ಗ್ರಾಮೀಣ ಜನರಿಗೆ ಮೂಲಸೌಕರ್ಯ ಒದಗಿಸಲು ಆದ್ಯತೆ

ಪಿರಿಯಾಪಟ್ಟಣ ತಾಲೂಕು ಭೋಗನಹಳ್ಳಿ ಮತ್ತು ಮಾಕೋಡು ರಸ್ತೆ ಸೇತುವೆ ಕಾಮಗಾರಿಗೆ ಶಾಸಕ ಕೆ.ವೆಂಕಟೇಶ್ ಗುರುವಾರ ಭೂಮಿಪೂಜೆ ಮಾಡಿದರು. ನಿತಿನ್ ವೆಂಕಟೇಶ್, ಡಿ.ಟಿ.ಸ್ವಾಮಿ, ಈಚೂರು ಲೋಕೇಶ್, ಡಿ.ಎಸ್.ನಂದೀಶ್, ಸಾಲುಗೊಪ್ಪಲು ಪುಟ್ಟರಾಜ್, ಜಯಾ ಮರೀಗೌಡ ಇತರರಿದ್ದರು.

Published on
ರಾವಂದೂರು: ಗ್ರಾಮೀಣ ಜನರಿಗೆ ಮೂಲಸೌಕರ್ಯ ಒದಗಿಸಲು ಮೊದಲ ಆದ್ಯತೆ ನೀಡಲಾಗುವುದು ಎಂದು ಮಾಜಿ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕು ಭೋಗನಹಳ್ಳಿ ಮತ್ತು ಮಾಕೋಡು ರಸ್ತೆ ಸೇತುವೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಜನರಿಗೆ ಅಗತ್ಯಕ್ಕೆ ತಕ್ಕಂತೆ ಮೂಲಸೌಕರ್ಯ ನೀಡುವುದರ ಜತೆಗೆ ಜನರ ಸಮಸ್ಯೆಗಳನ್ನು ಬಗೆಹರಿಸಿ ಉತ್ತಮ ಜೀವನ ನಡೆಸಲು ಸಂಪೂರ್ಣ ಸಹಕಾರ ನೀಡಲಾಗುವುದು. ಕಾಂಗ್ರೆಸ್ ಸರ್ಕಾರಕ್ಕೆ ಜನಪರ ಆಡಳಿತ ಹಾಗೂ ಗ್ರಾಮಗಳ ಅಭಿವೃದ್ಧಿಯೇ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.
ತಾಲೂಕು ಆಶ್ರಯ ಸಮಿತಿಯ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ಮುಖಂಡರಾದ ಡಿ.ಎಸ್.ನಂದೀಶ್, ಸಾಲುಗೊಪ್ಪಲು ಪುಟ್ಟರಾಜ್, ಜಯಾ ಮರೀಗೌಡ, ಸ್ವಾಮಿಗೌಡ, ಶಶಿ ರಾಮೇಗೌಡ ಹಾಗೂ ತಾಲೂಕು ದಂಡಾಧಿಕಾರಿ ನಿಸರ್ಗಪ್ರಿಯಾ, ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಹಾಗೂ ಯೋಗಾನಂದ, ದಿನೇಶ್, ರವಿ ಪ್ರಸನ್ನ, ಡಾ.ಸೋಮಯ್ಯ, ಪದ್ಮಶ್ರೀ, ಬಾಳೆಮಂಡಿ ಕೀರ್ತಿ, ಜಯಚಂದ್ರ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net