‘ಡ್ರಗ್ಸ್‌ಮುಕ್ತ ಮೈಸೂರು ಮಾಡುವ ಸಂಬಂಧ ನಮ್ಮ ಇಲಾಖೆ ವತಿಯಿಂದ ಮೈಸೂರು ನಗರದಲ್ಲಿ ಅನೇಕ ಅರಿವು ಕಾರ್ಯಕ್ರಮ ಮಾಡಿದ್ದೇವೆ. ಸಾರ್ವಜನಿಕರು ಕೂಡ ನಮ್ಮೊಂದಿಗೆ ಕೈ ಜೋಡಿಸಬೇಕು. ಪಾಲಕರು, ಶಿಕ್ಷಕರು ಮಕ್ಕಳ ಬಗ್ಗೆ ನಿಗಾ ವಹಿಸಬೇಕು. ನಿತ್ಯ ಅವರ ಚಲನವಲನದ ಬಗ್ಗೆ ಗಮನಿಸಬೇಕು. ಡ್ರಗ್ಸ್‌ನಿಂದ ಅನೇಕರು ಬಲಿಯಾಗಿದ್ದಾರೆ. ಈ ಸಂಬಂಧ ನಮ್ಮ ಇಲಾಖೆಯಿಂದ ಒಂದು ವಾಟ್ಸ್‌ಆ್ಯಪ್ ನಂಬರ್ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ಡ್ರಗ್ಸ್ ಸಂಬಂಧ ಸದರಿ ನಂಬರ್ ಮೂಲಕ ಮಾಹಿತಿ ನೀಡಬುದಾಗಿದೆ. ಎಲ್ಲರೂ ಪೊಲೀಸ್ ಇಲಾಖೆ ಜೊತೆ ಕೈ ಜೋಡಿಸಬೇಕು’ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಮಾಹಿತಿ ನೀಡಿದರು.