ಮೈಸೂರಿನಲ್ಲಿ ರೆಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

 ಮೈಸೂರು ನಗರದ ಮಾನಸಗಂಗೋತ್ರಿಯ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಿರುವ ಕಾರ್ಪೊರೇಟ್ ರೆಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಉಪ ಪೊಲೀಸ್ ಆಯುಕ್ತ ಕೆ.ಎಸ್. ಸುಂದರ್‌ರಾಜ್ ಚಾಲನೆ ನೀಡಿದರು. ಬಾಲಾಜಿ, ಎಂ.ಆರ್. ಸತ್ಯನಾರಾಯಣ,  ಡಾ.ಶಿರಿಶ್, ಡಾ. ಲ್ಯೂರ್ಡೊ  ಪ್ರಸಾದ್ ಜೋಸೆಫ್, ಕೀರ್ತಿ, ವಿವೇಕ್, ರಾಜು ಹಾಗೂ ಇತರರು ಇದ್ದರು.
ಮೈಸೂರು ನಗರದ ಮಾನಸಗಂಗೋತ್ರಿಯ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಿರುವ ಕಾರ್ಪೊರೇಟ್ ರೆಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಉಪ ಪೊಲೀಸ್ ಆಯುಕ್ತ ಕೆ.ಎಸ್. ಸುಂದರ್‌ರಾಜ್ ಚಾಲನೆ ನೀಡಿದರು. ಬಾಲಾಜಿ, ಎಂ.ಆರ್. ಸತ್ಯನಾರಾಯಣ, ಡಾ.ಶಿರಿಶ್, ಡಾ. ಲ್ಯೂರ್ಡೊ ಪ್ರಸಾದ್ ಜೋಸೆಫ್, ಕೀರ್ತಿ, ವಿವೇಕ್, ರಾಜು ಹಾಗೂ ಇತರರು ಇದ್ದರು.
Published on
ಮೈಸೂರು: ಮೈಸೂರಿನ ಏಕೈಕ ಲೈವ್ ರೇಡಿಯೋ ಸ್ಟೇಷನ್ ಸೂಪರ್ ಹಿಟ್ಸ್ 93.5 ರೆಡ್ ಎಫ್‌ಎಂ ನಗರದ ಮಾನಸಗಂಗೋತ್ರಿಯ ಕ್ರಿಕೆಟ್ ಮೈದಾನದಲ್ಲಿ ನಾಡಿನ ನಂ.1 ಕನ್ನಡ ದೈನಿಕ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ಮೂರು ದಿನಗಳ ಕಾಲ ಆಯೋಜಿಸಿರುವ ಕಾರ್ಪೊರೇಟ್ ರೆಡ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಶುಕ್ರವಾರ ಚಾಲನೆ ದೊರೆಯಿತು.
ಪಂದ್ಯಾವಳಿಗೆ ಚಾಲನೆ ನೀಡಿದ ಉಪ ಪೊಲೀಸ್ ಆಯುಕ್ತ ಕೆ.ಎಸ್. ಸುಂದರ್‌ರಾಜ್ ಮಾತನಾಡಿ, ಕಾರ್ಪೋರೇಟ್ ಕ್ಷೇತ್ರದಲ್ಲಿ ಕೆಲಸ ಮಾಡುವವರು ಹೆಚ್ಚಿನ ಒತ್ತಡದಲ್ಲಿ ಇರುತ್ತಾರೆ. ಅವರ ಒತ್ತಡ ನಿವಾರಣೆ ಮಾಡಲು ಕ್ರೀಡೆ ಸಹಕಾರಿಯಾಗಲಿದೆ. ಎಲ್ಲರನ್ನು ಕ್ರೀಡಾ ಚಟುವಟಿಕೆಯಲ್ಲಿ ತೊಡಗುವಂತೆ ಮಾಡುವ ಉದ್ದೇಶದಿಂದ ರೆಡ್ ಎಫ್‌ಎಂ-93.5 ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಸಂತಸದ ವಿಚಾರ. ಕ್ರೀಡೆಯಿಂದ ಕ್ರೀಡಾಸ್ಫೂರ್ತಿ ಬೆಳೆಯುವುದು ಮಾತ್ರವಲ್ಲದೆ ಪ್ರತಿಯೊಬ್ಬರ ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲೂ ಕ್ರೀಡೆ ಸಹಕಾ ರಿಯಾಗಿದೆ ಎಂದು ಅಭಿಪ್ರಾಯಪ್ಟಟರು.
ಫೀನಿಕ್ಸ್ ಸುಜುಕಿಯ ಎಂಡಿ ಬಾಲಾಜಿ ಮಾತನಾಡಿ, ಕಾರ್ಪೋರೇಟ್ ಕ್ಷೇತ್ರದಲ್ಲಿ ದುಡಿಯುವ ಉದ್ಯೋಗಿಗಳು ಸದಾ ಒತ್ತಡದಲ್ಲಿ ಇರುತ್ತಾರೆ. ಅವರ ಒತ್ತಡ ನಿವಾರಿಸಲು ಕ್ರೀಡೆಯು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ವಿಜಯವಾಣಿ ದೈನಿಕ ಮೈಸೂರು ಸ್ಥಾನಿಕ ಸಂಪಾದಕ ಎಂ.ಆರ್. ಸತ್ಯನಾರಾಯಣ ಮಾತನಾಡಿ, ರೆಡ್ ಎಫ್‌ಎಂ-93.5 ಕ್ರಿಯಾಶೀಲತೆಗೆ ಮತ್ತೊಂದು ಹೆಸರು. ರೆಡ್ ಎಫ್‌ಎಂ-93.5 ಜನಮಾನಸದಲ್ಲಿ ಉಳಿಯುವ ಹಲವಾರು ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗಿರಬೇಕು. ಇದಕೋಸ್ಕರ ನಿತ್ಯ ಒಂದಿಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ರೆಡ್ ಎಫ್‌ಎಂ-93.5 ದೇಶದ ಅತ್ಯಂತ ಜನಪ್ರಿಯ ಕ್ರೀಡೆಯಾದ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.
