ಮೈಸೂರಿನಲ್ಲಿ ಗಣರಾಜ್ಯೋತ್ಸವ ಸಡಗರ

ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ 77ನೇ ಗಣರಾಜ್ಯೋತ್ಸವ
ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ 77ನೇ ಗಣರಾಜ್ಯೋತ್ಸವ
Published on

ಪ್ರಮುಖ ಮುಖ್ಯಾಂಶಗಳು

  • ಸಚಿವ ಡಾ.ಎಚ್.ಸಿ.ಮಹದೇವಪ್ಪ ಧ್ವಜವಂದನೆ ಸ್ವೀಕಾರ
  • ಪರೇಡ್‌ನಲ್ಲಿ ಭಾಗಿಯಾದ 26 ತುಕಡಿಗಳು
  • ಪೌರಕಾರ್ಮಿಕರು ಪಥಸಂಚಲನದಲ್ಲಿ ಭಾಗವಹಿಸಿದ್ದು ಈ ಸಲದ ವಿಶೇಷ.
ಮೈಸೂರು: ಜಿಲ್ಲಾಡಳಿತದ ವತಿಯಿಂದ ನಗರದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ 77ನೇ ಗಣರಾಜ್ಯೋತ್ಸವ ಅದ್ದೂರಿಯಾಗಿ ಸೋಮವಾರ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿದರು. ಬಳಿಕ ನಡೆದ ಪರೇಡ್‌ನಲ್ಲಿ ಭಾಗಿಯಾದ 26 ತುಕಡಿಗಳು ಗಮನ ಸೆಳೆದವು. 
ಮೈಸೂರಿಗೆ ಸ್ವಚ್ಛ ನಗರಿ ಎಂದು ಹೆಸರು ಬರಲು ಕಾರಣೀಭೂತರಾದ ಪೌರಕಾರ್ಮಿಕರು ಪಥಸಂಚಲನದಲ್ಲಿ ಭಾಗವಹಿಸಿದ್ದು ಈ ಸಲದ ವಿಶೇಷ. 
ಜತೆಗೆ, ಪೊಲೀಸ್ ಇಲಾಖೆ, ಕೆಎಸ್‌ಆರ್‌ಪಿ ತುಕಡಿ, ಗೃಹರಕ್ಷಕ ದಳ, ಅಬಕಾರಿ ಇಲಾಖೆ, ಅಗ್ನಿಶಾಮಕ ದಳ, ಎನ್‌ಸಿಸಿ, ಭಾರತೀಯ ಸೇವಾದಳ, ಸ್ಕೌಟ್ಸ್ ಮತ್ತು ಗೈಡ್ಸ್, ವಿವಿಧ ಶಾಲಾ, ಕಾಲೇಜುಗಳ ಮಕ್ಕಳಿಂದ ಆಕರ್ಷಕ ಪಥಸಂಚಲನ ನಡೆಯಿತು.
ಬಹುಮಾನ ವಿಜೇತರು: ಪಥಸಂಚನಲದಲ್ಲಿ ಸಶಸ್ತ್ರ ಪಡೆ ವಿಭಾಗದಲ್ಲಿ ಡಿಎಆರ್-1, ಸಿಎಆರ್-2, ಕೆಎಸ್‌ಆರ್‌ಪಿ-3ನೇ ಬಹುಮಾನ, ನಿಶಸ್ತ್ರ ಪಡೆಯ ವಿಭಾಗದಲ್ಲಿ ಎನ್‌ಸಿಸಿ(ಭೂದಳ)-1, ಎನ್‌ಸಿಸಿ(ವಾಯುದಳ)-2, ಎನ್‌ಸಿಸಿ(ನೌಕಾದಳ) 3ನೇ ಸ್ಥಾನ ಗಿಟ್ಟಿಸಿಕೊಂಡಿತು. ಶಾಲಾ ವಿಭಾಗದಲ್ಲಿ ಪೊಲೀಸ್ ಪಬ್ಲಿಕ್ ಶಾಲೆ-1, ನವೋದಯ ಶಾಲೆ-2, ಭಾರತ ಸೇವಾ ದಳ-3ನೇ ಬಹುಮಾನ ಪಡೆಯಿತು. ಪಾಲಿಕೆ ಪೌರಕಾರ್ಮಿಕರಿಗೆ, ಸಿಎಆರ್ ಸಂಗೀತ ವಾದ್ಯಕ್ಕೆ ವಿಶೇಷ ಬಹುಮಾನ ದೊರೆಯಿತು.

ಗಮನ ಸೆಳೆದ ಸಾಂಸ್ಕೃತಿಕ ಕಲರವ: 

ಟೆರಿಷಿಯನ್ ಕಾನ್ವೆಂಟ್ ಬಾಲಕಿಯರ ಪ್ರೌಢಶಾಲೆಯ 300 ಮಕ್ಕಳಿಂದ ನಮೋ ನಮೋ ಭಾರತಾಂಬೆ ಹಾಡಿಗೆ ನೃತ್ಯ ಮಾಡಿ ರಂಜಿಸಿದರು. 
ಮಹಾಬೋಧಿ ಶಾಲೆ 210 ಮಕ್ಕಳಿಂದ ‘ಆತ್ಮ ನಿರ್ಭರ್ ಭಾರತ’ ನೃತ್ಯ ಪ್ರದರ್ಶನ ನೀಡಿದ್ದರೆ, ಡಿಎವಿ ಪಬ್ಲಿಕ್ ಶಾಲೆಯ 135 ಮಕ್ಕಳಿಂದ ವಿವಿಧತೆಯಲ್ಲಿ ಏಕತೆ ದೇಶ ಭಕ್ತಿ ಗೀತೆಗೆ ನೃತ್ಯ ಪ್ರದರ್ಶನದ ಮೂಲ ಏಕತೆಯ ಸಂದೇಶ ಸಾರಿದರು. ಕ್ಯಾಪಿಟಲ್ ಪಬ್ಲಿಕ್ ಶಾಲೆಯ 200 ಮಕ್ಕಳಿಂದ ವಂದೇ ಮಾತರಂ ದೇಶ ಭಕ್ತಿಗೀತೆಗೆ ಹೆಜ್ಜೆ ಹಾಕಿದರು.
2025ರ ಎಸ್ಸೆಸ್ಸೆಲ್ಸಿಯಲ್ಲಿ ಜಿಲ್ಲಾ, ತಾಲೂಕಿನ ಟಾಪರ್ ಆಗಿರುವ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಲಾಯಿತು. ಅಂಗಾಂಗ ದಾನ ಮಾಡಿದ ರಾಜೇಶ್ ಕುಟುಂಬಕ್ಕೆ ಪ್ರಶಂಸನಾ ಪತ್ರವನ್ನು ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net