ಮೈಸೂರು: ನಗರದಲ್ಲಿ ಮತ್ತೊಂದು ಡ್ರಗ್ಸ್ ಘಟಕ ಪತ್ತೆಯಾದ ಹಿನ್ನೆಲೆಯಲ್ಲಿ ಈಗಾಗಲೇ ಕೈಗಾರಿಕೆಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಿರುವ ಪೊಲೀಸರು, ಸೋಮವಾರವೂ ತಪಾಸಣೆ ಮುಂದುವರಿಸಿದರು.
ಅದರಲ್ಲೂ ಕೆಮಿಕಲ್ ಆಧಾರಿತ ಫ್ಯಾಕ್ಟರಿಗಳನ್ನು ವಿಶೇಷವಾಗಿ ಗುರಿ ಮಾಡಿರುವ ಪೊಲೀಸರು ಇಂಚಿಂಚೂ ಪರಿಶೀಲನೆ ನಡೆಸುತ್ತಿದ್ದಾರೆ. ಹೆಬ್ಬಾಳು, ಹೂಟಗಳ್ಳಿ, ಕೂರ್ಗಳ್ಳಿ, ಮೇಟಗಳ್ಳಿ, ಬನ್ನಿಮಂಟಪ, ಹಿನಕಲ್ ಕೈಗಾರಿಕಾ ಪ್ರದೇಶಗಳಿಗೆ ಲಗ್ಗೆ ಹಾಕಿ ತಪಾಸಣೆ ತೀವ್ರಗೊಳಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ಮೈಸೂರು ಮಾತ್ರವಲ್ಲದೆ, ಮಂಡ್ಯ ಜಿಲ್ಲೆ ಸೇರಿದಂತೆ 250ಕ್ಕೂ ಹೆಚ್ಚು ಫ್ಯಾಕ್ಟರಿಗಳ ತಪಾಸಣೆ ನಡೆಸಲಾಗಿದೆ. ಫ್ಯಾಕ್ಟರಿಗೆ ಸಂಬಂಧಿಸಿದ ಗೊಡೌನ್, ಇಂಡಸ್ಟ್ರಿಯಲ್ ಶೆಡ್ ಸಹ ಟಾರ್ಗೆಟ್ ಮಾಡಿ ಪರಿಶೀಲನೆ ನಡೆಸಲಾಗಿದೆ.