ಸಂವಿಧಾನದ ಆಶಯಗಳನ್ನು ಈಡೇರಿಸುವುದು ಹಾಗೂ ಕೆಲಸ ವಾಡುವ ಸಂಸ್ಥೆಯಲ್ಲಿ ಪ್ರಾವಾಣಿಕವಾಗಿ ಸೇವೆ ಸಲ್ಲಿಸುವುದೇ ನಿಜವಾದ ಸ್ವಾತಂತ್ರೃ ಎಂದು ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಸುರೇಶ್ ನಾಯ್ಕ ಹೇಳಿದರು.
ಆಲನಹಳ್ಳಿಯಲ್ಲಿರುವ ಮೈಮುಲ್ ಆವರಣದಲ್ಲಿ ಶನಿವಾರ 80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ವಾತನಾಡಿದರು.
ಮೈಮುಲ್‌ನ 1.20 ಲಕ್ಷ ಹಾಲು ಉತ್ಪಾದಕರು ಹಾಗೂ ಅವರ ಕುಟುಂಬಗಳು, ಹಾಲು ವಿತರಣೆ ಲಾರಿ ಮತ್ತು ಟ್ಯಾಂಕರ್ ವಾಲೀಕರು, ಚಾಲಕರು, ಡೇರಿ ಕಾರ್ಯದರ್ಶಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಸುವಾರು 20 ಲಕ್ಷ ಜನರು ಒಕ್ಕೂಟವನ್ನು ಅವಲಂಬಿಸಿದ್ದಾರೆ. ಗ್ರಾಹಕರಿಗೆ ಗುಣಮಟ್ಟದ ಆಹಾರ ಒದಗಿಸುವ ಜವಾಬ್ದಾರಿಯನ್ನು ಪ್ರಾವಾಣಿಕವಾಗಿ ನಿರ್ವಹಿಸುವುದೇ ನಮ್ಮ ಪಾಲಿನ ದೇಶಸೇವೆ ಎಂದರು.
ವಿಕಸಿತ ಭಾರತ-2047ರ ಗುರಿ ಸಾಧನೆಗೆ ಸರ್ಕಾರದ ಯೋಜನೆಗಳು, ಅಭಿವದ್ಧಿ ಕಾರ್ಯಗಳ ಜತೆಗೆ ಪ್ರತಿಯೊಬ್ಬರ ಶ್ರಮವೂ ಅಗತ್ಯ. ಇದಕ್ಕೆ ಪೂರಕವಾಗಿ ಮೈಮುಲ್ ವಾದರಿ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು ಎಂದರು.
ಪ್ರಭಾರ ಪ್ರಧಾನ ವ್ಯವಸ್ಥಾಪಕ (ತಾಂತ್ರಿಕ) ಎಚ್.ಕೆ.ಜಯಶಂಕರ್, ಆಡಳಿತ ವಿಭಾಗದ ಸಿಂಧು, ವಾರುಕಟ್ಟೆ ವಿಭಾಗದ ಎಂ.ಶಂಕರ್, ಹಿರಿಯ ಅಧಿಕಾರಿಗಳಾದ ಎಲ್.ಆರ್. ಕರಿಬಸವರಾಜು, ಚಿನ್ಮಯಾನಂದ ಅರಸ್, ಸಂತೋಷ್, ಡಾ.ಗೌರಿಶಂಕರ್ ಸಾಹು, ಎನ್. ಸೌಮ್ಯಾ, ಬಬಿತಾ, ಲಾವಣ್ಯವತಿ, ಶ್ರುತಿ, ನಂದಿನಿ, ಜಮುನಾ, ನವೀನ್ ಕುವಾರ್, ಆಕಾಶ್, ಚರಣ್ ಇತರರು ಇದ್ದರು.