ಸಾಲಿಗ್ರಾಮದಿಂದ ರಾಂಪುರ ಬಡಾವಣೆ, ರಾಂಪುರ ಮಾರ್ಗವಾಗಿ ಮಾದಾಪುರ, ದಡದಹಳ್ಳಿ, ಕಾಳಮ್ಮನ ಕೊಪ್ಪಲಿಗೆ 7 ಕಿ.ಮೀ. ಅಂತರವಿದೆ. ಈ ಮಾರ್ಗವಾಗಿ ಬೆಳಗ್ಗೆ, ಸಂಜೆ ಮಾತ್ರ ಒಂದು ಬಸ್ ಸಂಚರಿಸುತ್ತದೆ. ಇನ್ನುಳಿದ ಸಮಯದಲ್ಲಿ ಬಸ್ ವ್ಯವಸ್ಥೆ ಇಲ್ಲ. ಬಾಡಿಗೆಗೆ ಆಟೋಗಳನ್ನು ಮಾಡಿಕೊಂಡು ಹೋಗಬೇಕಾಗುತ್ತದೆ. ಹಾಗಾಗಿ ಜನರು ಓಡಾಡಲು ಬಹಳ ಕಷ್ಟವಾಗಿದೆ.