ಪಿಎಂಎಫ್‌ಎಂಇ, ಪಿಎಂಇಜಿಪಿ ಅನುಷ್ಠಾನವಾಗಲಿ:ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಸಲಹೆ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಜಿ.ಲಕ್ಷ್ಮೀಕಾಂತರೆಡ್ಡಿ,  ಯುಕೇಶ್‌ಕುಮಾರ್, ಶೇಖ್ ತನ್ವೀರ್ ಆಸಿಫ್, ಕೃಷ್ಣ ಮೂರ್ತಿ, ರವಿ, ಸೈಯದ್ ನಸೀರ್ ಅಹಮ್ಮದ್ ಇತರರು ಇದ್ದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಜಿ.ಲಕ್ಷ್ಮೀಕಾಂತರೆಡ್ಡಿ, ಯುಕೇಶ್‌ಕುಮಾರ್, ಶೇಖ್ ತನ್ವೀರ್ ಆಸಿಫ್, ಕೃಷ್ಣ ಮೂರ್ತಿ, ರವಿ, ಸೈಯದ್ ನಸೀರ್ ಅಹಮ್ಮದ್ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ದಾಖಲೆಗಳ ಕೊರತೆಯಿಂದ ತಿರಸ್ಕೃತವಾಗಿದ್ದಲ್ಲಿ ಅಭ್ಯರ್ಥಿಗಳನ್ನು ಕರೆದು ದಾಖಲಾತಿ ಲಭ್ಯವಿದ್ದಲ್ಲಿ ದಾಖಲೆ ಪಡೆದು ಅರ್ಜಿಯನ್ನು ಪುನಃ ಪರಿಗಣಿಸಬೇಕು
  • ದಾಖಲಾತಿ ಲಭ್ಯವಿದ್ದಲ್ಲಿ ದಾಖಲೆ ಪಡೆದು ಅರ್ಜಿಯನ್ನು ಪುನಃ ಪರಿಗಣಿಸಬೇಕು
ಮೈಸೂರು: ಆಹಾರ ಸಂಸ್ಕರಣೆಗಾಗಿ ಕೃಷಿ ಇಲಾಖೆಯ ಮೂಲಕ ಜಾರಿಗೆ ತಂದಿರುವ ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆ ನಿಯಮಬದ್ಧಗೊಳಿಸುವ ಯೋಜನೆ(ಪಿಎಂಎಫ್‌ಎಂಇ) ಹಾಗೂ ಸ್ವಯಂ ಉದ್ಯೋಗ ಪ್ರೋತ್ಸಾಹಿಸಲು ಕೈಗಾರಿಕಾ ಇಲಾಖೆಯಿಂದ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಕಾರ್ಯಕ್ರಮ(ಪಿಎಂಇಜಿಪಿ) ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವಂತೆ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕ್ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ಬಹಳಷ್ಟು ಯೋಜನೆಗಳನ್ನು ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರನ್ನು ದೃಷ್ಟಿಯಲ್ಲಿ ಇಟ್ಟಿಕೊಂಡು ಯೋಜನೆ ರೂಪಿಸಲಾಗುತ್ತದೆ. ಇಲಾಖೆಗಳಿಂದ ಸಬ್ಸಿಡಿಯೊಂದಿಗೆ ಸಾಲ ನೀಡಲು ಅರ್ಜಿಗಳನ್ನು ಬ್ಯಾಂಕ್‌ಗಳಿಗೆ ಕಳುಹಿಸಿದಾಗ ಅವುಗಳನ್ನು ಆದ್ಯತೆ ಮೇಲೆ ಪರಿಗಣಿಸಿ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತಾಗಲಿ ಎಂದು ಸರ್ಕಾರ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಕಾರ್ಯಕ್ರಮ(ಪಿಎಂಇಜಿಪಿ)ಯೋಜನೆಯಡಿ 660 ಅರ್ಜಿಗಳ ಪೈಕಿ ಇದೂವರೆಗೆ 92 ಅರ್ಜಿಗಳಿಗೆ ಸಾಲ ಮಂಜೂರಾಗಿದೆ. 