ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ರೆಡ್‌ಕ್ರಾಸ್ : ಪ್ರೊ.ರೇಖಾ ಕೆ. ಜಾದವ್
ಮೈಸೂರಿನ ಮಹಾರಾಜ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದಿಂದ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜ್ಯಾಮಿತಿ ಪೆಟ್ಟಿಗೆ ಮತ್ತು ಪುಸ್ತಕ ವಿತರಣೆ ಮಾಡಲಾಯಿತು. ಪ್ರೊ.ರೇಖಾ ಕೆ. ಜಾದವ್, ಡಾ. ಶ್ವೇತಾ ಎಂ. ಹನ್ಸ್, ಡಾ. ಬಿ.ಎಸ್.ದಿನಮಣಿ, ಡಾ. ಸೋಮಲತಾ, ಪುನೀತ್, ದಿನೇಶ್ ರಾವ್ ಹಾಗೂ ಇತರರು ಇದ್ದರು.
ಮೈಸೂರು: ಸಮಾಜದ ಅಂಚಿನಲ್ಲಿರುವವರು, ಮುಖ್ಯವಾಹಿನಿಯಿಂದ ಹೊರಗುಳಿದವರು ಮತ್ತು ನಿರ್ಲಕ್ಷಿತರೆಡೆಗೆ ಸಹಾನುಭೂತಿ ಹೊಂದುವುದು ಅಗತ್ಯ. ಈ ನಿಟ್ಟಿನಲ್ಲಿ ರೆಡ್‌ಕ್ರಾಸ್ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದು ಮಹಾರಾಜ ಕಾಲೇಜಿನ ಯೂತ್ ರೆಡ್‌ಕ್ರಾಸ್ ಘಟಕದ ಸಂಚಾಲಕಿ ಪ್ರೊ.ರೇಖಾ ಕೆ. ಜಾದವ್ ಹೇಳಿದರು.
ನಗರದ ಮಹಾರಾಜ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕ ತಂಡ ಇತ್ತೀಚೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮದ್ದೂರು ಕಾಲೋನಿಯ ಸರ್ಕಾರಿ ಬುಡಕಟ್ಟು ವಾಲ್ಮೀಕಿ ಆಶ್ರಮ ಶಾಲೆ ಮತ್ತು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು.
ಯೂತ್ ರೆಡ್ ಕ್ರಾಸ್ ಘಟಕದಿಂದ ಎರಡೂ ಶಾಲೆಗಳಿಗೆ ಜ್ಯಾಮಿತಿ ಪೆಟ್ಟಿಗೆ ಮತ್ತು ಪುಸ್ತಕ ವಿತರಣೆ ಮಾಡಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಂತರ ಜಾಥಾ ನಡೆಸಿ ಆರೋಗ್ಯ, ಶಿಕ್ಷಣ ಹಾಗೂ ಪರಿಸರದ ಕುರಿತು ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭ ಯೂತ್ ರೆಡ್ ಕ್ರಾಸ್ ಘಟಕದ ಸದಸ್ಯರಾದ ಡಾ. ಶ್ವೇತಾ ಎಂ. ಹನ್ಸ್, ಡಾ. ಬಿ.ಎಸ್.ದಿನಮಣಿ, ಡಾ. ಸೋಮಲತಾ, ಪುನೀತ್, ದಿನೇಶ್ ರಾವ್, ಅಭಿಷೇಕ್, ಅಧ್ಯಾಪಕರಾದ ಡಾ. ಕಲ್ಯಾಣ ಕುಮಾರಿ, ಡಾ. ರೋಹಿಣಿ, ಡಾ.ಬಿ.ಕೆ. ಸುವರ್ಣದೇವಿ ಇದ್ದರು.