ಅವಾಂಟ್ ಬಿ ಕೆ ಜಿ ಆಸ್ಪತ್ರೆಯ ಡಾ.ಶಿರಿಶ್ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಕ್ರೀಡೆ ಎಂಬುದು ಅತ್ಯಂತ ಮುಖ್ಯವಾದದ್ದು. ರೆಡ್ ಎಫ್‌ಎಂ-93.5 ಹಲವು ವರ್ಷಗಳಿಂದ ರೆಡ್ ಪ್ರೀಮಿಯರ್ ಲೀಗ್ ಆಯೋಜಿಸುತ್ತಾ ಬಂದಿರುವುದು ಶ್ಲಾಘನೀಯ ವಿಚಾರ. ಪಂದ್ಯಾವಳಿ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ಸಂತ ಫಿಲೋಮಿನಾ ಕಾಲೇಜಿನ ರೆಕ್ಟರ್ ಫಾದರ್ ಡಾ. ಲ್ಯೂರ್ಡೊ ಪ್ರಸಾದ್ ಜೋಸೆಫ್ ಮಾತನಾಡಿ, ಸಂತ ಫಿಲೋಮಿನಾ ಕಾಲೇಜು 8 ದಶಕಗಳ ಚರಿತ್ರೆ ಹೊಂದಿದ್ದು, ಈ ವಿದ್ಯಾಸಂಸ್ಥೆಯು 1946ರಲ್ಲಿ ಅಂದಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಉದ್ಘಾಟಿಸಿದರು. 80 ವರ್ಷಗಳಲ್ಲಿ ನಮ್ಮ ವಿದ್ಯಾಸಂಸ್ಥೆ ಹೆಮ್ಮೆರವಾಗಿ ಬೆಳೆದಿದೆ ಎಂದರು.
ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿರುವ ಸುಪ್ತ ಪ್ರತಿಭೆ ಹೊರ ತರಲು ಕ್ರೀಡೆಯು ಸಹಕಾರಿಯಾಗಿದೆ. ಮೈಸೂರು ವಿಶ್ವ ವಿದ್ಯಾಲಯ ಹೊರತು ಪಡಿಸಿದರೆ ಅತ್ಯಂತ ದೊಡ್ಡದಾದ ಕ್ರೀಡಾ ಮೈದಾನವನ್ನು ಹೊಂದಿರುವ ಕಾಲೇಜು ನಮ್ಮದು. ಸಂತ ಫಿಲೋಮಿನಾ ಕಾಲೇಜು ಸದಾ ಕ್ರೀಡೆಗೆ ಉತ್ತೇಜನ ನೀಡುತ್ತಾ ಬರುತ್ತಿದೆ ಎಂದು ಹೇಳಿದರು.
ಆರ್ಕೋರ್ ಹೋಟೆಲ್ ಪ್ರತಿನಿಧಿ ಕೀರ್ತಿ ಮಾತನಾಡಿ, ನಗರದಲ್ಲಿ ಇತ್ತೀಚೆಗೆ ಆರ್ಕೋರ್ ಹೋಟೆಲ್ ಪ್ರಾರಂಭಗೊಂಡಿದ್ದು, 5ಸ್ಟಾರ್ ಸೌಲಭ್ಯ ಹೊಂದಿರುವ ಹೋಟೆಲ್ ಇದಾಗಿದೆ. ರೆಡ್ ಎಫ್‌ಎಂ-93.5 ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
ಚಿರಾಗ್ ಆ್ಯಡ್ಸ್ ಆ್ಯಂಡ್ ಇವೆಂಟ್‌ನ ಎಂಡಿ ವಿವೇಕ್ ಪಂದ್ಯಾವಳಿಗೆ ಶುಭ ಹಾರೈಸಿದರು ಹಾಗೂ ಮೇಘ ಜನರೇಟರ್ಸ್ ಎಂಡಿ ರಾಜು ಶುಭ ಹಾರೈಸಿದರು
ಈ ಒಂದು ಕಾರ್ಪೊರೇಟ್ ಕ್ರಿಕೆಟ್ ಪಂದ್ಯಾವಳಿಗೆ ಸಹಕರಿಸಿದ ಗಣ್ಯರಿಗೆ ಹಾಗೂ ಪ್ರಾಯೋಜಕರಿಗೆ ರೆಡ್ ಎಫ್‌ಎಂ-93.5 ಸಂಸ್ಥೆಯ ಬಿಸಿನೆಸ್ ಹೆಡ್ ಸುರೇಶ್ ಗಣೇಶನ್ ಧನ್ಯವಾದ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net