ಕಳಪೆ ಕಾಮಗಾರಿ ವಿರುದ್ಧ ಸಾ.ರಾ.ಮಹೇಶ್ ಗರಂ

ಕೆ.ಆರ್.ನಗರ  ತಾಲೂಕಿನ ಹಂಪಾಪುರದ ರೈಲ್ವೇ ಗೇಟ್ ನಿಂದ ಸನ್ಯಾಸಿಪುರ ಮಾರ್ಗದ ರಸ್ತೆ ಕಾಮಗಾರಿಯನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಪರಿಶೀಲಿಸಿದರು.
ಕೆ.ಆರ್.ನಗರ ತಾಲೂಕಿನ ಹಂಪಾಪುರದ ರೈಲ್ವೇ ಗೇಟ್ ನಿಂದ ಸನ್ಯಾಸಿಪುರ ಮಾರ್ಗದ ರಸ್ತೆ ಕಾಮಗಾರಿಯನ್ನು ಮಾಜಿ ಸಚಿವ ಸಾ.ರಾ.ಮಹೇಶ್ ಪರಿಶೀಲಿಸಿದರು.
Published on
ಕೆ.ಆರ್.ನಗರ: ಸರ್ಕಾರ ಜನರ ತೆರಿಗೆ ಹಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು, ಒಮ್ಮೆ ರಸ್ತೆ ನಿರ್ಮಾಣ ಮಾಡಿದರೆ ಕನಿಷ್ಟ 20 ವರ್ಷಗಳು ಬಾಳಿಕೆ ಬರಬೇಕು. ಕಳಪೆ ಕಾಮಗಾರಿ ಮಾಡಿದರೆ ಒಂದೇ ವರ್ಷದಲ್ಲಿ ರಸ್ತೆ ಸಂಪೂರ್ಣ ಹಾಳಾಗುತ್ತದೆ. ಕಳಪೆ ಮಾಡಿದರೆ ಏನೂ ಪ್ರಯೋಜನ ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಿದ್ದೇಶ್ವರ ಪ್ರಸಾದ್ ವಿರುದ್ಧ ಮಾಜಿ ಸಚಿವ ಸಾ.ರಾ.ಮಹೇಶ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಹಂಪಾಪುರದ ರೈಲ್ವೇ ಗೇಟ್‌ನಿಂದ ಸನ್ಯಾಸಿಪುರ ಮಾರ್ಗವಾಗಿ ಕಾವೇರಿ ನದಿ ಹಳೆ ಸೇತುವೆ ಮೂಲಕ ಹಾಸನ-ಮೈಸೂರು ಸಂಪರ್ಕದ ರಸ್ತೆ 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಸಂಪೂರ್ಣವಾಗಿ ಕಳಪೆಯಾಗಿದೆ ಎಂದು ಸಾರ್ವಜನಿಕರು ದೂರಿನ ಹಿನ್ನೆಲೆಯಲ್ಲಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ನನ್ನ ಅಧಿಕಾರದ ಅವಧಿಯಲ್ಲಿ ಕಳಪೆ ಮಟ್ಟದ ರಸ್ತೆ ನಿರ್ಮಿಸಿಲ್ಲ ಎಂದು ಸ್ಪಷ್ಟಪಡಿಸಿದ ಮಾಜಿ ಸಚಿವರು, ಅಂದಾಜು ಪಟ್ಟಿಯಲ್ಲಿ ಏನೂ ಅನುಮೋದನೆ ಆಗಿದೆ ಆ ರೀತಿಯಲ್ಲಿ ಕಾಮಗಾರಿ ಮಾಡಿ, ಇಲ್ಲದಿದ್ದರೆ ಒಂದೇ ಒಂದು ನಯಾಪೈಸೆ ಹಣ ಬಿಡುಗಡೆ ಮಾಡದಂತೆ ಹೋರಾಟ ಮಾಡಲಾಗುತ್ತದೆ ಎಂದು ಗುತ್ತಿಗೆದಾರರಿಗೆ ಹಾಗೂ ಇಂಜಿನಿಯರ್‌ಗೆ ಎಚ್ಚರಿಕೆ ನೀಡಿದರು.
ಎರಡು ಕಿ.ಮೀ. ರಸ್ತೆ ನಿರ್ಮಾಣ ಮಾಡಲು 5 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುತ್ತಿಗೆದಾರರು ಅಂದಾಜು ಪಟ್ಟಿಯಲ್ಲಿ ಏನಿದೆ ಆ ರೀತಿಯಲ್ಲಿ ಮಾಡುತ್ತಿಲ್ಲ. ಮೊದಲು ಮಣ್ಣು ಹಾಕಿ ಎಂಬಾಕುಮೆಂಟ್ ಮಾಡಿದ ಬಳಿಕ 40 ಎಂ.ಎಂ. ಜಲ್ಲಿ ಹಾಕಿ ರೋಲರ್ ಮಾಡಿದ ನಂತರ ಮಿಕ್ಸ್ ಜೆಲ್ಲಿ ಹಾಕಿ ಗುಣಮಟ್ಟದ ರಸ್ತೆ ಮಾಡಬೇಕು. ಆದರೆ ಈ ರಸ್ತೆಗೆ ಇದ್ಯಾವುದೂ ಮಾಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಿದ್ದೇಶ್ವರ ಪ್ರಸಾದ್ ಅವರನ್ನು ತರಾಟೆ ತೆಗೆದುಕೊಂಡರು.
ಇದಕ್ಕೂ ಮೊದಲು ಸಾ.ರಾ.ಮಹೇಶ್ ಅವರು ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಮ್ಮುಖದಲ್ಲಿ ಈಗಾಗಲೇ ಅರ್ಧದಷ್ಟು ರಸ್ತೆ ಕಾಮಗಾರಿ ಕೆಲಸ ಮಾಡಿದ್ದನ್ನು ಪರಿಶೀಲಿಸಿದರು.
ಕೇಂದ್ರ ಸರ್ಕಾರದ ದಿಶಾ ಸಮಿತಿ ಸದಸ್ಯ ಹಂಪಾಪುರ ಕುಮಾರ್, ಜಿಲ್ಲಾ ಗ್ರಾಮಾಂತರ ಯುವ ಜೆಡಿಎಸ್ ಉಪಾಧ್ಯಕ್ಷ ಕಗ್ಗರೆ ಕುಚೇಲ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಡಿ.ವಿ.ಗುಡಿ ಯೋಗೇಶ್, ಹಂಪಾಪುರ ಸುರೇಶ್, ನಗರ ಮಹಿಳಾ ಘಟಕದ ಕಾರ್ಯದರ್ಶಿ ಭಾಗ್ಯಲಕ್ಷ್ಮೀ, ಜೆಡಿಎಸ್ ಮುಖಂಡರಾದ ಹಂಪಾಪುರ ರಮೇಶ್, ಧನಪಾಲ್, ಶಂಭು, ರಾಜೇಶ್, ಗುರು ಪ್ರಸಾದ್, ಎಚ್.ಜಿ.ಮಂಜು, ಸನ್ಯಾಸೀಪರ ಗ್ರಾಮದ ಮೋಹನ್ ರಾಜ್, ಸಂತೋಷ್, ಶಿವಲಿಂಗ, ಉಮೇಶ್, ಚಿಕ್ಕಯ್ಯ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net