ರಾವಂದೂರಿನಲ್ಲಿ ರಾಗಿ ಖರೀದಿ ಕೇಂದ್ರ ಉದ್ಘಾಟನೆ

ರಿಯಾಪಟ್ಟಣ ತಾಲೂಕು ರಾವಂದೂರಿನಲ್ಲಿ ಇತ್ತೀಚೆಗೆ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿದ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್.
ರಿಯಾಪಟ್ಟಣ ತಾಲೂಕು ರಾವಂದೂರಿನಲ್ಲಿ ಇತ್ತೀಚೆಗೆ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿದ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್.
Published on
ರಾವಂದೂರು: ರೈತರು ತಾವು ಬೆಳೆದ ಉತ್ತಮ ಗುಣಮಟ್ಟದ ರಾಗಿಯನ್ನು ಮಾರುಕಟ್ಟೆಗೆ ಸಾಗಿಸಬೇಕು ಎಂದು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ರಾವಂದೂರಿನಲ್ಲಿ ಇತ್ತೀಚೆಗೆ ರಾಗಿ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಈ ಬಾರಿ ರಾಗಿಗೆ ಉತ್ತಮ ದರ ನಿಗದಿ ಮಾಡಿದೆ. ಪ್ರತಿ ಕ್ವಿಂಟಲ್‌ಗೆ 4886ರೂ.ಗಳನ್ನು ನಿಗದಿ ಮಾಡಿದ್ದು, ರೈತರು ಗುಣಮಟ್ಟದ ರಾಗಿಯನ್ನು ಖರೀದಿ ಕೇಂದ್ರಕ್ಕೆ ನೀಡಬೇಕು. ಯಾವುದೇ ರೀತಿ ದಲ್ಲಾಳಿಗಳ ಮೂಲಕ ರೈತರು ರಾಗಿಯನ್ನು ನೀಡಬಾರದು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ಮಾಜಿ ಜಿಪಂ ಸದಸ್ಯ ಎಸ್.ಟಿ.ರಾಜಶೇಖರ್, ತಾಪಂ ಮಾಜಿ ಸದಸ್ಯ ಆರ್.ಸಿ.ಚಂದ್ರು, ಮುಖಂಡರಾದ ಡಿ.ಎಸ್.ನಂದೀಶ್, ಚಂದ್ರೇಗೌಡ, ಕಿರಂಗೂರು ಮಂಜುನಾಥ್, ಜಿಲ್ಲಾ ರಾಗಿ ಖರೀದಿ ವ್ಯವಸ್ಥಾಪಕ ಕಿರಣ್, ತಾಲೂಕು ಆಹಾರ ನಿರೀಕ್ಷಕ ಸಣ್ಣಸ್ವಾಮಿ, ಖರೀದಿ ಕೇಂದ್ರದ ಮೇಲ್ವಿಚಾರಕಿ ಗೀತಾ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net