ಮೈಸೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರೋಟರಿ ಕ್ಲಬ್ ಆಫ್ ಕೃಷ್ಣರಾಜನಗರ ತಂಡಕ್ಕೆ ಪ್ರತಿಷ್ಠಿತ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಮಾಡಲಾಯಿತು. ರೋಟರಿ ಜಿಲ್ಲಾ ಪ್ರಾಂತಪಾಲ ರಾಮಕೃಷ್ಣ, ಸಹಾಯಕ ಪ್ರಾಂತಪಾಲ ರಾಜೇಗೌಡ, ಕೆ.ಆರ್.ನಗರ ಕ್ಲಬ್ ಅಧ್ಯಕ್ಷ ಟಿ.ಎನ್.ದಯಾನಂದ, ಕಾರ್ಯದರ್ಶಿ ಕೆ.ಆರ್.ಪುರುಷೋತ್ತಮ ಇತರರು ಇದ್ದರು.
ಕೆ.ಆರ್.ನಗರ: ರೋಟರಿ ಇಂಟರ್ ನ್ಯಾಷನಲ್ ಜಿಲ್ಲಾ 3181 ವತಿಯಿಂದ ಮೈಸೂರಿನಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅನುಬಂಧ ಅವಾರ್ಡ್ಸ್ ನೈಟ್ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಫ್ ಕೃಷ್ಣರಾಜನಗರಕ್ಕೆ ಪ್ರತಿಷ್ಠಿತ ಗ್ಲೋಬಲ್ ಎಕ್ಸಲೆನ್ಸ್ ಅವಾರ್ಡ್ ಪ್ರದಾನ ಮಾಡಲಾಯಿತು.
ಕ್ಲಬ್ ಕೈಗೊಂಡ ವಿವಿಧ ಸಮಾಜಮುಖಿ ಸೇವಾ ಕಾರ್ಯಕ್ರಮಗಳು, ಸಮುದಾಯ ಸೇವೆ, ಸದಸ್ಯತ್ವ ವೃದ್ಧಿ, ರೋಟರಿ ಫೌಂಡೇಶನ್‌ಗೆ ನೀಡಿದ ಗಮನಾರ್ಹ ಕೊಡುಗೆ, ಯುವಜನ ಸೇವಾ ಕಾರ್ಯಕ್ರಮಗಳು, ಶಿಕ್ಷಣ, ಆರೋಗ್ಯ, ಪರಿಸರ ಸಂರಕ್ಷಣೆ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ
ಮಾಡಿದ ಚಟುವಟಿಕೆಗಳನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಇದರೊಂದಿಗೆ ಅಡಾಪ್ಟಬಿಲಿಟಿ, ಇಂಪ್ಯಾಕ್ಟ್ ಎಕ್ಸಲೆನ್ಸ್ ಅವಾರ್ಡ್, ರೀಚ್ ಎಕ್ಸಲೆನ್ಸ್ ಸೇರಿದಂತೆ ಹಲವು ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನೂ ಕ್ಲಬ್ ತನ್ನದಾಗಿಸಿಕೊಂಡಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಜಿಲ್ಲಾ ಪ್ರಾಂತಪಾಲ ಪಿ.ಕೆ.ರಾಮಕೃಷ್ಣ, ಸಹಾಯಕ ಪ್ರಾಂತಪಾಲ ರಾಜೇಗೌಡ, ವಲಯ ಸೇನಾನಿ ನಾಗರಾಜ್ ಭಾವಿಕಟ್ಟಿ ಹಾಜರಿದ್ದರು. ಕೆ.ಆರ್.ನಗರ ಕ್ಲಬ್ ಪರವಾಗಿ ಅಧ್ಯಕ್ಷ ಟಿ.ಎನ್.ದಯಾನಂದ, ಕಾರ್ಯದರ್ಶಿ ಕೆ.ಆರ್.ಪುರುಷೋತ್ತಮ, ಖಜಾಂಚಿ ಅಶೋಕಕುಮಾರ್, ಉಪಾಧ್ಯಕ್ಷ ಅರುಣ್ ಬಿ.ನರಗುಂದ ಅವರು ಪ್ರಶಸ್ತಿ ಸ್ವೀಕರಿಸಿದರು.