ಸಕಾರಾತ್ಮಕ ಭಾವನೆಯಿಂದ ಉತ್ತಮ ಬಾಂಧವ್ಯ ಸೃಷ್ಟಿ: ಮಂಜುಳಾ ಮಾಲಂಗಿ ಸುರೇಶ್ ಅಭಿಮತ

ಮೈಸೂರು ಜಿಲ್ಲಾ ವೀರಶೈವ-ಲಿಂಗಾಯತ ನೌಕರರ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಂಜುಳಾ ಮಾಲಂಗಿ ಸುರೇಶ್, ಅಂಬಿಕಾ ಶಿವನಂಜಪ್ಪ, ಗೀತಾ ಕಲ್ಮಳ್ಳಿ ನಟರಾಜು ಇತರರು ಇದ್ದರು.
ಮೈಸೂರು ಜಿಲ್ಲಾ ವೀರಶೈವ-ಲಿಂಗಾಯತ ನೌಕರರ ಸಂಘದಿಂದ ಇತ್ತೀಚೆಗೆ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಮಂಜುಳಾ ಮಾಲಂಗಿ ಸುರೇಶ್, ಅಂಬಿಕಾ ಶಿವನಂಜಪ್ಪ, ಗೀತಾ ಕಲ್ಮಳ್ಳಿ ನಟರಾಜು ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬದಲಾದ ಕಾಲಘಟ್ಟದಲ್ಲಿ ಅತಿಯಾದ ಸ್ವಾತಂತ್ರೃ ವ್ಯಕ್ತಿತ್ವ ಹಾಳು ಮಾಡುತ್ತದೆ
  • ಸಕಾರಾತ್ಮಕ ಭಾವನೆ ಬೆಳೆಸಿಕೊಂಡರೆ ಉತ್ತಮ ಬಾಂಧವ್ಯ ರೂಪುಗೊಳ್ಳುತ್ತದೆ
ಮೈಸೂರು:ಕುಟುಂಬ, ಸಂಘ ಹಾಗೂ ಸಮಾಜದ ವಿವಿಧ ಸ್ತರಗಳಲ್ಲಿ ಸ್ತ್ರೀ ಕೆಲಸ ನಿರ್ವಹಿಸುವಾಗ ಹೇಗೆ ತನ್ನ ಜವಾಬ್ದಾರಿ ಅರಿತು ಕೆಲಸ ನಿರ್ವಹಿಸುತ್ತಾಳೆ ಎನ್ನುವುದರ ಮೇಲೆ ಅವಳ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಜೆಎಸ್‌ಎಸ್ ಬಾಲ ಜಗತ್ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಮಂಜುಳಾ ಮಾಲಂಗಿ ಸುರೇಶ್ ಹೇಳಿದರು.
ಮೈಸೂರು ಜಿಲ್ಲಾ ವೀರಶೈವ-ಲಿಂಗಾಯತ ನೌಕರರ ಸಂಘದಿಂದ ನಗರದ ಕುದೇರು ಮಠದ ಆವರಣದಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬದಲಾದ ಕಾಲಘಟ್ಟದಲ್ಲಿ ಅತಿಯಾದ ಸ್ವಾತಂತ್ರೃ ವ್ಯಕ್ತಿತ್ವ ಹಾಳು ಮಾಡುತ್ತದೆ. ನಾವು ನೋಡುವ ಮನೋಭಾವದಂತೆ ನಮಗೆ ಒಳ್ಳೆಯದು ಕೆಟ್ಟದ್ದು ಎಂದು ಗೋಚರಿಸುತ್ತದೆ. ಸಕಾರಾತ್ಮಕ ಭಾವನೆ ಬೆಳೆಸಿಕೊಂಡರೆ ಉತ್ತಮ ಬಾಂಧವ್ಯ ರೂಪುಗೊಳ್ಳುತ್ತದೆ ಎಂದರು.
