ಗೋಲ್ಡ್ ವಿನ್ನರ್ ಲಕ್ಕಿ ಡ್ರಾ ವಿಜೇತರಿಗೆ ಬಹುಮಾನ ವಿತರಣೆ

ಗೋಲ್ಡ್ ವಿನ್ನರ್ ‘ಮಂಡಿ ಧಮಾಕ ಸೇಲ್’ ಲಕ್ಕಿ ಡ್ರಾ ಕಾರ್ಯಕ್ರಮ
ಗೋಲ್ಡ್ ವಿನ್ನರ್ ‘ಮಂಡಿ ಧಮಾಕ ಸೇಲ್’ ಲಕ್ಕಿ ಡ್ರಾ ಕಾರ್ಯಕ್ರಮ
Published on

ಪ್ರಮುಖ ಮುಖ್ಯಾಂಶಗಳು

  • ಸಗಟು ವ್ಯಾಪಾರಿಗಳಿಗಾಗಿ ಹಮ್ಮಿಕೊಂಡಿದ್ದ ವಿಶೇಷ ರಿಯಾಯಿತಿ ಕೊಡುಗೆ ಲಕ್ಕಿ ಡ್ರಾ ಸ್ಪರ್ಧೆ
  • ಜನಪ್ರಿಯ ಹಾಗೂ ವಿಶ್ವಾಸಾರ್ಹ ಅಡುಗೆ ಎಣ್ಣೆಯ ಬ್ರ್ಯಾಂಡ್ ಆಗಿರುವ ಗೋಲ್ಡ್ ವಿನ್ನರ್ ‘ಮಂಡಿ ಧಮಾಕ ಸೇಲ್’ ಲಕ್ಕಿ ಡ್ರಾ ಕಾರ್ಯಕ್ರಮ
ಮೈಸೂರು: ಜನಪ್ರಿಯ ಹಾಗೂ ವಿಶ್ವಾಸಾರ್ಹ ಅಡುಗೆ ಎಣ್ಣೆಯ ಬ್ರ್ಯಾಂಡ್ ಆಗಿರುವ ಗೋಲ್ಡ್ ವಿನ್ನರ್ ‘ಮಂಡಿ ಧಮಾಕ ಸೇಲ್’ ಲಕ್ಕಿ ಡ್ರಾ ಕಾರ್ಯಕ್ರಮ ನಗರದ ಬಂಡಿಪಾಳ್ಯ ಎಪಿಎಂಸಿ ಯಾರ್ಡ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ 21 ವಿಜೇತರಿಗೆ ವಿವಿಧ ಬಗೆಯ ಬಹುಮಾನ ವಿತರಿಸಲಾಯಿತು.
1973ರಲ್ಲಿ ಪ್ರಾರಂಭವಾದಾಗಿನಿಂದ ಮಾರುಕಟ್ಟೆಯನ್ನು ಅಗಾಧವಾಗಿ ವ್ಯಾಪಿಸಿಕೊಂಡಿರುವ ಗೋಲ್ಡ್ ವಿನ್ನರ್ ಅಡುಗೆ ಎಣ್ಣೆ ಉತ್ಪಾದನೆ ಮಾಡುವ ಕಾಳೀಶ್ವರಿ ರಿಫೈನರಿ ಪ್ರೈವೇಟ್ ಲಿಮಿಟೆಡ್ ಕಂಪನಿಯ ವತಿಯಿಂದ ಕಾರ್ಯಕ್ರಮ ನಡೆಯಿತು.
ಸಗಟು ವ್ಯಾಪಾರಿಗಳಿಗಾಗಿ ಹಮ್ಮಿಕೊಂಡಿದ್ದ ವಿಶೇಷ ರಿಯಾಯಿತಿ ಕೊಡುಗೆ ಲಕ್ಕಿ ಡ್ರಾ ಸ್ಪರ್ಧೆಗೆ ಕೇವಲ 10 ದಿನಗಳಲ್ಲೇ ಉತ್ತಮ ಸ್ಪಂದನೆ ದೊರೆತಿದೆ. ಗೋಲ್ಡ್ ವಿನ್ನರ್ ಸೂರ್ಯಕಾಂತಿ (ಸನ್ ಫ್ಲವರ್) ಎಣ್ಣೆಯ 10 ಲೀಟರ್ ಸ್ಲ್ಯಾಬ್ ಬಾಕ್ಸ್ ಖರೀದಿಯ ಮೇಲೆ ಆಕರ್ಷಕ ಬೆಲೆ ಕಡಿತ ಇರಿಸಲಾಗಿತ್ತು.
ತಲಾ ಒಂದು ಲೀಟರ್‌ನ  10 ಪ್ಯಾಕೇಟ್‌ಗಳು ಇರುವ 25 ಬಾಕ್ಸ್ ಖರೀದಿ ವಿಭಾಗದಲ್ಲಿ ಬಂಡೀಪಾಳ್ಯದ ಅಂಗೈ ಎಂಟರ್‌ಪ್ರೈಸಸ್‌ಗೆ ಮೆಗಾ ಬಂಪರ್ ಹೀರೋ ಕಂಪನಿಯ ಬೈಕ್ ದೊರೆಯಿತು. ಜತೆಗೆ, 5 ಬಾಕ್ಸ್ ಖರೀದಿಯ 10 ಅದೃಷ್ಟಶಾಲಿಗಳಿಗೆ ಪ್ರೆಷರ್ ಕುಕ್ಕರ್, 10 ಬಾಕ್ಸ್ ಖರೀದಿ ಅದೃಷ್ಟಶಾಲಿಗಳಿಗೆ ಇಂಡಕ್ಷನ್ ಸ್ಟೌ ನೀಡಿ ಸಗಟು ವ್ಯಾಪಾರಿಗಳಿಗೆ ಉತ್ತೇಜನ ನೀಡಲಾಯಿತು.
