ನಿವೃತ್ತ ಡಿವೈಎಸ್ಪಿ ಶಾಂತಮಲ್ಲಪ್ಪಗೆ ಸನ್ಮಾನ

ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಡಿವೈಎಸ್ಪಿ ಶಾಂತಮಲ್ಲಪ್ಪ ಭಾನುವಾರ ಮೈಸೂರು ನಗರದಲ್ಲಿ ಸನ್ಮಾನಿಸಲಾಯಿತು.  ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಡಾ.ಎ.ಎನ್. ಪ್ರಕಾಶ್ ಗೌಡ, ಎಂ. ಮುತ್ತುರಾಜ್, ಎಂ.ಕೆ. ಕೆಂಪೇಗೌಡ,  ತಾಯಮ್ಮ, ಶಾಂತ ಹಾಗೂ ಇತರರು
ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಡಿವೈಎಸ್ಪಿ ಶಾಂತಮಲ್ಲಪ್ಪ ಭಾನುವಾರ ಮೈಸೂರು ನಗರದಲ್ಲಿ ಸನ್ಮಾನಿಸಲಾಯಿತು. ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಡಾ.ಎ.ಎನ್. ಪ್ರಕಾಶ್ ಗೌಡ, ಎಂ. ಮುತ್ತುರಾಜ್, ಎಂ.ಕೆ. ಕೆಂಪೇಗೌಡ, ತಾಯಮ್ಮ, ಶಾಂತ ಹಾಗೂ ಇತರರು
Published on
ಮೈಸೂರು: ಶಾಂತಮಲ್ಲಪ್ಪ ಸ್ನೇಹ ಬಳಗ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಡಿವೈಎಸ್ಪಿ ಶಾಂತಮಲ್ಲಪ್ಪ ಅವರನ್ನು ಸನ್ಮಾನಿಸಲಾಯಿತು.
ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಮಾಲೋಚಕ ಎಂ.ಕೆ. ಕೆಂಪೇಗೌಡ ಮಾತನಾಡಿ, ಸರ್ಕಾರಿ ಅಧಿಕಾರಿಯಾಗಿ ಯಶಸ್ವಿಯಾಗಿ ಸೇವೆಯನ್ನು ಪೂರ್ಣಗೊಳಿಸುವುದು ಸವಾಲಿನ ವಿಚಾರ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಹಲವಾರು ಸವಾಲುಗಳು ಎದುರಾಗುತ್ತದೆ. ಆದರೆ, ಶಾಂತಮಲ್ಲಪ್ಪ ಅವರು ಎಲ್ಲ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ ತಮ್ಮ ಸೇವೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೂಲತಃ ಹಾಸನದವರಾದ ಶಾಂತಮಲ್ಲಪ್ಪ ಅವರು ಉನ್ನತ ಶಿಕ್ಷಣ ಪಡೆಯಲು ಮೈಸೂರಿಗೆ ಆಗಮಿಸಿದ ಸಂದರ್ಭ ನಗರದ ಕೆ.ಎಚ್. ರಾಮಯ್ಯ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಯಾಗಿದ್ದರು. ಈ ವಿಚಾರವನ್ನು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಈ ವಿದ್ಯಾರ್ಥಿ ನಿಲಯದ ಹಲವಾರು ವಿದ್ಯಾರ್ಥಿಗಳು ಉನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ, ಕೆಲವರು ವಿದ್ಯಾರ್ಥಿ ನಿಲಯವನ್ನು ನೆನೆಸಿಕೊಳ್ಳುವುದಿಲ್ಲ. ಅದರೆ, ಶಾಂತಮಲ್ಲಪ್ಪ ವಿದ್ಯಾರ್ಥಿ ನಿಲಯವನ್ನು ಸದಾ ನೆನೆಸಿಕೊಳ್ಳುತ್ತಾರೆ. ಇದು ಅವರ ದೊಡ್ಡ ಗುಣ ಎಂದು ಹೇಳಿದರು.
ಶ್ರೀ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ, ಮಂಗಳೂರಿನ ಸ್ಪೆಷಲ್ ಆಕ್ಷನ್ ಫೋರ್ಸ್‌ನ ಡಿಐಜಿಪಿ ಡಾ.ಎ.ಎನ್. ಪ್ರಕಾಶ್ ಗೌಡ, ಚಾಮರಾಜನಗರ ಎಸ್ಪಿ ಎಂ. ಮುತ್ತುರಾಜ್, ಉದ್ಯಮಿ ಬಾಲಾಜಿ ಶೇಖರ್, ಕೆ.ಎಚ್. ರಾಮಯ್ಯ ವಿದ್ಯಾರ್ಥಿ ನಿಲಯದ ಧರ್ಮದರ್ಶಿ ಕೆ.ಟಿ. ಕೃಷ್ಣಪ್ಪ, ಶಾಂತಮಲ್ಲಪ್ಪ ಅವರ ತಾಯಿ ತಾಯಮ್ಮ, ಪತ್ನಿ ಶಾಂತ ಹಾಗೂ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net