ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನದಿಂದ ಇಬ್ಬರಿಗೆ ಪಿಆರ್‌ಟಿ ಪ್ರಶಸ್ತಿ ಘೋಷಣೆ

 ಮಲ್ಲಪ್ಪ ಸಿದ್ದಪ್ಪಹಳ್ಳಿ , ನರಸಪ್ಪ
ಮಲ್ಲಪ್ಪ ಸಿದ್ದಪ್ಪಹಳ್ಳಿ , ನರಸಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ವಿಜಯಪುರದ ಚಿತ್ರಕಲಾವಿದ ಮಲ್ಲಪ್ಪ ಸಿದ್ದಪ್ಪಹಳ್ಳಿ ಹಾಗೂ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಜಾನಪದ ಕಲಾವಿದ ನರಸಪ್ಪ ಆಯ್ಕೆ
  • ಕಾಸರಗೋಡಿನ ತಾಳಿಪಡುಪ್ಪುವಿನಲ್ಲಿ ಆಯೋಜಿಸುವ ಕಾರ್ಯಕ್ರಮದಲ್ಲಿ ಪ್ರದಾನ

ಮೈಸೂರು:

ನಗರದ ಪಿ.ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನದಿಂದ ಪ್ರತಿ ವರ್ಷ ಕೊಡಮಾಡುವ ಪಿಆರ್‌ಟಿ ಕಲಾ ಪ್ರಶಸ್ತಿ ಹಾಗೂ ಜಾನಪದ ಪ್ರಶಸ್ತಿ ಘೋಷಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.

ಟಿಆರ್‌ಪಿ ಕಲಾ ಪ್ರಶಸ್ತಿಯನ್ನು ವಿಜಯಪುರದ ಚಿತ್ರಕಲಾವಿದ ಮಲ್ಲಪ್ಪ ಸಿದ್ದಪ್ಪಹಳ್ಳಿ ಹಾಗೂ ಜಾನಪದ ಪ್ರಶಸ್ತಿಗೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ನರಸಪ್ಪ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ 25 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಫಲಕವನ್ನು ಒಳಗೊಂಡಿರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಸರಗೋಡಿನ ತಾಳಿಪಡುಪ್ಪುವಿನಲ್ಲಿ ಆ.9ರಂದು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಚಿವ ಯು.ಟಿ.ಖಾದರ್ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಿರಿಯ ಕಲಾವಿದ ಪುಣಿಚಿಂತ್ತಾಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ರಂಗಕರ್ಮಿ ಕಾಸರಗೋಡು ಚಿನ್ನಾ, ತಿಪ್ಪೇಸ್ವಾಮಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ಮಂಗಳೂರಿನ ಮಹಾಲಸ ಚಿತ್ರಕಲಾ ಶಾಲೆಯ ಪ್ರಾಂಶುಪಾಲ ಬಿ.ಪಿ.ಮೋಹನ್‌ಕುಮಾರ್, ಮಾಹಿತಿ ಹಕ್ಕು ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ, ಪಿಟಿಆರ್ ಪ್ರತಿಷ್ಠಾನದ ಕಾರ್ಯದರ್ಶಿ ಕೆ.ಪಿ.ಮಹದೇವಶೆಟ್ಟಿ, ಕೋಶಾಧ್ಯಕ್ಷ ಎಚ್.ಆರ್.ಚಂದ್ರಶೇಖರಯ್ಯ, ಸಹ ಕಾರ್ಯದರ್ಶಿ ಸಿ.ಚಿಕ್ಕಣ್ಣ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿಷ್ಠಾನದ ಕೆ.ಸಿ. ಮಹದೇವಶೆಟ್ಟಿ, ಎಚ್.ಆರ್. ಚಂದ್ರಶೇಖರಯ್ಯ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net