ಎಲ್‌ಪಿಜಿ ಸಿಲಿಂಡರ್ ಕೊರತೆ ಹಿನ್ನೆಲೆಯಲ್ಲಿ ನಗರದ ಜಯಚಾಮರಾಜೇಂದ್ರ ವೃತ್ತದಲ್ಲಿ ಕನ್ನಡ ಚಳವಳಿ ಸಮಿತಿ ನೇತೃತ್ವದಲ್ಲಿ ಪ್ರತಿಭಟನಾಕಾರರು, ಸೌದೆ ಒಲೆಯಲ್ಲಿ ನೀರು ಕಾಯಿಸುವ ಮೂಲಕ ಪ್ರತಿಭಟನೆ ನಡೆಸಿದರು. ವಾಟಾಳ್ ನಾಗರಾಜ್ ಮಾತನಾಡಿ, ಯುದ್ಧದ ಪರಿಣಾಮ ಪರಿಸ್ಥಿತಿ ಬಹಳ ಗಂಭೀರವಾಗಿದೆ. ಇಂತಹ ಸಮಯದಲ್ಲಿ ಯುದ್ಧ ಬೇಕಾಗಿಲ್ಲ. ಅಮೆರಿಕದವರಿಗೆ ಜೀವನಪರ್ಯಂತ ಯುದ್ಧ ಬೇಕು. ಇಸ್ರೇಲ್ ಯಹೂದಿಗಳಿಗೆ ಯುದ್ಧ ಬೇಕು. ಆದರೆ ಪ್ರಪಂಚದ ಸಾಮಾನ್ಯ ಜನರ ಮೇಲೆ ಇದರ ಪರಿಣಾಮ ಬೀರಿದೆ. ಪೆಟ್ರೋಲ್, ಗ್ಯಾಸ್, ಔಷಧಗಳ ಕೊರತೆಯಿಂದ ಪ್ರಪಂಚ ಕಣ್ಣೀರು ಇಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡಪರ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಶಿವಶಂಕರ್, ತೇಜೇಸ್ ಲೋಕೇಶ್‌ಗೌಡ ಇತರರು ಇದ್ದರು.