ಈ ಸಂದರ್ಭ ಕಂಪನಿ ಸಿಇಒ ಪ್ರೇಮ್‌ಕುಮಾರ್ ಮಾತನಾಡಿ, ಉತ್ಪನ್ನವನ್ನು ಯಶಸ್ವಿಯಾಗಿ ಪ್ರೋತ್ಸಾಹಿಸಲು, ವ್ಯಾಪಾರಿ ಮತ್ತು ಗ್ರಾಹಕರನ್ನು ಆಕರ್ಷಿಸಲು ಲಕ್ಕಿ ಡ್ರಾ ಸ್ಪರ್ಧಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದಕ್ಕೆ ಉತ್ತಮ ಸ್ಪಂದನೆ, ಸಹಕಾರವೂ ದೊರೆತಿದೆ. ಉತ್ಪನ್ನದ ವೈಶಿಷ್ಟ್ಯ ಹೆಚ್ಚಿಸುವಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಮಟ್ಟದ ಸ್ಪರ್ಧೆ ಆಯೋಜಿಸಲಾಗುವುದು ಎಂದರು.
ದೇಸಿಯ ಬಳಕೆಗೆ ಬಂದಾಗ ಗೋಲ್ಡ್ ವಿನ್ನರ್ ಅತ್ಯಂತ ವಿಶ್ವಾಸಾರ್ಹ ತೈಲ ಬ್ರಾೃಂಡ್ ಆಗಿದೆ. ಕಾಳೀಶ್ವರಿ ರಿಫೈನರಿ ಕಂಪನಿಯಿಂದ  ಪ್ಯಾಕೇಜ್ ಮಾಡಿ ಮಾರುಕಟ್ಟೆಗೆ ನೀಡುತ್ತಿರುವ ಪ್ರಮುಖ ಖಾದ್ಯ ತೈಲ ಇದಾಗಿದೆ. ಇದಲ್ಲದೆ, ಗಾತ್ರಗಳ ವಿಷಯದಲ್ಲಿ ಅವುಗಳ ವಿಭಿನ್ನ ರೀತಿಯ ರೂಪಾಂತರಗಳು ಅದನ್ನು ಇನ್ನಷ್ಟು ಆಸಕ್ತಿದಾಯಕವಾಗಿಸಲಾಗಿದೆ. ಅದು ಕೈಗೆಟುಕುವ ಬೆಲೆಗೆ ಸಿಗುವಂತೆ ಮತ್ತು ಶೇಖರಿಸಿ ಇಡಲು ಸುಲಭವಾಗಿಸಲಾಗಿದೆ ಎಂದರು.
ಕಂಪನಿಯ ದಕ್ಷಿಣ ಕರ್ನಾಟಕದ ಆರ್‌ಎಸ್‌ಎಂ ಸಿ.ಎಸ್.ಮಹೇಶ್ ಮಾತನಾಡಿ, ಗೋಲ್ಡ್ ವಿನ್ನರ್ ಅತ್ಯಂತ ಜನಪ್ರಿಯ ಮತ್ತು ವಿಶ್ವಾಸಾರ್ಹ ಖಾದ್ಯ ತೈಲ ಬ್ರಾೃಂಡ್‌ಗಳಲ್ಲಿ ಒಂದಾಗಿದೆ. ಕಳೆದ ಒಂದು ವರ್ಷದಿಂದ ಗೋಲ್ಡ್ ವಿನ್ನರ್ ಅಡುಗೆ ಎಣ್ಣೆಯನ್ನು ರಿಯಾಯಿತಿ ಮತ್ತು ಸ್ಪರ್ಧಾತ್ಮಕ ದರದಲ್ಲಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ ಎಂದರು
ಈ ಸಂದರ್ಭದಲ್ಲಿ ಇನ್ನಷ್ಟು ಗ್ರಾಹಕರು, ವ್ಯಾಪಾರಸ್ಥರಿಗೆ ಪ್ರೋತ್ಸಾಹ ನೀಡಲು ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದು ಮೊದಲ ಪ್ರಯತ್ನ. ನಗರದ ಸಗಟು ವ್ಯಾಪಾರಸ್ಥರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಒಂದು ಬಾಕ್ಸ್ ತೆಗೆದುಕೊಳ್ಳುವರು, ಐದು ಬಾಕ್ಸ್ ತೆಗೆದುಕೊಂಡರು. ಮುಂದೆಯೂ ಇನ್ನಷ್ಟು ಬೆಂಬಲ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ಲಕ್ಕಿ ಡ್ರಾ ಸೇರಿದಂತೆ ಸ್ಥಳೀಯ, ವಿದೇಶ ಪ್ರವಾಸ ಏರ್ಪಡಿಸುವ ಕುರಿತು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.
ಕಂಪನಿಯ ಎಎಸ್‌ಎಂ ಅಬ್ದುಲ್ ರೆಹಮಾನ್ ಖಾನ್, ಕೆಆರ್‌ಪಿಎಲ್‌ನ ಸಿಎಫ್‌ಎ ಶ್ರೀಧರ್, ಮಹಾಲಕ್ಷ್ಮೀ ಟ್ರೇಡರ್ಸ್‌ನ ಪ್ರದೀಪ್, ಮಾರ್ಕೆಟಿಂಗ್ ವಿಭಾಗದ ಶ್ರೀನಿವಾಸನ್, ಸದ್ದಾಂ ಹುಸೇನ್ ಇನ್ನಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net