376 ಅರ್ಜಿಗಳು ವಿವಿಧ ಬ್ಯಾಂಕ್‌ಗಳ ಲಾಗಿನ್‌ನಲ್ಲಿ ಇದೆ. 192 ಅರ್ಜಿಗಳು ತಿರಸ್ಕೃತವಾಗಿದೆ. ಆದರೆ ಯಾವುದಾದರೂ ದಾಖಲೆಗಳ ಕೊರತೆಯಿಂದ ತಿರಸ್ಕೃತವಾಗಿದ್ದಲ್ಲಿ ಅಭ್ಯರ್ಥಿಗಳನ್ನು ಕರೆದು ದಾಖಲಾತಿ ಲಭ್ಯವಿದ್ದಲ್ಲಿ ದಾಖಲೆ ಪಡೆದು ಅರ್ಜಿಯನ್ನು ಪುನಃ ಪರಿಗಣಿಸಬೇಕು. ಬ್ಯಾಂಕ್‌ಗಳ ಲಾಗಿನ್‌ನಲ್ಲಿರುವ 376 ಅರ್ಜಿಗಳನ್ನು ಒಂದು ತಿಂಗಳೊಳಗಾಗಿ ಸಕಾರಣದೊಂದಿಗೆ ವಿಲೇವಾರಿ ಮಾಡಿ ಮುಂದಿನ ಸಭೆಗೆ ವರದಿ ಮಂಡಿಸುವಂತೆ ತಾಕೀತು ಮಾಡಿದರು.
ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆ ನಿಯಮಬದ್ಧಗೊಳಿಸುವ ಯೋಜನೆ(ಪಿಎಂಎಫ್‌ಎಂಇ) ಯೋಜನೆಯಡಿ ವಿವಿಧ ಬ್ಯಾಂಕ್‌ಗಳಿಂದ 248 ಅರ್ಜಿಗಳು ತಿರಸ್ಕೃತವಾಗಿರುತ್ತದೆ. ಈ ಯೋಜನೆಯಡಿ 3 ಲಕ್ಷ ರೂ.ದೊಳಗಿನ ಸಣ್ಣ ಪ್ರಮಾಣದ ಸಾಲವನ್ನು ನೀಡುವ ಅರ್ಜಿಗಳು ಬಹಳಷ್ಟು ಇರುತ್ತದೆ. ಸಿಬಿಲ್ ಸ್ಕೋರ್ ಇಲ್ಲ ಎಂದು ತಿರಸ್ಕರಿಸುವುದು ಬೇಡ ಎಂದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರು ತಿರಸ್ಕೃತಗೊಂಡಿರುವ ಅರ್ಜಿಗಳ ಅರ್ಜಿದಾರರು ಹಾಗೂ ಬ್ಯಾಂಕರ್‌ಗಳ ಸಹಯೋಗದೊಂದಿಗೆ ಸಭೆ ನಡೆಸಿ ಅರ್ಜಿದಾರರಿಗೆ ಮಾಹಿತಿ ನೀಡಿ ಅರ್ಜಿಯೊಂದಿಗೆ ದಾಖಲೆಗಳು ಬಿಟ್ಟು ಹೋಗಿದ್ದಲ್ಲಿ ಸರಿಪಡಿಸಿ ಪುನಾ ಅರ್ಜಿ ಸಲ್ಲಿಸಿ ಶೇ.100 ರಷ್ಟು ಸಾಧನೆ ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯುಕೇಶ್‌ಕುಮಾರ್, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತನ್ವೀರ್ ಆಸಿಫ್, ಲೀಡ್ ಬ್ಯಾಂಕ್ ಮ್ಯಾನೇಜರ್ ಕೃಷ್ಣಮೂರ್ತಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ, ಕೈಗಾರಿಕೆ ಇಲಾಖೆ ಉಪನಿರ್ದೇಶಕ ಸೈಯದ್ ನಸೀರ್ ಅಹಮ್ಮದ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net