ಹಿಂದೂ ಜಾಗರಣಾ ವೇದಿಕೆಯಿಂದ ಮೈಸೂರಿನಲ್ಲಿ ಪ್ರತಿಭಟನೆ

ಐಸಿಸ್ ಭಯೋತ್ಪಾದಕರಿಗೆ ಹಣ ನೀಡುತ್ತಿರುವ ಸಂಘಟನೆಗಳನ್ನು ದೇಶದಲ್ಲಿ ನಿರ್ಬಂಧಿಸಿ ಅಂತಹ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ರಮೇಶ್, ಶ್ರೀನಿಧಿ, ಕುಮಾರ್,ಶಿವರಾಮು ಇತರರಿದ್ದರು.
ಐಸಿಸ್ ಭಯೋತ್ಪಾದಕರಿಗೆ ಹಣ ನೀಡುತ್ತಿರುವ ಸಂಘಟನೆಗಳನ್ನು ದೇಶದಲ್ಲಿ ನಿರ್ಬಂಧಿಸಿ ಅಂತಹ ಸಂಘಟನೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ರಮೇಶ್, ಶ್ರೀನಿಧಿ, ಕುಮಾರ್,ಶಿವರಾಮು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಭಯೋತ್ಪಾದಕರಿಗೆ ಹಣ ನೀಡುವ ಸಂಘಟನೆಗಳ ನಿಷೇಧಕ್ಕೆ ಆಗ್ರಹ
  • ದೇಶದಲ್ಲಿದ್ದುಕೊಂಡು ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವವರ ಸಂಘಟನೆಗಳ ವಿರುದ್ಧ ಗಮನ ಹರಿಸಬೇಕು
ಮೈಸೂರು:ಐಸಿಸ್ ಭಯೋತ್ಪಾದಕರಿಗೆ ಹಣ ನೀಡುತ್ತಿರುವ ಸಂಘಟನೆಗಳನ್ನು ದೇಶದಲ್ಲಿ ನಿರ್ಬಂಧಿಸಿ ಅವುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ಜಾಗರಣಾ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರದ ಗಾಂಧಿವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ದೇಶದಲ್ಲಿದ್ದುಕೊಂಡು ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುತ್ತಿರುವ ಎಲ್ಲ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ವೇದಿಕೆ ಮೈಸೂರು ವಿಭಾಗದ ವಸಂತ್‌ಕುಮಾರ್ ಮಾತನಾಡಿ, ಬೆಂಗಳೂರು ಸೇರಿದಂತೆ ವಿವಿಧ 8 ಕಡೆ ಇಡಿ ದಾಳಿ ನಡೆಸಿ ಸುಮಾರು 56 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅತಂಕಕಾರಿ ಅಂಶ ಹೊರ ಬಿದ್ದಿದೆ. ಇಕ್ರಾ ಮತ್ತು ಜೆಎಂಎಫ್‌ಎಂ ಎಂಬ ಎರಡು ಟ್ರಸ್ಟ್‌ಗಳಿಂದ ಐಸಿಸ್, ಭಯೋತ್ಪಾದಕ ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಹಣ ವರ್ಗಾವಣೆ ಮಾಡಿರುವುದು ಅತಂಕವನ್ನು ಸೃಷ್ಟಿಸಿದೆ ಎಂದರು.
ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಯುವ ಜನರನ್ನು ತಯಾರು ಮಾಡುತ್ತಿರುವ ಸಂಘಟನೆಗಳು, ಈ ಕೃತ್ಯಕ್ಕೆ ನಮ್ಮ ದೇಶ ಅಲ್ಲದೇ, ವಿದೇಶಗಳಿಂದ ಹಣ ಸಂಗ್ರಹ ಮಾಡುತ್ತಿದೆ. ಹೀಗೆ ಬಂದ ಹಣವನ್ನು ವಿವಿಧ ಬ್ಯಾಂಕ್ ಮೂಲಕ ಪಡೆದು, ಯುವಕರಿಗೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ದೇಶದ ಎಲ್ಲ ಮುಸ್ಲಿಂ ಟ್ರಸ್ಟ್, ಕ್ರಿಶ್ಚಿಯನ್ ಮಿಷನರಿ ಟ್ರಸ್ಟ್‌ಗಳನ್ನು ಕೂಡ ಎನ್‌ಐಎ ಮತ್ತೆ ಇಡಿ ಎರಡು ಜಂಟಿ ಕಾರ್ಯಾಚರಣೆ ನಡೆಸಿ ಇಂಚಿಂಚು ಮಾಹಿತಿಗಳನ್ನು ಕಲೆಹಾಕಿ, ಆಂತರಿಕ ಸುರಕ್ಷತೆಗೆ ಯಾವ ರೀತಿ ಧಕ್ಕೆ ತರುತ್ತಿದ್ದಾರೆ ಅದೆಲ್ಲವನ್ನು ಕೂಡ ಹೊರಗೆ ತರಬೇಕು ಎಂದು ಆಗ್ರಹಿಸಿದರು.
ಜಯರಾಮ್ ಜಾಯ್ ಅನ್ನೋ ವ್ಯಕ್ತಿ ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಂಧಿಸಿದಾಗ, ತನಿಖೆ ಕಾಲಕ್ಕೆ ಆತ ಯುಎಸ್‌ಗೆ ಹೋಗಿ ಸಾವಿರ ಡೆಬಿಟ್ ಕಾರ್ಡ್‌ಗಳನ್ನು ತೆಗೆದುಕೊಂಡು ಬಂದು, ಕರ್ನಾಟಕ, ಛತ್ತೀಸ್‌ಗಡ, ಆಂಧ್ರ, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಣ ಡ್ರಾ ಮಾಡಿ ಭಯೋತ್ಪಾದನೆ ಕೃತ್ಯದಲ್ಲಿ ಇರುವವರಿಗೆ ನೀಡಿದ್ದಾನೆ ಎಂದು ಆರೋಪಿಸಿದರು.
ಇಂತಹ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿರುವವರನ್ನು ಹಾಗೂ ದೇಶದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವವನ್ನು ಮಟ್ಟಹಾಕಿ ಭಯೋತ್ಪಾದನೆ ಹಾಗೂ ನಕ್ಸಲ್ ಮುಕ್ತ ಭಾರತ ಮಾಡಬೇಕಿದೆ ಎಂದು ಕೇಂದ್ರವನ್ನು ಆಗ್ರಹಿಸಿದರು.
ಸಂಘಟನೆಯ ರಮೇಶ್, ಶ್ರೀನಿಧಿ, ಕುಮಾರ್, ಶಿವರಾಮು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net