ಕೊಳ್ಳೆಗಾಲ ಡಿವೈಎಸ್‌ಪಿ ಧಮೇರ್ಂದ್ರ ಮಾತನಾಡಿ, ಹುಟ್ಟು ಮತ್ತು ಸಾವಿನ ನಡುವಿನ ಜೀವನದಲ್ಲಿ ಮಾಡಿದ ಸಮಾಜಸೇವೆ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ಆ ದಾರಿಯಲ್ಲಿ ವಕೀಲ ವೆಂಕಟೇಶ್ ಅವರು ನಡೆದು ಸಮಾಜಕ್ಕೆ ಮಾದರಿಯಾಗಿದ್ದಾರೆ. ದೇವಸ್ಥಾನ ನಿರ್ಮಾಣದ ಜತೆಗೆ ಸರ್ಕಾರದಿಂದ ಅನುದಾನ ತರಿಸಿ ರಸ್ತೆ ಅಭಿವೃದ್ಧಿಗೆ ಕೈಜೋಡಿಸಿರುವುದು ಶ್ಲಾಘನೀಯ. ಅಲ್ಲದೆ, ವೆಂಕಟೇಶ್ ಅವರ ತಂದೆ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ನೀಡಿರುವುದು ಸ್ಮರಣೀಯ ಎಂದರು.