ಆಯಿಷ್'ನಲ್ಲಿ ‘ಪುನರ್ಜೀವನ್’ ಘಟಕ ಕಾರ್ಯಾರಂಭ

 ಮೈಸೂರು ನಗರದ ಆಯಿಷ್‌ನಲ್ಲಿ ಪ್ರಾರಂಭಿಸಿರುವ ‘ಪುನರ್ಜೀವನ್’ ಸುಧಾರಿತ ನರ ಪುನರ್ವಸತಿ ಘಟಕವನ್ನು ರಾಜವಂಶಸ್ಥೆ ತ್ರಿಷಿಕಾಕುಮಾರಿ ಒಡೆಯರ್ ವೀಕ್ಷಿಸಿದರು. ಡಾ.ಎಂ.ಪುಷ್ಪವತಿ ಸೇರಿದಂತೆ ಇತರರಿದ್ದರು.
ಮೈಸೂರು ನಗರದ ಆಯಿಷ್‌ನಲ್ಲಿ ಪ್ರಾರಂಭಿಸಿರುವ ‘ಪುನರ್ಜೀವನ್’ ಸುಧಾರಿತ ನರ ಪುನರ್ವಸತಿ ಘಟಕವನ್ನು ರಾಜವಂಶಸ್ಥೆ ತ್ರಿಷಿಕಾಕುಮಾರಿ ಒಡೆಯರ್ ವೀಕ್ಷಿಸಿದರು. ಡಾ.ಎಂ.ಪುಷ್ಪವತಿ ಸೇರಿದಂತೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಒಡೆಯರ್ ಉದ್ಘಾಟನೆ

ಮೈಸೂರು: 

ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯಲ್ಲಿ ‘ಪುನರ್ಜೀವನ್’ ಸುಧಾರಿತ ನರ ಪುನರ್ವಸತಿ ಘಟಕ ಕಾರ್ಯಾರಂಭಗೊಂಡಿದೆ.

ಇದು ಪಾರ್ಶ್ವವಾಯು, ಮಿದುಳಿನ ಗಾಯ, ಮಿದುಳು ಮತ್ತು ನರ ಕ್ಯಾನ್ಸರ್‌ಗಳು, ಬುದ್ಧಿಮಾಂದ್ಯತೆ, ಇತರ ನರಕ್ಕೆ ಸಂಬಂಧಿಸಿದಂತಹ ಅನಾರೋಗ್ಯ ಪೀಡಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಘಟಕ ಇದಾಗಿದ್ದು, ಸಂಸ್ಥೆಯ ವಾರ್ಷಿಕೋತ್ಸವ ಅಂಗವಾಗಿ ಸೋಮವಾರ ರಾಜವಂಶಸ್ಥೆ ತ್ರಿಷಿಕಾ ಕುಮಾರಿ ಒಡೆಯರ್ ಉದ್ಘಾಟಿಸಿದರು. ಸಂಸ್ಥೆಯ ನಿರ್ದೇಶಕಿ ಡಾ.ಎಂ.ಪುಷ್ಪವತಿ ಸೇರಿದಂತೆ ಇತರರಿದ್ದರು.
ಭಾರತದಲ್ಲಿ ಮೊದಲ ಬಾರಿಗೆ ಸಂಯೋಜಿತ ತಂತ್ರಜ್ಞಾನದೊಂದಿಗೆ ಸಕ್ರಿಯಗೊಳಿಸಿದ ನರ ಪುನರ್ವಸತಿ ಸೌಲಭ್ಯವನ್ನು ಇಲ್ಲಿ ಕಲ್ಪಿಸಲಾಗಿದೆ. ಇದು ಬಹುಶಿಸ್ತೀಯ ಕ್ಲಿನಿಕಲ್ ಪರಿಣತಿ, ಅಂತಾರಾಷ್ಟ್ರೀಯ ಮಾನದಂಡದ ಪುನರ್ವಸತಿ ತಂತ್ರಜ್ಞಾನ ಹೊಂದಿದೆ. 
ನರ ಅಸ್ವಸ್ಥತೆಗಳು ಸಾರ್ವಜನಿಕ ಆರೋಗ್ಯದ ಪ್ರಮುಖ ಸವಾಲಾಗಿದೆ. ಜಾಗತಿಕವಾಗಿ 3 ಶತಕೋಟಿಗೂ ಹೆಚ್ಚು ಜನರು ನರ ಅಸ್ವಸ್ಥತೆಯಿಂದ ಬಳಲುತ್ತಿದ್ದಾರೆಂದು ಅಂದಾಜಿಸಲಾಗಿದೆ. ಆದರೆ, 2021ರಲ್ಲಿ ಪಾರ್ಶ್ವವಾಯು ಸಂಬಂಧಿಸಿದಂತೆ ಸುಮಾರು 93.8 ಮಿಲಿಯನ್ ಪ್ರಕರಣ, 11.9 ಮಿಲಿಯನ್ ಹೊಸ ಪ್ರಕರಣಗಳಿವೆ.
 ಬುದ್ಧಿಮಾಂದ್ಯತೆಯು ವಿಶ್ವಾದ್ಯಂತ 57 ಮಿಲಿಯನ್‌ಗಿಂತಲೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತದೆ. ಪ್ರತಿ ವರ್ಷ ಸುಮಾರು 10 ಮಿಲಿಯನ್ ಹೊಸ ಪ್ರಕರಣ ವರದಿಯಾಗುತ್ತವೆ. ಈ ಎಲ್ಲ ಅನಾರೋಗ್ಯ ಸಮಸ್ಯೆಗಳು ಸಂವಹನ, ಅರಿವು, ಚಲನಶೀಲತೆ, ಸಮತೋಲನೆ, ಸ್ವಾವಲಂಬನೆ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜತೆಗೆ, ದೀರ್ಘಕಾಲೀನ ತೊಂದರೆಗಳಿಗೂ ಕಾರಣವಾಗುತ್ತಿವೆ.
ಈ ಹಿನ್ನೆಲೆಯಲ್ಲಿ ಪುನರ್ಜೀವನ್ ಅನ್ನು ಸಮಗ್ರ ಬಹುಶಿಸ್ತೀಯ ಮಾದರಿಯ ಮೂಲಕ ಈ ಸಂಕೀರ್ಣ ಪುನರ್ವಸತಿ ಅಗತ್ಯ ಪರಿಹರಿಸಲು ವಿನ್ಯಾಸಗೊಳಿಸಲಾಗಿದೆ. ಇದು ಸುಧಾರಿತ ಭಾಷಾ ಚಿಕಿತ್ಸೆ, ಭೌತಚಿಕಿತ್ಸೆ, ಔದ್ಯೋಗಿಕ ಚಿಕಿತ್ಸೆ ಮತ್ತು ತಂತ್ರಜ್ಞಾನ ನೆರವಿನ ಪುನರ್ವಸತಿಯನ್ನು ಒಂದೇ ಸಮಗ್ರ ಸೌಲಭ್ಯದಡಿಯಲ್ಲಿ ತರಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net