ಯೋಗಪಟು ಎಚ್.ಖುಷಿ ಮಾತನಾಡಿ, ಯೋಗ ಅಭ್ಯಾಸದಿಂದ ವಿಭಿನ್ನವಾದ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ದೇಹ ಮತ್ತು ಮನಸ್ಸಿನ ಮೇಲಿನ ನಿಯಂತ್ರಣ ಸಾಧಿಸಬಹುದು. ಯೋಗ ಅಭ್ಯಾಸದಿಂದ ಸಣ್ಣತನ, ದ್ವೇಷ, ಅಸೂಯೆ ಮುಂತಾದವುಗಳಿಂದ ದೂರವಿದ್ದು, ವಿಶಾಲವಾದ ವ್ಯಕ್ತಿತ್ವ ರೂಪಿಸಿಕೊಳ್ಳಬಹುದು. ಪ್ರತಿದಿನ ಮಾಡುವ ಕಾರ್ಯ ತೃಪ್ತಭಾವ ಮೂಡಿಸಬೇಕು. ಗೆಲುವು, ಸಾಧನೆಯ ಜತೆಯಲ್ಲಿ ಸರಳತೆಯ ಗುಣ ರೂಪಿಸಿಕೊಳ್ಳಬೇಕು ಎಂದು ಹೇಳಿದರು.