು.
ಅನುದಾನಗಳು ಸಿಗುತ್ತಿಲ್ಲ: ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳು ಸೇರಿದಂತೆ ವಿವಿಧ ಸಮಾಜದ ಸಮುದಾಯ ಭವನಗಳ ಕಾಮಗಾರಿಗಳಿಗೆ ಸರ್ಕಾರದಿಂದ ಅನುದಾನಗಳು ಸಿಗುತ್ತಿಲ್ಲ. ಇತ್ತೀಚೆಗೆ ತಾಲೂಕಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು ಸಭೆಯೊಂದರಲ್ಲಿ ಜನರ ಸಮಸ್ಯೆಗಳ ಕುರಿತು ಮಾಹಿತಿಯನ್ನು ತಮ್ಮ ಪಕ್ಷದ ಮಾಜಿ ಶಾಸಕರ ಬಳಿ ನೀಡಲು ತಿಳಿಸಿದ್ದಾರೆ. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿಗಳೇ ಈ ರೀತಿ ಹೇಳಿರುವುದು ರಾಜ್ಯದಲ್ಲಿ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿ ಎಂದು ಶಾಸಕ ಹರೀಶ್‌ಗೌಡ ವ್ಯಂಗ್ಯವಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net