ಬಿರ್ಸಾ ಮುಂಡಾ ಕುರಿತು ಸಂಶೋಧನೆ ಅಗತ್ಯ

ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮವನ್ನು ಎಂಎಲ್‌ಸಿ ಸಿ.ಎನ್.ಮಂಜೇಗೌಡ ಉದ್ಘಾಟಿಸಿದರು. ಟಿ.ಯೋಗೇಶ್, ಡಾ.ರಾಜಕುಮಾರ್, ಸುರೇಶ್ ರೆಡ್ಡಿ, ಡಾ.ಪಿ.ಶಿವರಾಜು, ರಾಜಶೇಖರ ಮೂರ್ತಿ, ಗಿರಿಜಾಂಬ, ಬಿ.ರಂಗೇಗೌಡ  ಪಾಲ್ಗೊಂಡಿದ್ದರು.
ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಬಿರ್ಸಾ ಮುಂಡಾ ಜಯಂತಿ ಕಾರ್ಯಕ್ರಮವನ್ನು ಎಂಎಲ್‌ಸಿ ಸಿ.ಎನ್.ಮಂಜೇಗೌಡ ಉದ್ಘಾಟಿಸಿದರು. ಟಿ.ಯೋಗೇಶ್, ಡಾ.ರಾಜಕುಮಾರ್, ಸುರೇಶ್ ರೆಡ್ಡಿ, ಡಾ.ಪಿ.ಶಿವರಾಜು, ರಾಜಶೇಖರ ಮೂರ್ತಿ, ಗಿರಿಜಾಂಬ, ಬಿ.ರಂಗೇಗೌಡ ಪಾಲ್ಗೊಂಡಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿರ್ಸಾ ಮುಂಡಾ ಅವರ 150ನೇ ಜಯಂತಿ
  • ಪ್ರಧಾನಮಂತ್ರಿ ಜನಜಾತೀಯ ಆದಿವಾಸಿ ನ್ಯಾಯಮಹಾ ಗೌರವ ದಿವಸ ಅಭಿಯಾನ ಕಾರ್ಯಕ್ರಮ
  • ಬುಡಕಟ್ಟು ಜನಾಂಗದ ಹಕ್ಕುಗಳಿಗಾಗಿ ಬಿರ್ಸಾ ಮುಂಡಾ ಆಗಿನ ಕಾಲದಲ್ಲೇ ಹೋರಾಟ
ಮೈಸೂರು: ಬ್ರಿಟಿಷ್ ಆಳ್ವಿಕೆ ಮತ್ತು ಶೋಷಣೆಯ ವಿರುದ್ಧ ಹೋರಾಡಿದ ಬಿರ್ಸಾ ಮುಂಡಾ ಕುರಿತು ಹೆಚ್ಚಿನ ಸಂಶೋಧನೆ ಅಗತ್ಯ ಇದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಕೇರ್ಗಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬಿರ್ಸಾ ಮುಂಡಾ ಅವರ 150ನೇ ಜಯಂತಿ, ಪ್ರಧಾನಮಂತ್ರಿ ಜನಜಾತೀಯ ಆದಿವಾಸಿ ನ್ಯಾಯಮಹಾ ಗೌರವ ದಿವಸ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. 
ಬುಡಕಟ್ಟು ಜನಾಂಗದ ಹಕ್ಕುಗಳಿಗಾಗಿ ಬಿರ್ಸಾ ಮುಂಡಾ ಆಗಿನ ಕಾಲದಲ್ಲೇ ಹೋರಾಟ ನಡೆಸಿದ್ದರು. ಅವರ ಕೊಡುಗೆ ಬುಡಕಟ್ಟು ಜನಾಂಗಕ್ಕೆ ಅಪಾರವಾಗಿದೆ. ಈಗಿನ ಯುವ ಜನರು ಇವರ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಬೇಕು ಎಂದು ಹೇಳಿದರು.
ಅತ್ಯಂತ ತಳಮಟ್ಟದ ಬುಡಕಟ್ಟು ಸಮುದಾಯದಿಂದ ಬಂದ ಬಿರ್ಸಾ ಮುಂಡಾ ಅವರು ಉತ್ತಮ ನಾಯಕರಾದರು. ಅವರ ತತ್ವಾದರ್ಶವನ್ನು ಅನುಸರಿಸಬೇಕಿದೆ. ಯಾರು ಸಹ ಹುಟ್ಟಿದ ತಕ್ಷಣ ನಾಯಕರಾಗಲ್ಲ. ಆದರೆ, ಉತ್ತಮ ಶಿಕ್ಷಣದಿಂದ ಉತ್ತಮ ನಾಯಕರಾಗಲು ಸಾಧ್ಯ ಎಂದರು.
ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ 33 ಬಹುಉಪಯೋಗಿ ಕಟ್ಟಡ ನಿರ್ಮಾಣ ಮಾಡಲಾಗಿದ್ದು 4 ಕಟ್ಟಡಗಳು ಪೂರ್ಣಗೊಂಡಿದ್ದು, ಅವುಗಳ ಲೋಕಾರ್ಪಣೆ ಮಾಡಲಾಯಿತು. ಪದ್ಮಶ್ರೀ ಪುರಸ್ಕೃತರಾದ ಅಮೈ ಮಹಾಲಿಂಗ ನಾಯ್ಕ ಹಾಗೂ ಸೋಮಣ್ಣ ಅವರನ್ನು ಗೌರವಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ದೆಹಲಿ ಬುಡಕಟ್ಟು ನಿವಾಸಿಗಳ ಸಚಿವಾಲಯದ ನಿರ್ದೇಶಕ ಶಿವಾನಂದ ಬಚಗುಂಡಿ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಟಿ.ಯೋಗೇಶ್, ಜಂಟಿ ನಿರ್ದೇಶಕರಾದ ಡಾ. ರಾಜಕುಮಾರ್, ಸುರೇಶ್‌ರೆಡ್ಡಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜಶೇಖರಮೂರ್ತಿ, ಗಿರಿಜಾಂಬ, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಬಿ.ರಂಗೇಗೌಡ ಇದ್ದರು. ಬುಡಕಟ್ಟು ಸಮುದಾಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮನರಂಜಿಸಿದವು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net