ಮಹಿಳೆಯರ ಸಾಧನೆಗಳನ್ನು ಗೌರವಿಸಿ: ಸುವರ್ಣ ಅಭಿಮತ

ನೇಗಿಲಯೋಗಿ ಮಹಿಳಾಕ್ಷೇಮಾಬಿವೃದ್ಧಿ ಸಂಘದಿಂದ ನಗರದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ವೀಣಾ ಅಶೋಕ್, ಡಾ.ಎಂ.ಪಿ.ಮೋನಿಕಾ ಅವರನ್ನು ಸನ್ಮಾನಿಸಲಾಯಿತು. ಡಾ.ಕಮಲಾ, ಗೌರಿಹರೀಶ್‌ಗೌಡ, ಸುವರ್ಣ, ಉಷಾರಾಣಿ, ಕೆ.ಕೆ.ಅನಿತಾ, ಅನಿತಾ ಹೇಮಂತ್, ಪ್ರತಿಮಾ, ಲಲಿತಾ, ಲತಾ, ಸವಿತಾ, ಗೌರಿ, ಶಾಂತಾ, ವಿದ್ಯಾ ಇತರರು ಇದ್ದರು

Published on

ಪ್ರಮುಖ ಮುಖ್ಯಾಂಶಗಳು

  • ಮಹಿಳೆಗೆ ಸಬಲೀಕರಣ, ಸಮಾನತೆ ಮತ್ತು ಶಿಕ್ಷಣ ಇಂದು ಅಗತ್ಯ
  • ಪ್ರತಿವರ್ಷ ದಿನಾಚರಣೆ ಮೂಲಕ ಮಹಿಳೆಯನ್ನು ಗೌರವಿಸಲಾಗುತ್ತಿದೆ
ಮೈಸೂರು: ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದಿಂದ ನಗರದಲ್ಲಿ ಇತ್ತೀಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾದ ಅಧ್ಯಾಪಕಿ ಡಾ.ಕಮಲಾ ಮಾತನಾಡಿ ಮಹಿಳಾ ಸಬಲೀಕರಣದ ಮಹತ್ವ, ಸಮಾನತೆ ಮತ್ತು ಶಿಕ್ಷಣದ ಅಗತ್ಯತೆಯ ಬಗ್ಗೆ ಪ್ರೇರಣಾದಾಯಕ ಮಾತುಗಳನ್ನು ಹಂಚಿಕೊಂಡರು.
ಸಂಘದ ಅಧ್ಯಕ್ಷೆ ಸುವರ್ಣ ಮಾತನಾಡಿ, ಮಹಿಳೆಯರ ಸಾಧನೆಗಳನ್ನು ಗೌರವಿಸುವದರ ಜತೆಗೆ ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಸ್ಮರಿಸುವ ಉದ್ದೇಶದಿಂದ ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ಮಹಿಳಾ ದಿನಾಚರಣೆ ಆಯೋಜಿಸಿಕೊಂಡು ಬರಲಾಗುತ್ತಿದೆ.
ಚಾಮರಾಜ ಶಾಸಕ ಹರೀಶಗೌಡ ಅವರ ಪತ್ನಿ ಗೌರಿ ಅವರು ಅತಿಥಿಯಾಗಿ ಆಗಮಿಸಿದ್ದರು. ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷೆ ಉಷಾರಾಣಿ, ಉಪಾಧ್ಯಕ್ಷೆ ಕೆ.ಕೆ.ಅನಿತಾ, ಕಾರ್ಯಧ್ಯಕ್ಷೆ ಅನಿತಾ ಹೇಮಂತ್, ಖಜಾಂಚಿ ಪ್ರತಿಮಾ, ನಿರ್ದೇಶಕರಾದ ಲಲಿತಾ, ಲತಾ, ಸವಿತಾ, ಗೌರಿ, ಶಾಂತಾ, ವಿದ್ಯಾ ಇತರರು ಇದ್ದರು.
ಕಾರ್ಯಕ್ರಮದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೈಕಲ್ ಯಾತ್ರೆ ಮಾಡಿದ ವೀಣಾ ಅಶೋಕ್, ಡಾ.ಎಂ.ಪಿ.ಮೋನಿಕಾ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸ್ಪರ್ಧೆಗಳಲ್ಲಿ ಗೆದ್ದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net