ಸಮಸ್ಯೆಗಳನ್ನು ಸಹಿಸಿಕೊಳ್ಳದೆ ಪ್ರಶ್ನಿಸಿ : ಮೈಸೂರು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್
ಮಾನಸಗಂಗೋತ್ರಿಂು ವಿಜ್ಞಾನ ಭವನದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಂು ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನಗರ ಪೊಲೀಸ್ ಆಂುುಕ್ತರಾದ ಸೀಮಾಲಾಟ್ಕರ್ ಉದ್ಘಾಟಿಸಿದರು. ಪ್ರೊ.ಎನ್.ಕೆ.ಲೋಕನಾಥ್, ಪ್ರೊ.ಎನ್.ನಾಗರಾಜು, ಜೆ.ಶಿಲ್ಪಾ, ಪ್ರೊ.ಎಂ.ಪುಷ್ಪಾ, ಡಾ.ಜ್ಯೋತಿ ಉಮೇಶ್ ಇದ್ದರು.
ಮೈಸೂರು: ಮಹಿಳೆಯರು ತಮಗೆ ಎದುರಾಗುವ ಹಲವು ಸಮಸ್ಯೆಗಳನ್ನು ಸಹಿಸಿಕೊಳ್ಳುವ ಬದಲು ಪ್ರಶ್ನಿಸುವ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಂುದ ಮಹಿಳಾ ಅಧ್ಯಂುನ ಕೇಂದ್ರ ಮತ್ತು ಆಡಳಿತ ಸಿಬ್ಬಂದಿ ವರ್ಗದ ವತಿಯಿಂದ ವಾನಸಗಂಗೋತ್ರಿಂು ವಿಜ್ಞಾನ ಭವನದಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಂು ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ವಾತ ನಾಡಿ, ಸಮಸ್ಯೆಗಳನ್ನು ಸಹಿಸಿಕೊಳ್ಳುವ ಗುಣವನ್ನು ಅತಿಯಾಗಿ ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ. ಈ ರೀತಿ ಸಹಿಸಿಕೊಳ್ಳುವುದೇ ದಿನಚರಿಂಾದರೆ ಅದೇ ಜೀವನ ವಿಧಾನವಾಗುವ ಅಪಾಯ ಇದೆ. ಇದು ವೈಂುಕ್ತಿಕ ಹಾಗೂ ಸಾವಾಜಿಕವಾಗಿ ಅಪಾಂುಕಾರಿ ಎಂದು ಹೇಳಿದರು.
ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಕುಟುಂಬ ಮತ್ತು ವೃತ್ತಿಂುಲ್ಲಿ ತೊಡಗುವ ಮಹಿಳೆಯರು ಹಲವಾರು ಆರೋಗ್ಯವನ್ನು ನಿರ್ಲಕ್ಷಿಸಬಾರದು. ನಿಂುಮಿತವಾಗಿ ಆರೋಗ್ಯ ತಪಾಸಣೆಗೆ ಆದ್ಯತೆ ನೀಡಬೇಕು. ಆರೋಗ್ಯದ ಜತೆಗೆ ತಮ್ಮ ರಕ್ಷಣೆಗೆ ಇರುವ ಕಾನೂನುಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಎಂದರು.
ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್.ನಾಗರಾಜು, ಸಿಂಡಿಕೇಟ್ ಸದಸ್ಯೆ ಜೆ.ಶಿಲ್ಪಾ, ಅಧ್ಯಂುನ ಕೇಂದ್ರದ ಅಧ್ಯಕ್ಷೆ ಪ್ರೊ.ಎಂ.ಪುಷ್ಪಾ, ಪ್ರಸೂತಿ ತಜ್ಞೆ ಡಾ.ಜ್ಯೋತಿ ಉಮೇಶ್ ಇದ್ದರು.