ಮಠಾಧಿಪತಿಗಳ ಪರವಾಗಿ ಮೈಸೂರಿನಲ್ಲಿ ಪ್ರತಿಭಟನೆ

  ಮಠಾಧಿಪತಿಗಳು, ಧರ್ಮಗುರುಗಳ ವಿರುದ್ಧದ ಅವಹೇಳನಕಾರಿ ಹೇಳಿಕೆ ಖಂಡಿಸಿ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ‘ಸೇವ್ ಹಿಂದೂ ಟೆಂಪಲ್ಸ್’ ಸಂಸ್ಥೆಯಿಂದ ಬುಧವಾರ  ಪ್ರತಿಭಟನೆ ನಡೆಯಿತು.
ಮಠಾಧಿಪತಿಗಳು, ಧರ್ಮಗುರುಗಳ ವಿರುದ್ಧದ ಅವಹೇಳನಕಾರಿ ಹೇಳಿಕೆ ಖಂಡಿಸಿ ಮೈಸೂರಿನ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ‘ಸೇವ್ ಹಿಂದೂ ಟೆಂಪಲ್ಸ್’ ಸಂಸ್ಥೆಯಿಂದ ಬುಧವಾರ ಪ್ರತಿಭಟನೆ ನಡೆಯಿತು.
Published on
ಮೈಸೂರು: ಮಠಾಧಿಪತಿಗಳು ಮತ್ತು ಧರ್ಮಗುರುಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ‘ಸೇವ್ ಹಿಂದೂ ಟೆಂಪಲ್ಸ್’ ಸಂಸ್ಥೆ ವತಿಯಿಂದ ಬುಧವಾರ ಮೌನ ಪ್ರತಿಭಟನೆ ನಡೆಯಿತು.
ಧರ್ಮಗುರುಗಳು ಕೇವಲ ಆಧ್ಯಾತ್ಮಿಕ ಮಾರ್ಗದರ್ಶಕರು ಮಾತ್ರವಲ್ಲ, ಶಿಕ್ಷಣ, ಆರೋಗ್ಯ, ವಸತಿ ಮತ್ತು ದಾಸೋಹ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಅಂತಹ ಸ್ವಾಮೀಜಿಗಳನ್ನು ಅವಹೇಳನ ಮಾಡುವುದು ಖಂಡನೀಯ. ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಮಠಗಳು ನೀಡುತ್ತಿರುವ ಸೇವೆ ಅನನ್ಯವಾಗಿದ್ದು, ಸರ್ಕಾರಗಳು ತಲುಪದ ಸ್ಥಳಗಳಿಗೆ ಮಠಗಳು ಸೇವೆಯನ್ನು ತಲುಪಿಸುತ್ತಿವೆ. ಮಠಾಧಿಪತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳು ಸಮಾಜದ ಶಾಂತಿ ಮತ್ತು ಏಕತೆಗೆ ಧಕ್ಕೆಯಾಗಿವೆ. ಇಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.
‘ಸೇವ್ ಹಿಂದೂ ಟೆಂಪಲ್ಸ್’ ಸಂಸ್ಥೆ ಸಂಸ್ಥಾಪಕ ಎಂ.ಎಂ.ನಿಖಿಲೇಶ್ ಮಾತನಾಡಿ, ಧರ್ಮಗುರುಗಳ ವಿರುದ್ಧ ನಿರಾಧಾರ ಆರೋಪ ಮತ್ತು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದು ಅತ್ಯಂತ ವಿಷಾದನೀಯ. ಇದು ಕೇವಲ ವ್ಯಕ್ತಿಗಳ ವಿರುದ್ಧದ ಅವಮಾನವಲ್ಲ, ಸಂಪೂರ್ಣ ಸಮಾಜದ ಭಾವನೆಗಳಿಗೆ ಧಕ್ಕೆಯಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸಿದರೆ, ನಾವು ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಲ್.ನಾಗೇಂದ್ರ, ಪ್ರಮುಖರಾದ ಸಚ್ಚಿದಾನಂದ, ಸತೀಶ್ ಗೌಡ, ದಿನೇಶ್ ಗೌಡ, ಶೈಲೇಂದ್ರ, ಮಂಜು, ಶಿವು, ರಾಘವೇಂದ್ರ, ಪವನ್ ಗೌಡ, ಮನು ಶೈವ, ಅಭಿ, ಅರ್ಜುನ್, ಸುನೀಲ್ ಜಯಪುರ ಹಾಗೂ ಇತರರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net