ಅಕ್ಕ ಮಹಾದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಜೆಎಸ್‌ಎಸ್ ತಾಂತ್ರಿಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಕನ್ನಡ ಪ್ರಾಧ್ಯಾಪಕಿ ಅಂಬಿಕಾ ಶಿವನಂಜಪ್ಪ ಹುಸ್ಕೂರು, ವಿಶ್ವದಲ್ಲಿಯೇ ಹೆಣ್ಣನ್ನು ಗೌರವಿಸಿದ ರಾಷ್ಟ್ರ ಜಗತ್ತಿನಲ್ಲಿ ಮತ್ತೊಂದು ಸಿಗಲಾರದು. ಪುರಾಣ ಕಥೆಗಳಲ್ಲಿ ಸ್ತ್ರೀಯನ್ನು ದೇವರಿಗೆ ಹೋಲಿಸಿರುವ ಘಟನೆಗಳನ್ನು ಕಾಣಬಹುದು. ಹಾಗಾಗಿ ಪ್ರಪಂಚದಲ್ಲಿ ಸ್ತ್ರೀ ಮತ್ತು ಪುರುಷರ ಏಳಿಗೆಗೆ ಪರಸ್ಪರ ಸಹಕಾರ ಇದ್ದಾಗ ಮಾತ್ರ ಬದುಕು ಪರಿಪೂರ್ಣವಾಗಲು ಸಾಧ್ಯ ಎಂದರು.
ಸಂಘದ ನಿರ್ದೇಶಕಿ ಗೀತಾ ಕಲ್ಮಳ್ಳಿ ನಟರಾಜು ಮಾತನಾಡಿ, ಕುಟುಂಬ ಸೇವೆಗೆ ಸೀಮಿತವಾಗಿದ್ದ ಮಹಿಳೆಯರು ಶಿಕ್ಷಣ ಪಡೆದು ತಮ್ಮ ಹೆಣ್ಣು ಮಕ್ಕಳಿಗೂ ಉತ್ತಮ ಶಿಕ್ಷಣ ಕೊಡಿಸುವುದರ ಮೂಲಕ ಪುರುಷರಿಗೆ ಸಮನಾಗಿ ಕೃಷಿ, ಶಿಕ್ಷಣ, ಕೈಗಾರಿಕೆ ಬ್ಯಾಂಕಿಂಗ್ ಆಡಳಿತ, ಸಾಹಿತ್ಯ, ವೈದ್ಯಕೀಯ, ಕ್ರೀಡೆ, ತಂತ್ರಜ್ಞಾನ, ಬಾಹ್ಯಾಕಾಶ, ಮಿಲಿಟರಿ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ಹೆಣ್ಣುಮಕ್ಕಳು ಕುಟುಂಬಕ್ಕೆ ಶಾಪವಾಗದೆ ವರವಾಗಿದ್ದಾರೆ ಎಂದರು.
ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸಂಘದ ಪದಾಧಿಕಾರಿಗಳಿಗೆ ಸ್ಮರಣ ಫಲಕ ನೀಡಿ ಅಭಿನಂದಿಸಲಾಯಿತು. ಮೈಸೂರು ಜಿಲ್ಲಾ ಅಖಿಲ ಭಾರತ ವೀರಶೈವ ಘಟಕದ ನಿರ್ದೇಶಕರಾದ ಕಲ್ಮಳ್ಳಿ ನಟರಾಜು, ಸರ್ಕಾರಿ ನೌಕರರ ಸಂಘದ ವಿಭಾಗೀಯ ಉಪಾಧ್ಯಕ್ಷ ಮಾಲಂಗಿ ಸುರೇಶ್, ಜಿಲ್ಲಾ ವೀರಶೈವ ಮಹಿಳಾ ಘಟಕದ ಕಾರ್ಯದರ್ಶಿ ಮಲ್ಲಿಕಾ, ಸಂಘದ ಉಪಾಧ್ಯಕ್ಷ ಸುರೇಶ್, ಖಜಾಂಚಿ ಮಹೇಶ್ ಬೆಳವಾಡಿ, ಮುಖಂಡ ಬಿ.ಆರ್.ಶಿವಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net