ಸಂಶೋಧನಾ ಪ್ರಬಂಧಗಳು ಸಮಾಜದ ಮೇಲೆ ಪರಿಣಾಮ ಬೀರುವಂತಿರಲಿ : ಡಾ.ಎಚ್.ಬಸವನಗೌಡಪ್ಪ

 ಮೈಸೂರು ನಗರದ ಶಿವರಾತ್ರೀಶ್ವರ ನಗರದ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಡಾ.ರಾಜೇಂದ್ರ ಸಭಾಂಗಣದಲ್ಲಿ ಬುಧವಾರ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗಾಗಿ  ಆಯೋಜಿಸಿದ್ದ ಇಂಡೆಕ್ಷನ್ ಕಾರ್ಯಕ್ರಮವನ್ನು ಸಿಎಫ್‌ಟಿಆರ್‌ಐನ ವಿಜ್ಞಾನಿ ಡಾ.ನಂದಿನಿಶೆಟ್ಟಿ ಉದ್ಘಾಟಿಸಿದರು.  ಡಾ.ಎಚ್.ಬಸವನಗೌಡಪ್ಪ, ಡಾ.ಬಿ.ಮಂಜುನಾಥ್, ಡಾ.ವಿಶಾಲ್ ಕುಮಾರ್ ಗುಪ್ತ, ಎ.ಎಂ.ಸಾಗರ್ ಹಾಗೂ ಇತರರು ಇದ್ದರು.

Published on
ಮೈಸೂರು: ಸಂಶೋಧನಾ ಮಹಾಪ್ರಬಂಧಗಳು ಸಮಾಜದ ಮೇಲೆ ಪರಿಣಾಮ ಬೀರುವಂತೆ ಇರಬೇಕು ಎಂದು ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕ್ಯಾಡೆಮಿಯ ಕುಲಪತಿ ಡಾ.ಎಚ್.ಬಸವನಗೌಡಪ್ಪ ಹೇಳಿದರು.
ನಗರದ ಶಿವರಾತ್ರೀಶ್ವರ ನಗರದ ಜೆಎಸ್‌ಎಸ್ ಫಾರ್ಮಸಿ ಕಾಲೇಜಿನ ಡಾ.ರಾಜೇಂದ್ರ ಸಭಾಂಗಣದಲ್ಲಿ ಬುಧವಾರ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಇಂಡೆಕ್ಷನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಿಎಚ್.ಡಿ ಮಹಾಪ್ರಬಂಧ ಎಷ್ಟು ಪುಟಗಳಿಂದ ಕೂಡಿದೆ ಎಂಬುದು ಮುಖ್ಯವಲ್ಲ. ಅದು ಬೀರುವ ಪರಿಣಾಮ ಅತ್ಯಂತ ಮುಖ್ಯವಾದದ್ದು ಎಂದರು.
ಪಿಎಚ್.ಡಿ ಕೇವಲ ಒಂದು ಪದವಿ ಪಡೆಯುವ ಪ್ರಕ್ರಿಯೆಯಲ್ಲ. ಹೊಸ ಜ್ಞಾನವನ್ನು ಅನ್ವೇಷಿಸುವ, ಮಾನವ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಗೆ ಹೊಸ ಪರಿಹಾರಗಳನ್ನು ಕಂಡುಹಿಡಿಯುವ ಬದ್ಧತೆಯಾಗಿದೆ. ಪಿಎಚ್.ಡಿ ವಿದ್ಯಾರ್ಥಿಗಳು ಕೇವಲ ಸಂಶೋಧಕರಾಗಿರಬಾರದು, ಅವರು ಉತ್ತಮ ಸಂವಹನಕಾರರು, ನಾಯಕರು, ಸಮಸ್ಯೆ ಪರಿಹಾರಕರು, ನವೋದ್ಯಮಿಗಳು ಮತ್ತು ಜವಾಬ್ದಾರಿಯುತ ಜಾಗತಿಕ ನಾಗರಿಕರಾಗಬೇಕು ಎಂದು ಹೇಳಿದರು.
ನಾವೀನ್ಯತೆ ಇಲ್ಲದ, ಬೇರೆಯವರ ಕೆಲಸವನ್ನು ಅನುಸರಿಸುವ ಸಂಶೋಧನೆಗೆ ಅರ್ಥವಿಲ್ಲ. ಆದ್ದರಿಂದ ಸಂಶೋಧನಾ ವಿದ್ಯಾರ್ಥಿಗಳು ದತ್ತಾಂಶ ಸಂಗ್ರಹಣೆ ಮತ್ತು ವರದಿಯಲ್ಲಿ ಪ್ರಾಮಾಣಿಕತೆ ಹೊಂದರಬೇಕು. ಸಂಶೋಧನೆಯನ್ನು ಹೇಗಾದರೂ ಪೂರ್ಣಗೊಳಿಸಬೇಕೆಂಬ ಮನೋಭಾವ ಇಟ್ಟುಕೊಳ್ಳಲೇಬಾರದು ಎಂದರು.
ಸಿಎಫ್‌ಟಿಆರ್‌ಐನ ವಿಜ್ಞಾನಿ ಡಾ.ನಂದಿನಿಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಜೆಎಸ್‌ಎಸ್-ಎಎಚ್‌ಇಆರ್ ಕುಲಸಚಿವ ಡಾ.ಬಿ.ಮಂಜುನಾಥ್, ಡೀನ್ ಡಾ.ವಿಶಾಲ್ ಕುಮಾರ್ ಗುಪ್ತ, ಅಂತರಾಷ್ಟ್ರೀಯ ಶೈಕ್ಷಣಿಕ ತಜ್ಞ ಎ.ಎಂ.ಸಾಗರ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net