ಆರೋಗ್ಯ ಹಕ್ಕಿಗೆ ಆಗ್ರಹಿಸಿ ಮೈಸೂರಿನಲ್ಲಿ ಜಾಥಾ

 ಕೊಳಚೆ ಪ್ರದೇಶಗಳ ಮಹಿಳಾ ಒಕ್ಕೂಟದಿಂದ ಗುರುವಾರ ಮೈಸೂರಿನಲ್ಲಿ ಆರೋಗ್ಯ ಹಕ್ಕಿಗೆ ಒತ್ತಾಯಿಸಿ ಜಾಥಾ ನಡೆಯಿತು.
ಕೊಳಚೆ ಪ್ರದೇಶಗಳ ಮಹಿಳಾ ಒಕ್ಕೂಟದಿಂದ ಗುರುವಾರ ಮೈಸೂರಿನಲ್ಲಿ ಆರೋಗ್ಯ ಹಕ್ಕಿಗೆ ಒತ್ತಾಯಿಸಿ ಜಾಥಾ ನಡೆಯಿತು.
Published on
ಮೈಸೂರು: ಕೊಳಚೆ ಪ್ರದೇಶಗಳ ಮಹಿಳಾ ಒಕ್ಕೂಟ ಹಾಗೂ ಡ್ರಗ್ ಎಕ್ಷನ್ ಫೋರಂ ವತಿಯಿಂದ ನಗರದಲ್ಲಿ ಆರೋಗ್ಯ ಹಕ್ಕಿನ ಹಕ್ಕೊತ್ತಾಯ ಆಂದೋಲನದ ಭಾಗವಾಗಿ ಗುರುವಾರ ಜಾಥಾ ನಡೆಯಿತು.
ನಜರ್‌ಬಾದ್‌ನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ ಬಳಿಯಿಂದ ಪ್ರಾರಂಭಗೊಂಡ ಜಾಥಾ ಮೈಮುಲ್ ಡೇರಿ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಂತ್ಯಗೊಂಡಿತು. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಔಷಧಗಳು ದೊರೆಯುವಂತೆ ಮಾಡಬೇಕು, ರಾಜ್ಯದಲ್ಲಿ ಆರೋಗ್ಯ ಹಕ್ಕಿನ ಕಾಯ್ದೆ ಜಾರಿಗೊಳಿಸಬೇಕು, ಖಾಸಗಿ ಆಸ್ಪತ್ರೆಗಳಲ್ಲಿ ಅತಿಯಾದ ಶುಲ್ಕ ಹೇರುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆಯಾಗಿದೆ. ಹಾಗಾಗಿ ಎಲ್ಲ ಖಾಸಗಿ ಆಸ್ಪತ್ರೆಗಳ ಶುಲ್ಕಗಳ ಮೇಲೆ ಮಿತಿ ಹಾಕುವ ಕಾರ್ಯವನ್ನು ಸರ್ಕಾರ ಮಾಡಬೇಕು, ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣವನ್ನು ಸಂಪೂರ್ಣವಾಗಿ ಕೈ ಬಿಡಬೇಕು ಎಂದು ಒತ್ತಾಯಿಸಲಾಯಿತು. ಜಾಥಾದಲ್ಲಿ ಒಕ್ಕೂಟದ ಅಧ್ಯಕ್ಷ ಆರ್. ದಾಸು, ಕಾರ್ಯದರ್ಶಿ ಯತಿರಾಜ್ ಹಾಗೂ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net