ಕನ್ನಡ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ಮೈಸೂರು ನಗರವನ್ನು ನಶೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಅಗ್ರಹಾರ ವೃತ್ತದ ಬಳಿ ಧರಣಿ ನಡೆಯಿತು.
ಮೈಸೂರು ನಗರವನ್ನು ನಶೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಅಗ್ರಹಾರ ವೃತ್ತದ ಬಳಿ ಧರಣಿ ನಡೆಯಿತು.
Published on
ಮೈಸೂರು: ಮೈಸೂರು ನಗರವನ್ನು ನಶೆಮುಕ್ತಗೊಳಿಸುವಂತೆ ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟದ ವತಿಯಿಂದ ಸೋಮವಾರ ಧರಣಿ ನಡೆಯಿತು.
ನಗರದ ಅಗ್ರಹಾರ ವೃತ್ತದ ಬಳಿ ಪ್ರತಿಭಟನಾ ಧರಣಿ ನಡೆಸಿದ ಕನ್ನಡ ಪರ ಹೋರಾಟಗಾರರು, ಮಾದಕ ವಸ್ತುಗಳ ಪೂರೈಕೆ ಹಾಗೂ ಬಳಕೆ ವಿರುದ್ಧ ವಿವಿಧ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು. ನಗರದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಕ್ಕೆ ಕಾರಣವಾಗಿರುವ ಮಾದಕ ವಸ್ತು ಉತ್ಪಾದಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಮಾದಕ ವಸ್ತುಗಳಿಂದ ಯುವಜನರು ದೂರ ಇರಬೇಕು ಎಂದು ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಮೈಸೂರು ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಹಾಡುಹಗಲೇ ಕೊಲೆ ಸುಲಿಗೆ ನಡೆಯುತ್ತಿದ್ದೆ, ದಸರಾ ವೇಳೆ ಅಮಾಯಕ ಹೆಣ್ಣು ಮಗುವನ್ನು ಅಪಹರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಹೊರ ರಾಜ್ಯದಿಂದ ಬಂದು ಮಾದಕ ವಸ್ತುಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಿದರೂ ಇಲ್ಲಿನ ಪೊಲೀಸರ ಅರಿವಿಗೆ ಬಂದಿಲ್ಲ. ಅರಮನೆ ಮುಂಭಾಗ ಬಲೂನ್ ಗ್ಯಾಸ್ ಸಿಲೆಂಡರ್ ಸ್ಫೋಟಗೊಂಡು ಮೂವರು ಮೃತಪಟ್ಟಿದ್ದರು. ಇದರ ನೈಜ ಕಾರಣ ಇಂದಿಗೂ ತಿಳಿದುಬಂದಿಲ್ಲ ಎಂದು ಪ್ರತಿಭಟನಾಕಾರರು ಅಪಾದಿಸಿದರು.
ಇತ್ತೀಚೆಗೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆಯೇ ಮಾದಕ ವ್ಯಸನಿ ಯುವಕರು ಹಲ್ಲೆ ನಡೆಸಿದ್ದಾರೆ. ಇದಕ್ಕೆಲ್ಲ ಮಾದಕ ವಸ್ತುಗಳ ಮಾಫಿಯಾ ಕಾರಣ. ಪ್ರಭಾವಿ ವ್ಯಕ್ತಿಗಳೇ ಇಂತಹ ದಂಧೆಗಳಲ್ಲಿ ತೊಡಗಿರುವ ಶಂಕೆ ಇದೆ. ಆದ್ದರಿಂದ ಸರ್ಕಾರ ಮೈಸೂರು ನಗರವನ್ನು ನಶೆ ಮುಕ್ತ ಮೈಸೂರು ಮಾಡಲು ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕನ್ನಡ ಕ್ರಾಂತಿದಳದ ಅಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೋದಂಡರಾಮು, ಕಾವಲುಪಡೆಯ ಅಧ್ಯಕ್ಷ ಮೋಹನ್ ಕುಮಾರ್ ಗೌಡ, ಕನ್ನಡ ಕಲಾಕೂಟ ಅಧ್ಯಕ್ಷ ಎಂ.ಚಂದ್ರಶೇಖರ್, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಅಧ್ಯಕ್ಷ ಡಾ.ಎಂ.ಲಿಂಗರಾಜು, ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷೆ ವಿ.ಪಿ.ಸುಶೀಲಾ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕಮಲ ನಟರಾಜು, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಕನ್ನಡಾಂಬೆ ರಕ್ಷಣಾ ವೇದಿಕೆ ಅಧ್ಯಕ್ಷ ಬಿ.ಬಿ.ರಾಜಶೇಖರ್, ನಾಲಾ ಬೀದಿ ರವಿ, ಕರುನಾಡ ಯೋಗೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net