ಮೈಸೂರಿನಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟದಿಂದ ನಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು. ನಿಸಾರ್ ಅಹಮದ್‌ಖಾನ್, ಎಂ.ಎಸ್.ಧನಂಜಯ್, ಕೆ.ಆರ್.ಉದಯ್ ಕುಮಾರ್, ಎಂ.ಎಸ್.ನರಸಿಂಹಮೂರ್ತಿ, ಎಂ.ಗಣೇಶ್, ಕೆ.ಆರ್.ಸತ್ಯನಾರಾಯಣ್, ಎಂ.ಎನ್.ದೇವರಾಜು, ನಾಗಭೂಷಣ ಆರಾಧ್ಯ ಇತರರು ಇದ್ದರು.
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟದಿಂದ ನಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು. ನಿಸಾರ್ ಅಹಮದ್‌ಖಾನ್, ಎಂ.ಎಸ್.ಧನಂಜಯ್, ಕೆ.ಆರ್.ಉದಯ್ ಕುಮಾರ್, ಎಂ.ಎಸ್.ನರಸಿಂಹಮೂರ್ತಿ, ಎಂ.ಗಣೇಶ್, ಕೆ.ಆರ್.ಸತ್ಯನಾರಾಯಣ್, ಎಂ.ಎನ್.ದೇವರಾಜು, ನಾಗಭೂಷಣ ಆರಾಧ್ಯ ಇತರರು ಇದ್ದರು.
Published on
ಮೈಸೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮೈಸೂರು ನಗರ ಮತ್ತು ತಾಲೂಕು ಪತ್ರ ಬರಹಗಾರರ ಒಕ್ಕೂಟದಿಂದ ಮೈಸೂರು ಉತ್ತರ ಉಪನೋಂದಣಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಮುದ್ರಾಂಕ ಹಾಗೂ ನೋಂದಣಿ ಇಲಾಖೆ ಈಗಾಗಲೇ ಕಾವೇರಿ 2.0 ತಂತ್ರಾಂಶದ ಮೂಲಕ ದಾಖಲಾತಿಗಳನ್ನು ರವಾನಿಸುವ ಬಗ್ಗೆ ಕ್ರಮ ಕೈಗೊಂಡಿದ್ದು, ಈ ಸಂಬಂಧ ಆಗಾಗ್ಗೆ ಹಲವಾರು ಬದಲಾವಣೆ ಮಾಡಿದೆ. ಈ ಸುಧಾರಣೆಗಳಿಂದಾಗಿ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯ ವೇಗ ಕುಂಠಿತವಾಗುತ್ತಿದ್ದು, ಪತ್ರಬರಹಗಾರರಾದ ನಾವುಗಳು ಸಹಾ ಸಮರ್ಪಕ ಸೇವೆಯನ್ನು ಜನ ಸಾಮಾನ್ಯರಿಗೆ ನೀಡುವುದು ದುಸ್ಸಾಹಸವಾಗಿದೆ ಎಂದು ದೂರಿದರು. 
ನೋಂದಣಿ ಪ್ರಕ್ರಿಯೆಯಲ್ಲಿ ಈಗಾಗಲೇ ವಿಭಾಗ ಪತ್ರ, ದಾನಪತ್ರ ಹಾಗೂ ಇನ್ನಿತರೆ ದಾಖಲಾತಿಗಳನ್ನು ಅಪ್‌ಲೋಡ್ ಮಾಡುವುದು ಸಹ ಸಾಧ್ಯವಾಗದ ಕಾರಣ ಜನಸಾಮಾನ್ಯರು ತಮ್ಮ ಕುಟುಂಬದ ಸ್ಥಿರಾಸ್ತಿಗಳನ್ನು ನೋಂದಣಿ ಮಾಡಿಕೊಳ್ಳುವುದು ಸಾಧ್ಯವಿಲ್ಲದಂತಾಗಿದೆ ಎಂದು ಬೇಸರಿಸಿದರು.
ಸುಧಾರಣೆಯ ನೆಪದಲ್ಲಿ ಪತ್ರಬರಹಗಾರರು, ವಕೀಲರು ಹಾಗೂ ಜನಸಾಮಾನ್ಯರಿಗೆ ವಿಷಯಗಳು ತಿಳಿಯದ ಕಾರಣ ಇಲಾಖೆಯಿಂದ ರಹದಾರಿ ಪಡೆದಿರುವ ಪತ್ರ ಬರಹಗಾರರು ಹಾಗೂ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಅಧಿಕಾರಿಗಳು ಈ ಕುರಿತು ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸಚಿವರಿಗೆ ಮನದಟ್ಟು ಮಾಡಿ ಜನಸಾಮಾನ್ಯರ ನೋಂದಣಿ ಪ್ರಕ್ರಿಯೆಯನ್ನು ಪತ್ರ ಬರಹಗಾರರು ಸುಲಲಿತವಾಗಿ ನಡೆಸಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿ ಜಿಲ್ಲಾ ಉಪನೋಂದಣಾಧಿಕಾರಿ ಹಾಗೂ ಮೈಸೂರು ತಾಲೂಕು ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಒಕ್ಕೂಟದ ಅಧ್ಯಕ್ಷ ನಿಸಾರ್ ಅಹಮದ್‌ಖಾನ್, ಉಪಾಧ್ಯಕ್ಷ ಎಂ.ಎಸ್.ಧನಂಜಯ್, ಕಾರ್ಯದರ್ಶಿ ಕೆ.ಆರ್.ಉದಯ್ ಕುಮಾರ್, ಖಜಾಂಚಿ ಎಂ.ಎಸ್.ನರಸಿಂಹಮೂರ್ತಿ, ಸಂಚಾಲಕ ಎಂ.ಗಣೇಶ್, ನಿರ್ದೇಶಕರಾದ ಕೆ.ಆರ್.ಸತ್ಯನಾರಾಯಣ್, ಎಂ.ಎನ್.ದೇವರಾಜು, ನಾಗಭೂಷಣ ಆರಾಧ್ಯ, ಮಹಾದೇವ್, ಕುಮಾರ್, ಎಸ್.ಪಣಿರಾಜ್, ಎಸ್.ಎನ್.ಚಂದ್ರಶೇಖರ್, ಎನ್.ದಿನೇಶ್‌ಕುಮಾರ್, ಎಸ್.ಎಸ್.ವೇಣು, ಜಯಲಕ್ಷ್ಮಿ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net