ಮೈಸೂರು ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಜ್ಞಾನಪ್ರಕಾಶ್ ಆರೋಪ

 ತಿ.ನರಸೀಪುರ ಪಟ್ಟಣದ ಡಾ. ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರೆಯಲಾಗಿದ್ದ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿರುವ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ಬಿ.ಕೆ. ಜ್ಞಾನಪ್ರಕಾಶ್ ಮಾತನಾಡಿದರು. ಎಸ್.ಎನ್. ಸಿದ್ದಾರ್ಥ, ಸೋಸಲೆ ಮಹದೇವಸ್ವಾಮಿ, ಎಸ್.ಆರ್.ಶಶಿಕಾಂತ್, ಆಲಗೂಡು ಶಿವಕುಮಾರ್, ಎಂ.ಚಂದ್ರಶೇಖರ, ಎಸ್. ನಂಜುಂಡಯ್ಯ ಇತರರು ಇದ್ದರು.
ತಿ.ನರಸೀಪುರ ಪಟ್ಟಣದ ಡಾ. ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರೆಯಲಾಗಿದ್ದ ಬೆಂಗಳೂರು ಫ್ರೀಡಂ ಪಾರ್ಕ್ ನಲ್ಲಿ ಆಯೋಜಿಸಿರುವ ಬೃಹತ್ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಸಹಾಯಕ ಪ್ರಾಧ್ಯಾಪಕ ಡಾ. ಬಿ.ಕೆ. ಜ್ಞಾನಪ್ರಕಾಶ್ ಮಾತನಾಡಿದರು. ಎಸ್.ಎನ್. ಸಿದ್ದಾರ್ಥ, ಸೋಸಲೆ ಮಹದೇವಸ್ವಾಮಿ, ಎಸ್.ಆರ್.ಶಶಿಕಾಂತ್, ಆಲಗೂಡು ಶಿವಕುಮಾರ್, ಎಂ.ಚಂದ್ರಶೇಖರ, ಎಸ್. ನಂಜುಂಡಯ್ಯ ಇತರರು ಇದ್ದರು.
Published on
ತಿ.ನರಸೀಪುರ: ಅವೈಜ್ಞಾನಿಕವಾಗಿ ಜಾತಿ ಜನಗಣತಿ ನಡೆಸುವ ಮೂಲಕ ಬಲಗೈ ಸಮುದಾಯವನ್ನು ಸಾಮಾಜಿಕ ಹಾಗೂ ರಾಜಕೀಯವಾಗಿ ಮೂಲೆಗುಂಪು ಮಾಡಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಮೈಸೂರು ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಬಿ.ಕೆ.ಜ್ಞಾನಪ್ರಕಾಶ್ ಆರೋಪಿಸಿದರು.
ನ್ಯಾಯಮೂರ್ತಿ ನಾಗಮೋಹನ ದಾಸ್ ಆಯೋಗ ನೀಡಿರುವ ವರದಿ ತಿರಸ್ಕರಿಸುವಂತೆ ಆಗ್ರಹಿಸಿ ಮಾ.25 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಬಲಗೈ ಜಾತಿಗಳ ಒಕ್ಕೂಟದಿಂದ ಆಯೋಜಿಸಿರುವ ಬೃಹತ್ ಪ್ರತಿಭಟನೆಯ ಪೂರ್ವಭಾವಿಯಾಗಿ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ಬಲಗೈ ಸಮುದಾಯವನ್ನು ತುಳಿಯುವ ಹುನ್ನಾರದಲ್ಲಿ ನ್ಯಾ.ನಾಗಮೋಹನದಾಸ್ ಶಾಮೀಲಾಗಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು, ಸಿದ್ದರಾಮಯ್ಯ ಸಿಎಂ ಆಗಲು ಪ.ಜಾತಿ ಕಾರಣ. ಬಲಗೈ ಸಮುದಾಯ ಶೇ.80 ರಷ್ಟು ಮತ ಕೊಟ್ಟಿದೆ. ಚಾಮುಂಡೇಶ್ವರಿ ಕ್ಷೇತ್ರದ ಉಪಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ವಿ.ಶ್ರೀನಿವಾಸಪ್ರಸಾದ್ ಅವರು ಇಲ್ಲದಿದ್ದರೆ ಅಂದೇ ಸಿದ್ದರಾಮಯ್ಯ ಮೂಲೆಗುಂಪಾಗುತ್ತಿದ್ದರು. ಇಂತಹವರ ರಾಜಕೀಯ ಬೆಳವಣಿಗೆಗೆ ಕಾರಣವಾದ ಸಮುದಾಯಕ್ಕೆ ಒಳಮೀಸಲಾತಿಯಲ್ಲಿ ವಂಚಿಸುತ್ತಿರುವ ಕ್ರಮ ದ್ರೋಹದ ಕೆಲಸ. ಸರ್ಕಾರದ ಅನ್ಯಾಯ ಖಂಡಿಸಿ ಮಾ.25ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, 2 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ. ತಾಲೂಕಿನಿಂದ 5 ಸಾವಿರ ಜನರು ಆಗಮಿಸಬೇಕೆಂದು ಮನವಿ ಮಾಡಿದರು.
ಹಿರಿಯ ಮುಖಂಡ ಸೋಸಲೆ ಮಹದೇವಸ್ವಾಮಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ಖಾತೆಯನ್ನು ಮಾದಿಗ ಸಮುದಾಯದ ಘಟಾನುಘಟಿ ರಾಜಕಾರಣಿಗಳು ನಿರ್ವಹಿಸಿದ್ದಾರೆ. ಈಗಿನ ಸರ್ಕಾರದಲ್ಲಿ ಅವರೇ ಇದ್ದಿದ್ದರೆ ಬಲಗೈ ಸಂಬಂಧಿತ ಜಾತಿಗಳನ್ನು ಸಂಪೂರ್ಣವಾಗಿ ಮೀಸಲಾತಿಯಿಂದ ದೂರ ಇಟ್ಟಿರುತ್ತಿದ್ದರು ಎಂದರು.
ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ ಮಾತನಾಡಿ, ಒಳಮೀಸಲಾತಿಯ ಜಾರಿಯಲ್ಲಿ ರಾಜ್ಯದ ಹೊಲಯ ಸಮುದಾಯಕ್ಕೆ ಅನ್ಯಾಯವಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಡುವುದಿಲ್ಲ ಎಂಬ ನಂಬಿಕೆ ಕೊನೆಗೂ ಹುಸಿಯಾಗಿದೆ ಎಂದು ದೂರಿದರು. ಪ್ರಬಲವಾದ ಹೋರಾಟದ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚರಿಸಬೇಕಾಗಿದೆ ಎಂದು ತಿಳಿಸಿದರು.
ಮುಖಂಡರಾದ ಕೆ.ಎನ್. ಪ್ರಭುಸ್ವಾಮಿ, ಆಲಗೂಡು ಚಂದ್ರಶೇಖರ, ಸಿದ್ಧಾರ್ಥ, ಸೋಸಲೆ ಮಹದೇವಸ್ವಾಮಿ, ಕುಕ್ಕೂರು ಗಣೇಶ, ಶಶಿಕಾಂತ ಸೋಸಲೆ, ನಂಜುಂಡಯ್ಯ, ಪರಶಿವಮೂರ್ತಿ, ಮಂಟೇಸ್ವಾಮಿ, ರಾಜು, ನೀಲಸೋಗೆ ಕುಮಾರ ಇನ್ನಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net