ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು, ಕೆ.ಆರ್.ನಗರ ಪಟ್ಟಣದಿಂದ ಜಾತ್ರೆಗೆ ವಿಶೇಷ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಸ್ಥಾನ ಘಟ್ಟದಲ್ಲಿ ಮಹಿಳೆಯರಿಗೆ ಬಟ್ಟೆ ಬದಲಿಸಿಕೊಳ್ಳಲು ಶೆಡ್‌ಗಳ ನಿರ್ಮಾಣ ಮಾಡಲಾಗಿದೆ. ವಿಶೇಷವಾಗಿ ಭಕ್ತರಿಗೆ ಪ್ರತಿನಿತ್ಯ ಯೋಗ ಶಿಬಿರ, ರಾತ್ರಿ ಜಾನಪದ ಪದಗಳು, ನೀಲಿಗಾರರ ಪದಗಳ ಹಾಡಿಗೆ ವೇದಿಕೆ ಕಲ್ಪಿಸಲಾಗಿದೆ.