ಬಾಬಾ ಸಾಹೇಬರ ಹೋರಾಟದಿಂದಲೇ ಪ್ರಾತಿನಿಧ್ಯ ಸಿಕ್ಕಿದೆ

ಸರಗೂರು ತಾಲೂಕಿನ ಸಮೀಪದ ಹುಲಿಕುರ ಗ್ರಾಮದಲ್ಲಿ ಶುಕ್ರವಾರ ಅಂಬೇಡ್ಕರ್ ಭವನ ಉದ್ಘಾಟಿಸಿ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು. ನರಸಿಂಹಮೂರ್ತಿ, ಪರಶಿವಮೂರ್ತಿ, ಶಿವರಾಜು, ಅಂಕನಾಯಕ ಇತರರು ಇದ್ದರು.
ಸರಗೂರು ತಾಲೂಕಿನ ಸಮೀಪದ ಹುಲಿಕುರ ಗ್ರಾಮದಲ್ಲಿ ಶುಕ್ರವಾರ ಅಂಬೇಡ್ಕರ್ ಭವನ ಉದ್ಘಾಟಿಸಿ ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿದರು. ನರಸಿಂಹಮೂರ್ತಿ, ಪರಶಿವಮೂರ್ತಿ, ಶಿವರಾಜು, ಅಂಕನಾಯಕ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Babasaheb's
ಸರಗೂರು: ಯಾವತ್ತೂ ಮನುಷ್ಯನಿಗೆ ಜಾತಿ ಮುಖ್ಯವಲ್ಲ, ಪ್ರೀತಿ ಮುಖ್ಯ ಎನ್ನುವುದನ್ನು ಕ್ಷೇತ್ರದ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ತಾಲೂಕಿನ ಸಮೀಪದ ಹುಲಿಕುರ ಗ್ರಾಮದಲ್ಲಿ ಶುಕ್ರವಾರ ಬಾಬಾ ಸಾಹೇಬ್ ಅಂಬೇಡ್ಕರ್ 135ನೇ ಜಯಂತಿ ಹಾಗೂ ಅಂಬೇಡ್ಕರ್ ಭವನವನ್ನು ಉದ್ಘಾಟಿಸಿ ಮಾತನಾಡಿದರು.
ನಾನು ಶಾಸಕರಾಗಿ ಆಯ್ಕೆಯಾಗಿರುವುದೇ ಅಂಬೇಡ್ಕರ್ ಕೊಟ್ಟ ಸಂವಿಧಾನದಿಂದ. ಅವರು ನಮಗಾಗಿ ಹೋರಾಟ ಮಾಡದೆ ಇದ್ದಿದ್ದರೆ ನಮಗೆ ಸರಿಯಾದ ಪ್ರಾತಿನಿಧ್ಯವೇ ಸಿಗುತ್ತಿರಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಿಂದೆ ಚಹಾ ಮಾರಿಕೊಂಡು ಜೀವನ ಮಾಡುತ್ತಿದ್ದರು. ಅಂಬೇಡ್ಕರ್ ಕೊಟ್ಟಂತಹ ಸಂವಿಧಾನದಿಂದಲೇ ಅವರು ಪ್ರಧಾನಿಯಾಗಿದ್ದಾರೆ ಎಂದು ತಿಳಿಸಿದರು.
ಅಂಬೇಡ್ಕರ್ ಒಂದು ಸಮಾಜಕ್ಕೆ ಸೀಮಿತವಾಗಿಲ್ಲ. ಅವರು ಎಲ್ಲರಿಗೂ ಗೌರವಯುತ ಜೀವನ ಸಾಗಿಸುವ ಅವಕಾಶ ಕಲ್ಪಿಸಿಕೊಟ್ಟ ಮಹಾನ್ ವ್ಯಕ್ತಿ. ಅವರ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು ಎಂದರು.
ಪುರಸಭೆ ಸದಸ್ಯ ಹಾಗೂ ಧ್ರುವನಾರಾಯಣ ಅಭಿಮಾನಿಗಳ ಬಳಗದ ಅಧ್ಯಕ್ಷ ಎಚ್.ಸಿ. ನರಸಿಂಹಮೂರ್ತಿ ಮಾತನಾಡಿ, ಕ್ಷೇತ್ರದಲ್ಲಿ 152 ಗ್ರಾಮಗಳಿವೆ, 58,000 ಮತದಾರರಿದ್ದಾರೆ. ತಾಲೂಕು ಸಾಕಷ್ಟು ಹಿಂದುಳಿದಿತ್ತು. ಧ್ರುವನಾರಾಯಣ ಮತ್ತು ಚಿಕ್ಕಮಾದು ಅವರ ಸತತ ಪರಿಶ್ರಮದಿಂದ ತಾಲೂಕಿನ ಇತಿಹಾಸವೇ ಬದಲಾಯಿತು ಎಂದು ಹೇಳಿದರು.
ಗ್ರಾಮದ ಮುಖಂಡ ಮೋಹನ್ ರಾಜ್ ಮಾತನಾಡಿದರು. ಗ್ರಾಪಂ ಮಾಜಿ ಉಪಾಧ್ಯಕ್ಷ ನಂಜುಂಡಸ್ವಾಮಿ, ರಮೇಶ್ ಕುಮಾರ್, ನಿವೃತ್ತ ಶಿಕ್ಷಕ ಮೋಹನ್ ರಾಜ್, ಗಂಗಾಧರ್, ಇಂಜಿನಿಯರ್ ಸುಪ್ರೀತ್, ಪಿಡಿಒ ಪ್ರಭಾಕರ್, ಮುಖಂಡರಾದ ನಂಜುಂಡೇಗೌಡ, ಚಿಕ್ಕ ಬಸವಪ್ಪ, ಪರಶಿವಮೂರ್ತಿ, ಅಂಕನಾಯಕ, ಚಾಮರಾಜು, ಮುದ್ದು ಮಲ್ಲಯ್ಯ, ಮಲ್ಲೇಶ್, ನಂದೀಶ್, ಸ್ವಾಮಿ, ಮಹದೇವ, ಕಂದೇಗಾಲ ಶಿವರಾಜು ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net