ದಸರಾದಲ್ಲಿ ಕಂಬಳ ಆಯೋಜನೆಗೆ ವಿರೋಧಿಸಿ ಪ್ರತಿಭಟನೆ

 ದಸರಾದಲ್ಲಿ ಕಂಬಳ ಆಯೋಜನೆ ಕೈ ಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು.  ತೇಜೇಶ್ ಲೋಕೇಶ್‌ಗೌಡ, ಪ್ರಜೀಶ್, ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಿಂಧುವಳ್ಳಿ ಶಿವಕುಮಾರ್ ಇನ್ನಿತರರಿದ್ದರು.
ದಸರಾದಲ್ಲಿ ಕಂಬಳ ಆಯೋಜನೆ ಕೈ ಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ಸೇನಾ ಪಡೆಯಿಂದ ನಗರದಲ್ಲಿ ಪ್ರತಿಭಟನೆ ನಡೆಯಿತು. ತೇಜೇಶ್ ಲೋಕೇಶ್‌ಗೌಡ, ಪ್ರಜೀಶ್, ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಿಂಧುವಳ್ಳಿ ಶಿವಕುಮಾರ್ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜನರ ಭಾವನೆ ವಿರುದ್ಧ ಕಂಬಳ ಆಯೋಜನೆ ಸಲ್ಲ
  • ಹಳೇ ಡಿಸಿ ಕಚೇರಿ ಎದುರು ಕರ್ನಾಟಕ ಸೇನಾ ಪಡೆ ಪ್ರತಿಭಟನೆ
 ಮೈಸೂರು: ದಸರಾದಲ್ಲಿ ಕಂಬಳ ಆಯೋಜಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ನಗರದ ಹಳೇ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟಿಸಲಾಯಿತು. 
ದಸರಾ ಸಂದರ್ಭದಲ್ಲಿ ಕಂಬಳ ಕ್ರೀಡೆಯನ್ನು ಜನರ ಭಾವನೆಗಳಿಗೆ ವಿರುದ್ಧವಾಗಿ ಆಯೋಜಿಸಲು ಹೊರಟಿರುವುದು ಖಂಡನೀಯ. ಕಂಬಳ ಕ್ರೀಡೆಗೆ ನಮ್ಮ ವಿರೋಧವಿಲ್ಲ. ತುಳುನಾಡಿನ ಕ್ರೀಡೆಗೆ ಅಲ್ಲಿನ ಪ್ರಾದೇಶಿಕ ವೈಶಿಷ್ಟೃಗಳಿವೆ. ಅದು ದಕ್ಷಿಣ ಕನ್ನಡಕ್ಕೆ ಸರಿ. ಮೈಸೂರಿಗೆ ದಸರಾ ಸರಿ.
 ಹೀಗಾಗಿ ದಸರಾದಲ್ಲಿ ಮೈಸೂರಿನ ಕ್ರೀಡೆ, ಪರಂಪರೆ, ಸಂಸ್ಕೃತಿಗಳಿಗೆ ಆದ್ಯತೆ ನೀಡಬೇಕು. ದಸರಾ ಸಮಯದಲ್ಲಿ ಕಂಬಳ ನಡೆಸಿದರೆ, ದಸರಾದ ಹಿರಿಮೆ, ವೈಭವ, ಜಂಬೂಸವಾರಿ, ಸಾಂಸ್ಕೃತಿಕ ಹಾಗೂ ಪಾರಂಪರಿಕತೆಗಳು ಹಿನ್ನೆಲೆಗೆ ಸರಿಯಾಗಲ್ಲ. ಕಂಬಳ ಮೈಸೂರಿನ ಅಸ್ಮಿತೆ ಅಲ್ಲ, ಈ ಕ್ರೀಡೆಯನ್ನು ದಕ್ಷಿಣ ಕನ್ನಡದಲ್ಲಿ ತೋರಿಸಿ, ಆಯೋಜಿಸಬೇಕು ಎಂದು ಆಗ್ರಹಿಸಿದರು. 
ರಾಜ್ಯದಲ್ಲಿ ಮಳೆಯ ಅಭಾವವಿದ್ದು, ಬರಗಾಲ ಎದುರಾಗಿದೆ. ನೀರಿಗೂ ತೊಂದರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೃತಕವಾಗಿ ಗದ್ದೆ ಸೃಷ್ಟಿ ಮಾಡಿ, ಅಲ್ಲಿ ಕಂಬಳ ಆಯೋಜಿಸುವುದು ಅವೈಜ್ಞಾನಿಕ. 8 ಕೋಟಿ ರೂ. ವೆಚ್ಚದಲ್ಲಿ ಕಂಬಳ ಆಯೋಜನೆ ಮಾಡುವ ಬದಲು, ಮೈಸೂರಿನ ಮೂಲ ಸೌಕರ್ಯಗಳಿಗೆ ಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಆದ್ಯತೆ ನೀಡಬೇಕು.
 ದಸರಾಗೆ ಆಗಮಿಸುವ ಪ್ರವಾಸಿಗರಿಗೆ ಸೌಕರ್ಯ ಕಲ್ಪಿಸಿ. ಜತೆಗೆ ದಸರಾ ಕಲಾವಿದರಿಗೆೆ ಸರಿಯಾದ ಸಮಯದಲ್ಲಿ, ವಿಳಂಬ ಮಾಡದೆ ಅವರಿಗೆ ಗೌರವ ಧನ ನೀಡಬೇಕು ಎಂದು ಒತ್ತಾಯಿಸಿದರು.
ಜಂಬೂ ಸವಾರಿ ವೀಕ್ಷಿಸಲು ದೇಶ ವಿದೇಶಗಳಿಂದ ಮೈಸೂರಿಗೆ ಲಕ್ಷಾಂತರ ಜನರು ಬರುತ್ತಾರೆಯೇ ಹೊರತು ಕಂಬಳ ವೀಕ್ಷಿಸಲು ಅಲ್ಲ. ಸರ್ಕಾರವು ಆಯಾ ಸ್ಥಳೀಯ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಮಾಡಬಾರದು. ಈ ಕೂಡಲೇ ಕಂಬಳ ಆಯೋಜನೆಯನ್ನು ಕೈ ಬಿಡಬೇಕೆಂದು ಆಗ್ರಹಿಸಿದರು. 
ಸಂಘಟನೆಯ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಮುಖಂಡರಾದ ಪ್ರಜೀಶ್, ಗೋಲ್ಡನ್ ಸುರೇಶ್, ಪ್ರಭುಶಂಕರ್, ಸಿಂಧುವಳ್ಳಿ ಶಿವಕುಮಾರ್, ಕೃಷ್ಣಪ್ಪ, ಎಚ್.ಗಿರೀಶ್, ನೇಹಾ, ಶಿವಲಿಂಗಯ್ಯ, ಮಂಜುಳಾ, ಮಧುವನ ಚಂದ್ರು, ಸೋಮೇಗೌಡ, ಡಾ.ಶಾಂತರಾಜೇ ಅರಸ್, ಡಾ.ನಾಗೇಂದ್ರ, ಸುಜಾತಾ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net