ವಿದ್ಯಾರ್ಥಿಗಳಿಗೆ ರೋಟರಿ ಐವರಿ ಸಿಟಿಯಿಂದ ವಿದ್ಯಾರ್ಥಿ ವೇತನ ವಿತರಣೆ

ರೋಟರಿ ಐವರಿ ಸಿಟಿ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಡಾ.ಎಂ.ಎಸ್.ರಂಗನಾಥ್, ಗೌರಿ ಸತ್ಯ, ಕೇಶವ್ ಕಾಂಚನ್, ಮುಖೇಶ್, ಡಾ.ಜಿ.ಎಲ್.ಶೇಖರ್, ಸುನಿಲ್‌ಬಾಳಿಗಾ, ಆರ್.ನರಸಿಂಹ ಹಾಗೂ ಇತರರು ಇದ್ದರು.
ರೋಟರಿ ಐವರಿ ಸಿಟಿ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಡಾ.ಎಂ.ಎಸ್.ರಂಗನಾಥ್, ಗೌರಿ ಸತ್ಯ, ಕೇಶವ್ ಕಾಂಚನ್, ಮುಖೇಶ್, ಡಾ.ಜಿ.ಎಲ್.ಶೇಖರ್, ಸುನಿಲ್‌ಬಾಳಿಗಾ, ಆರ್.ನರಸಿಂಹ ಹಾಗೂ ಇತರರು ಇದ್ದರು.
Published on
ಮೈಸೂರು: ರೋಟರಿ ಐವರಿ ಸಿಟಿ ವತಿಯಿಂದ ನಗರದ ಇಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಸ್ವಾತಂತ್ರ ಹೋರಾಟಗಾರ ಜಿ.ಎಲ್.ಸ್ವಾಮಿ ಪತ್ನಿ ಮೀನಾಕ್ಷಿ ಹೆಸರಿನಲ್ಲಿ ವಿದ್ಯಾರ್ಥಿ ವೇತನವನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿತರಿಸುವ ಕಾರ್ಯಕ್ರಮ ನಡೆಯಿತು.
ಹಿರಿಯ ಪತ್ರಕರ್ತ ಗೌರಿಸತ್ಯ ಮಾತನಾಡಿ, ಸಮಾಜಸೇವೆಯಿಂದ ಮನುಷ್ಯನಿಗೆ ಆತ್ಮತೃಪ್ತಿ ಸಿಗುತ್ತದೆ. ಜತೆಗೆ ಸಂತೃಪ್ತಿ ಜೀವನ ನಡೆಸಿದ ಸಂತೋಷದ ಅನುಭವ ನಮಗೆಲ್ಲ ಲಭಿಸುತ್ತದೆ. ಸಮಾಜದಲ್ಲಿ ಉಳ್ಳವರು ಕಷ್ಟದಲ್ಲಿರುವವರಿಗೆ, ನೊಂದವರಿಗೆ ಸಹಾಯಹಸ್ತವನ್ನು ನೀಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಸಮಾಜದಲ್ಲಿ ಸಿಗುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಬದುಕನ್ನು ರೂಪಿಸಿಕೊಳ್ಳಬೇಕು. ಶಿಕ್ಷಕರಾದ ವರು ಬೋಧನೆಯ ಜತೆಗೆ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಆ ಮೂಲಕ ಸೇವಾಕಾರ್ಯಗಳು ಮುಂದುವರೆಯಲು ಸಹಾಯವಾಗುತ್ತದೆ ಎಂದು ಹೇಳಿದರು.
ಇಂಜಿನಿಯರ್‌ಗಳ ಸಂಸ್ಥೆ ಅಧ್ಯಕ್ಷ ಡಾ.ಎಂ.ಎಸ್.ರಂಗನಾಥ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿವೇತನವನ್ನು ವಿದ್ಯಾಭ್ಯಾಸಕ್ಕೆ ಸದ್ಬಳಕೆ ಮಾಡಿಕೊಳ್ಳಬೇಕು. ನಂತರದ ದಿನಗಳಲ್ಲಿ ತಾವುಗಳು ಉನ್ನತಮಟ್ಟ ತಲುಪಿದಾಗ ಬೆಳೆದುಬಂದ ದಾರಿಯನ್ನು ಎಂದಿಗೂ ಮರೆಯಬಾರದು, ಸಮುದಾಯಕ್ಕೆ ಸಹಾಯ, ಸಹಕಾರವನ್ನು ನೀಡಬೇಕು ಎಂದು ಕಿವಿಮಾತು ಹೇಳಿದರು.
ಶಾರದಾವಿಲಾಸ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಡಾ.ಜಿ.ಎಲ್.ಶೇಖರ್, ತಾಯಿ ನಮಗೆ ಜನ್ಮವನ್ನು ನೀಡುತ್ತಾಳೆ, ಜನ್ಮಕೊಟ್ಟ ತಾಯಿಯ ಋಣವನ್ನು ಎಂದೆಂದಿಗೂ ತೀರಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಅವಕಾಶ ಸಿಕ್ಕಾಗ ತಾಯಿಯ ಹೆಸರಿನಲ್ಲಿ ಇಂತಹ ಸೇವಾ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ರೋಟರಿ ಐವರಿ ಸಿಟಿಯ ಅಧ್ಯಕ್ಷ ಕೇಶವ್ ಕಾಂಚನ್, ಕಾರ್ಯದರ್ಶಿಮುಖೇಶ್, ಪದಾಧಿಕಾರಿಗಳಾದ ಡಾ.ಜಿ.ಎಲ್.ಶೇಖರ್, ಸುನಿಲ್ ಬಾಳಿಗಾ, ಶಶಿಧರ್, ಡಾ.ಸಚ್ಚಿದಾನಂದ, ಇಫ್ತಿಕರ್, ಆರ್.ನರಸಿಂಹ, ಪೂಜಾ ಬಾಳಿಗಾ, ಶಾರದಾವಿಲಾಸ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ದೇವಿಕಾ, ಸಿ.ಕೆ.ಅಶೋಕ್ ಕುಮಾರ್, ಮನೋಹರ್, ಮನೋಜ್‌ಕುಮಾರ್ ಹಾಗೂ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net