ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಿ.ವಿ.ಗುರುಪ್ರಸಾದ್ ಮಾತನಾಡಿ, ಸಂವಿಧಾನ, ಕಾನೂನು, ಹಾಸ್ಯದ ವಿಷಯಗಳನ್ನು ಮೈಗೂಡಿಸಿಕೊಂಡಿದ್ದ ಸಿ.ಕೆ.ಎನ್.ರಾಜಾ ಅವರು, ಕ್ರೀಡಾ ಪಟುವೂ ಆಗಿದ್ದರು. ಟೆನಿಸ್ ಅವರ ನೆಚ್ಚಿನ ಆಟವಾಗಿತ್ತು. ತಮ್ಮ ಶಿಷ್ಯರನ್ನು ಪಠ್ಯದ ಜತೆಗೆ ಆಟಗಳಲ್ಲಿಯೂ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದರು ಎಂದರು.