ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ವಿರೋಧಿಸಿ ಪ್ರತಿಭಟನೆ

 ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕ್ರಾಂತಿಕಾರಿ ಯುವಜನ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ರವಿಕುಮಾರ್, ವಿನೋದ್‌ರಾಜ್, ಶಿವಣ್ಣ, ಪುಟ್ಟಮಾದು, ಚೌಡಳ್ಳಿ ಜವರಯ್ಯ ಇನ್ನಿತರರಿದ್ದರು.
ತೈಲ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕ್ರಾಂತಿಕಾರಿ ಯುವಜನ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ರವಿಕುಮಾರ್, ವಿನೋದ್‌ರಾಜ್, ಶಿವಣ್ಣ, ಪುಟ್ಟಮಾದು, ಚೌಡಳ್ಳಿ ಜವರಯ್ಯ ಇನ್ನಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕ್ರಾಂತಿಕಾರಿ ಯುವಜನ ಸಂಘಟನೆಯಿಂದ ಪ್ರತಿಭಟನೆ
ಮೈಸೂರು: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕ್ರಾಂತಿಕಾರಿ ಯುವಜನ ಸಂಘಟನೆಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಸರ್ಕಾರವು ಇಂಧನ, ಅಡುಗೆ ಅನಿಲ ಹಾಗೂ ಉಜ್ವಲ ಯೋಜನೆಯ ಸಬ್ಸಿಡಿ ಕಡಿತಗೊಳಿಸಿದೆ. ಅಗತ್ಯ ವಸ್ತುಗಳ ದರ ಏರಿಕೆ ಮಾಡಿ ಜನರ ಮೇಲೆ ಹೊರೆ ಹಾಕಿದೆ. ಇದರಿಂದಾಗಿ ಈಗಾಗಲೇ ಸಂಕಷ್ಟದಲ್ಲಿರುವ ಜನತೆಯ ಮೇಲೆ ಮತ್ತಷ್ಟು ಹೊರೆ ಬೀಳುತ್ತಿದೆ, ಬೆಲೆ ಏರಿಕೆಯಿಂದ ಸಾಮಾನ್ಯ ಜನ ತತ್ತರಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಒಮ್ಮೆ ತೈಲ ಬೆಲೆಗಳು ಹೆಚ್ಚಳವಾದರೆ ಅದಕ್ಕೆ ಪೂರಕವಾಗಿ ಎಲ್ಲ ಅಗತ್ಯ ವಸ್ತುಗಳ ಬೆಲೆಗಳೂ ಗಗನಕ್ಕೇರುತ್ತವೆ. ಒಂದೆಡೆ ರೈತ, ಕಾರ್ಮಿಕರ ಮತ್ತು ಜನಸಾಮಾನ್ಯರ ಆದಾಯದಲ್ಲಿ ಯಾವುದೇ ರೀತಿಯ ಏರಿಕೆ ಕಾಣದಿದ್ದಾಗ ಈ ಬೆಲೆ ಏರಿಕೆ ಬದುಕನ್ನು ದುಸ್ತರಗೊಳಿಸುತ್ತದೆ. ಜತೆಗೆ ರಾಜ್ಯದಲ್ಲಿ ವಿದ್ಯುತ್ ದರ ಏರಿಕೆಗೆ ಪರಿಶೀಲಿಸಲಾಗಿದ್ದು, ಸಾರ್ವಜನಿಕರಿಗೆ ಕರೆಂಟ್ ಶಾಕ್ ಎದುರಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಶ್ಚಿಮ ಏಷ್ಯಾದಲ್ಲಿ ಬಿಕ್ಕಟ್ಟಿನಿಂದ ವಿವಿಧ ದೇಶಗಳು ನಾಗರಿಕರ ಹಿತರಕ್ಷಣೆಗಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣ ಕ್ರಮ ಕೈಗೊಂಡಿವೆ. ಆದರೆ, ಭಾರತದಲ್ಲಿ ಜನಸಾಮಾನ್ಯರ ಬದುಕಿನ ಮೇಲೆ ಹೆಚ್ಚುವರಿ ಹೊರೆ ಹಾಕಲಾಗುತ್ತಿದೆ. ಹೀಗಾಗಿ ಕೂಡಲೇ ಬೆಲೆ ಏರಿಕೆ ಹಿಂಪಡೆಯಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ತೆರಿಗೆ ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘಟನೆಯ ರವಿಕುಮಾರ್, ವಿನೋದ್‌ರಾಜ್, ಶಿವಣ್ಣ, ಪುಟ್ಟಮಾದು, ಚೌಡಳ್ಳಿ ಜವರಯ್ಯ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net