ಮರಕ್ಕೆ ಬೈಕ್ ಡಿಕ್ಕಿಯಾಗಿ ಸವಾರ ಮೃತ

ಮೃತ ಚಿನ್ನಸ್ವಾಮಿ
ಮೃತ ಚಿನ್ನಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಕೊಳ್ಳೇಗಾಲ ಮುಖ್ಯರಸ್ತೆಯ ಸೇಂಟ್ ನೋರ್ಬರ್ಟ್ ಶಾಲೆ
  • ಮರಕ್ಕೆ ಬೈಕ್ ಡಿಕ್ಕಿ
ತಿ.ನರಸೀಪುರ: ಪಟ್ಟಣದ ಕೊಳ್ಳೇಗಾಲ ಮುಖ್ಯರಸ್ತೆಯ ಸೇಂಟ್ ನೋರ್ಬರ್ಟ್ ಶಾಲೆ ಬಳಿ ಮಂಗಳವಾರ ಮರಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ.
ಪುರಸಭೆಯ ನೀರುಗಂಟಿ, ಹೆಳವರಹುಂಡಿ ಗ್ರಾಮದ ಶಿವಪ್ಪ ಅವರ ಪುತ್ರ ಚಿನ್ನಸ್ವಾಮಿ (58) ಮೃತಪಟ್ಟವ. ಇವರೊಂದಿಗೆ ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ಎಚ್.ಬಿ.ಲೋಕೇಶ್ ಅವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಮೃತ ಚಿನ್ನಸ್ವಾಮಿ ವೋಲಾ ಎಲೆಕ್ಟ್ರಿಕ್ ಬೈಕ್‌ನಲ್ಲಿ ಸೋಮವಾರ ಸಂಜೆ ಕೊಂಗಳ್ಳಿ ಬೆಟ್ಟಕ್ಕೆ ತೆರಳಿ ಮಂಗಳವಾರ ಗ್ರಾಮಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಸೇಂಟ್ ನೋರ್ಬರ್ಟ್ ಶಾಲೆ ಹತ್ತಿರ ರಸ್ತೆಯ ಎಡಭಾಗದ ಫುಟ್‌ಪಾತ್‌ನಲ್ಲಿದ್ದ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಚಿನ್ನಸ್ವಾಮಿ ಅವರ ಮುಖ ಮತ್ತು ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಕೂಡಲೇ ಅವರನ್ನು ತಿ.ನರಸೀಪುರಕ್ಕೆ ಕರೆತಂದು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಮೈಸೂರಿನ ಅಪೋಲೋ ಆಸ್ಪತ್ರೆ ಗೆ ಕರೆದೊಯ್ಯಲಾಯಿತು.ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತನ ಪತ್ನಿ ಮಹೇಶ್ವರಿ ನೀಡಿದ ದೂರನ್ನು ದಾಖಲಿಸಿಕೊಂಡಿರುವ ಪಟ್ಟಣ ಠಾಣೆ ಪೋಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತ ಸ್ಥಳಕ್ಕೆ ಸಿಪಿಐ ಧನಂಜಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net