ಮೈಸೂರು ತಾಲೂಕು ಕಚೇರಿಯಲ್ಲಿ ಲಂಚಾವತಾರ: ಪ್ರತಿಭಟನೆ

   ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯಿಂದ ತಾಲೂಕು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.ಚಾ.ಗು.ನಾಗರಾಜ್, ಸಂತೋಷ್ ಕುಮಾರ್, ಗೌತಮ್ ವಿಶ್ವಕರ್ಮ, ಅನುರಾಜ್‌ಗೌಡ, ಮನುಗೌಡ, ಡಿಪಿಕೆ ಪರಮೇಶ್ ಇನ್ನಿತರರಿದ್ದರು.
ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯಿಂದ ತಾಲೂಕು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಯಿತು.ಚಾ.ಗು.ನಾಗರಾಜ್, ಸಂತೋಷ್ ಕುಮಾರ್, ಗೌತಮ್ ವಿಶ್ವಕರ್ಮ, ಅನುರಾಜ್‌ಗೌಡ, ಮನುಗೌಡ, ಡಿಪಿಕೆ ಪರಮೇಶ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ
  • ಮೈಸೂರು ತಾಲೂಕು ಕಚೇರಿ ಅಧಿಕಾರಿಗಳ ಕೆಲಸ ವಿಳಂಬ ಧೋರಣೆಗೆ ಆಕ್ರೋಶ
ಮೈಸೂರು: ಸಾರ್ವಜನಿಕರ ಕೆಲಸ ಮಾಡಲು ವಿಳಂಬ ಧೋರಣೆ ಅನುಸರಿಸುವ ಮೂಲಕ ಮೈಸೂರು ತಾಲೂಕು ಕಚೇರಿ ಅಧಿಕಾರಿಗಳು ಪರೋಕ್ಷವಾಗಿ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಕನ್ನಡ ರಕ್ಷಣಾ ವೇದಿಕೆಯಿಂದ ಗುರುವಾರ ಪ್ರತಿಭಟನೆ ನಡೆಯಿತು.
ತಾಲೂಕು ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ಗು.ನಾಗರಾಜ್ ಮಾತನಾಡಿ, ಮೈಸೂರು ತಾಲೂಕು ಕಚೇರಿಯಲ್ಲಿ ಲಂಚ ಇಲ್ಲದೆ ಯಾವುದೇ ಕೆಲಸಗಳು ಸುಲಲಿತವಾಗಿ ಆಗುವುದಿಲ್ಲ. 
ಮಧ್ಯವರ್ತಿಗಳ ಮೂಲಕ ಇಂತಹ ಕೆಲಸಕ್ಕೆ ಇಂತಿಷ್ಟು ಹಣ ಎಂದು ಕೊಟ್ಟ ಮೇಲೆ ಮಾತ್ರ ಕೆಲಸಗಳು ಆಗುತ್ತವೆ. ಲಂಚ ಕೊಡಲು ಆಗದ ಸಾರ್ವಜನಿಕರ ಅರ್ಜಿಗಳು ವರ್ಷಗಟ್ಟಲೆ ಕಚೇರಿಯಲ್ಲೇ ಕೊಳೆಯುತ್ತವೆ. ಇದಕ್ಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ಅನೇಕ ಕಾರಣ ಹೇಳಿ ಸಾರ್ವಜನಿಕರನ್ನು ಅಲೆಸುತ್ತಾರೆ. ಹಣ ಕೊಟ್ಟರೆ ಕ್ಷಣಾರ್ಧದಲ್ಲಿ ಕೆಲಸಗಳು ಆಗುತ್ತವೆ ಎಂದು ದೂರಿದರು.
ಜಿಲ್ಲಾ ಅಧ್ಯಕ್ಷ ಸಂತೋಷ್‌ಕುಮಾರ್ ಮಾತನಾಡಿ, ಸಾರ್ವಜನಿಕರ ಕಡತಗಳನ್ನು ಉದ್ದೇಶಪೂರ್ವಕವಾಗಿ ಕಚೇರಿಯಲ್ಲಿಟ್ಟುಕೊಂಡು ವಿಳಂಬ ನೀತಿ ಅನುಸರಿಸುತ್ತಾರೆ. ಕಂದಾಯ ಇಲಾಖೆಯ ಸುತ್ತೋಲೆ ಅರ್ಥೈಸಿಕೊಳ್ಳದೆ ಪೌತಿ ಖಾತೆ, ಜಮೀನು ದುರಸ್ತು, ಪೋಡ್ ಮಾಡುತ್ತಿಲ್ಲ. ಇಲ್ಲಿ ನಾಗರಿಕರಿಗೆ, ರೈತರಿಗೆ ನಿತ್ಯ ಕಿರುಕುಳವಾಗುತ್ತಿದ್ದು, ಲೋಕಾಯುಕ್ತ ಅಧಿಕಾರಿಗಳು, ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಉನ್ನತ ಅಧಿಕಾರಿಗಳು, ಸಚಿವರು ಕೂಡಲೇ ಇತ್ತ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಮನವಿ ಸ್ವೀಕರಿಸಬೇಕೆಂದು ಪಟ್ಟುಹಿಡಿದರು. ಆದರೆ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ಎಂದು ಪೊಲೀಸರು ಮನವೊಲಿಸಿದರು. ಬಳಿಕ ಪ್ರತಿಭಟನಾಕಾರರು, ಡಿಸಿ ಕಚೇರಿತನಕ ಕಾಲ್ನಡಿಗೆ ಜಾಥಾ ನಡೆಸಿ ಮನವಿ ಸಲ್ಲಿಸಿದರು. 
ಅಪರ ಜಿಲ್ಲಾಧಿಕಾರಿ ಡಾ.ಶಿವರಾಜು ಅರ್ಜಿ ಸ್ವೀಕರಿಸಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆಯ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಸಂಘಟನೆಯ ಗೌತಮ್ ವಿಶ್ವಕರ್ಮ, ಅನುರಾಜ್‌ಗೌಡ, ಮನುಗೌಡ, ಹೃದಯವಂತ ಕನ್ನಡಿಗರ ಬಳಗದ ಡಿಪಿಕೆ ಪರಮೇಶ್, ರೈತ ಮುಖಂಡರಾದ ಸಿದ್ದರಾಮ್, ಸಿಂಧುವಳ್ಳಿ, ಶಿವಕುಮಾರ್, ದೇವರಾಜ್, ಕೀರ್ತಿ ಕುಮಾರ್, ಬೆಲವತ್ತ ರಾಮಚಂದ್ರಪ್ಪ, ಚಿಯೋನ್ ಪಾಲ್, ಸಿದ್ದೇಗೌಡ, ಸುನಿಲ್‌ಕುಮಾರ್, ಮಂಜುನಾಥ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net