ಅರ್ಹರಿಗೆ ವಸತಿ, ನಿವೇಶನ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ವಸತಿ ರಹಿತರ ಗಣತಿ ಮಾಡಿ ಅರ್ಹರಿಗೆ ವಸತಿ, ನಿವೇಶನ ನೀಡಬೇಕು ಎಂದು ಒತ್ತಾಯಿಸಿ ವಸತಿ ಮತ್ತು ನಿವೇಶನ ರಹಿತರ ಹೋರಾಟ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಸಾತಿ ಸುಂದರೇಶ್, ಎಚ್.ಬಿ.ರಾಮಕೃಷ್ಣ, ಎನ್.ಕೆ.ದೇವದಾಸ್, ಕೆ.ಜಿ.ಸೋಮಶೇಖರ್, ಮುಜಾಹಿದ್ ಪಾಷ, ಸಾದಿಖ್‌ಅಹಮ್ಮದ್, ನಜೀರ್, ಇರ್ಫಾನ್ ಇತರರು ಇದ್ದರು.
ವಸತಿ ರಹಿತರ ಗಣತಿ ಮಾಡಿ ಅರ್ಹರಿಗೆ ವಸತಿ, ನಿವೇಶನ ನೀಡಬೇಕು ಎಂದು ಒತ್ತಾಯಿಸಿ ವಸತಿ ಮತ್ತು ನಿವೇಶನ ರಹಿತರ ಹೋರಾಟ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ಸಾತಿ ಸುಂದರೇಶ್, ಎಚ್.ಬಿ.ರಾಮಕೃಷ್ಣ, ಎನ್.ಕೆ.ದೇವದಾಸ್, ಕೆ.ಜಿ.ಸೋಮಶೇಖರ್, ಮುಜಾಹಿದ್ ಪಾಷ, ಸಾದಿಖ್‌ಅಹಮ್ಮದ್, ನಜೀರ್, ಇರ್ಫಾನ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರಿಯಾಗಿ ಅರ್ಜಿ ಸಲ್ಲಿಸದೆ ಇರುವುದರಿಂದ ಕೇಂದ್ರ ಸರ್ಕಾರ ವಸತಿಗಾಗಿ ಮೀಸಲಿಟ್ಟಿರುವ ಅನುದಾನದ ಸರಿಯಾಗಿ ಬಳಕೆಯಾಗುತ್ತಿಲ್ಲ
  • ಅಧಿಕಾರಿಗಳಿಗೆ ಬಡವರ ಬಗ್ಗೆ ಇರುವ ತಾತ್ಸಾರ ಧೋರಣೆ, ಬೇಜವಾಬ್ದಾರಿತನ ತೋರಿಸುತ್ತದೆ
ಮೈಸೂರು:ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ವಸತಿ ರಹಿತರ ಗಣತಿ ಮಾಡಿ ಅರ್ಹರಿಗೆ ವಸತಿ, ನಿವೇಶನ ನೀಡಬೇಕು ಎಂದು ಒತ್ತಾಯಿಸಿ ವಸತಿ ಮತ್ತು ನಿವೇಶನ ರಹಿತರ ಹೋರಾಟ ವೇದಿಕೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.
ನಗರಪಾಲಿಕೆ ಮುಂಭಾಗದ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಎಲ್ಲ ಪಂಚಾಯಿತಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಪಾಲಿಕೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿವೇಶನ, ವಸತಿಗಾಗಿ ಅರ್ಜಿಗಳನ್ನು ಸ್ವೀಕರಿಸಿ ರಾಜೀವ್ ಗಾಂಧಿ ವಸತಿ ನಿಗಮದ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿ ದಾಖಲಿಸಬೇಕು ಎಂದು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ರಾಜೀವ್‌ಗಾಂಧಿ ವಸತಿ ನಿಗಮದ ಮಾಹಿತಿಯಂತೆ 19,19,872 ವಸತಿ ರಹಿತರಿದ್ದು, 7,15,948 ಕುಟುಂಬಗಳಿಗೆ ನಿವೇಶನ ಇಲ್ಲ. 26,35,820 ಕುಟುಂಬಗಳು ವಸತಿ ರಹಿತವಾಗಿವೆ. ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಅರ್ಜಿ ಸಲ್ಲಿಸದ ಕುಟುಂಬಗಳನ್ನೂ ಒಳಗೊಂಡಂತೆ ಅಂದಾಜು 50 ಲಕ್ಷಕ್ಕಿಂತಲೂ ಹೆಚ್ಚಿನ ಕುಟುಂಬಗಳಿಗೆ ವಸತಿಯೇ ಇಲ್ಲ ಎಂದರು.
ಜಿಲ್ಲೆಯಲ್ಲಿ ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ವಸತಿಗಾಗಿ 77,549 ನಿವೇಶನಕ್ಕಾಗಿ 41,459 ಅರ್ಜಿಗಳು ಸಲ್ಲಿಕೆಯಾಗಿವೆ. ಇದುವರೆಗೂ ಅರ್ಜಿ ಸಲ್ಲಿಸದೆ ಇರುವ ಕುಟುಂಬಗಳನ್ನು ಪರಿಗಣನೆ ಮಾಡಿದರೆ 2 ಲಕ್ಷಕ್ಕೂ ಹೆಚ್ಚು ಕುಟಂಬಗಳು ವಸತಿ ಹೀನರಾಗಿದ್ದಾರೆ ಎಂದರು.
ಸರಿಯಾಗಿ ಅರ್ಜಿ ಸಲ್ಲಿಸದೆ ಇರುವುದರಿಂದ ಕೇಂದ್ರ ಸರ್ಕಾರ ವಸತಿಗಾಗಿ ಮೀಸಲಿಟ್ಟಿರುವ ಅನುದಾನದ ಸರಿಯಾಗಿ ಬಳಕೆಯಾಗುತ್ತಿಲ್ಲ. ಇದು ಅಧಿಕಾರಿಗಳಿಗೆ ಬಡವರ ಬಗ್ಗೆ ಇರುವ ತಾತ್ಸಾರ ಧೋರಣೆ, ಬೇಜವಾಬ್ದಾರಿತನ ತೋರಿಸುತ್ತದೆ ಎಂದು ಕಿಡಿಕಾರಿದರು.
ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಹೋರಾಟ ವೇದಿಕೆ ಅಧ್ಯಕ್ಷ ಎಚ್.ಬಿ.ರಾಮಕೃಷ್ಣ, ಕಾರ್ಯಾಧ್ಯಕ್ಷ ಎನ್.ಕೆ.ದೇವದಾಸ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸೋಮಶೇಖರ್, ಮುಖಂಡರಾದ ಮುಜಾಹಿದ್ ಪಾಷ, ಸಾದಿಖ್ ಅಹಮ್ಮದ್, ನಜೀರ್, ಇರ್ಫಾನ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net