ಹಾಡಿಯಲ್ಲಿ ಸೋಮವಾರ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಹಾಡಿ ಗ್ರಾಮಸಭೆಯ ಕಾರ್ಯಚಟುವಟಿಕೆಗಳಿಗೆ ವೇಗ ತರಲು ಮತ್ತು ಅಭಿವೃದ್ಧಿ ಕಾರ್ಯಗಳ ನಿರ್ವಹಣೆ, ಮೇಲ್ವಿಚಾರಣೆ ಮುಂತಾದ ಕಾರ್ಯಗಳಿಗೆ ಅನುಕೂಲವಾಗುವಂತೆ ಪ್ರತಿ ಹಾಡಿಯಲ್ಲೂ ಹಾಡಿ ಉಸ್ತುವಾರಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈಗಾಗಲೇ ಹೆಮ್ಮಿಗೆ ಹಾಡಿ, ಬೀರತಮ್ಮನಹಳ್ಳಿ ಹಾಡಿ ಹಾಗೂ ಕರಣಕುಪ್ಪೆ ಹಾಡಿಗಳನ್ನೊಳಗೊಂಡು ಒಟ್ಟು 750 ಹೆಕ್ಟೇರ್ ಭೂಪ್ರದೇಶಕ್ಕೆ ಸರ್ಕಾರ ಸಾಮೂಹಿಕ ಹಕ್ಕು ಮಂಜೂರು ಮಾಡಿದೆ. ಈ ಭೂಮಿಯ ಅಭಿವೃದ್ಧಿ ಕಾರ್ಯಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ವರ್ಷದ ಹಿಂದೆ ಅರಣ್ಯ ಇಲಾಖೆಗೆ ಕೆರೆಗಳನ್ನು ನಿರ್ಮಿಸಲು ಕೋರಲಾಗಿತ್ತು. ಇದೀಗ ಇಲಾಖೆ ಈ ಪ್ರದೇಶದಲ್ಲಿ ಮೂರು ಕೆರೆಗಳನ್ನು ನಿರ್ಮಿಸಿಕೊಟ್ಟಿದ್ದು ಮುಂಬರುವ ಮಳೆಗಾಲದಲ್ಲಿ ನೀರು ತುಂಬುವ ಸಾಧ್ಯತೆ ಇದೆ. ಇದಕ್ಕಾಗಿ ಉಸ್ತುವಾರಿ ಸಮಿತಿ ರಚಿಸಿ ಆಯಾ ಹಾಡಿಗಳ ಅಭಿವೃದ್ಧಿ ಕಡೆ ಗಮನಹರಿಸಲು ಕ್ರಮವಹಿಸಲಾಗಿದ್ದು, ತಾಲೂಕಿನಾದ್ಯಂತ ಹಾಡಿಗಳ ಉಸ್ತುವಾರಿ ಸಮಿತಿ ರಚಿಸಲಾಗುವುದೆಂದರು.