ಕೆಲಸ ಮಾಡದ ಅಧಿಕಾರಿಗಳ ಪಟ್ಟಿ ಕೊಡಿ

ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಜನ ಸಂಪರ್ಕ ಸಭೆ ನಡೆಸಿ ರವಿಶಂಕರ್ ಮಾತನಾಡಿದರು.
ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿ ಜನ ಸಂಪರ್ಕ ಸಭೆ ನಡೆಸಿ ರವಿಶಂಕರ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಲೂಕು ಮಟ್ಟದ ಅಧಿಕಾರಿಗಳಿಗೆ ಶಾಸಕ ಡಿ.ರವಿಶಂಕರ್ ಸೂಚನೆ
  • ಪಶುಪತಿ ಗ್ರಾಮದಲ್ಲಿ ಜನ ಸಂಪರ್ಕ ಸಭೆ
  • ಸಾರ್ವಜನಿಕರಿಂದ ದೂರುಗಳ ಸುರಿಮಳೆ
ಸಾಲಿಗ್ರಾಮ : ಪಶುಪತಿ ಗ್ರಾಮದ ಮಾರ್ಗವಾಗಿ ಹನಸೋಗೆ ಸೇತುವೆ ತನಕ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ. ಮಂಜೂರು ಮಾಡಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಡಿ.ರವಿಶಂಕರ್ ತಿಳಿಸಿದರು.
ಹೊನ್ನೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಶುಪತಿ ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಜನ ಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನೇನಹಳ್ಳಿ ಕೆಡಗ, ಮಾವನೂರು, ಪಶುಪತಿ, ಪಶುಪತಿಕೊಪ್ಪಲು, ಸರಗೂರು, ಗಾಯನಹಳ್ಳಿ, ಗುಮ್ಮನಹಳ್ಳಿ ಗ್ರಾಮಗಳ ಸಾರ್ವಜನಿಕರು ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಅನುಭವಿಸುತ್ತಿರುವ ದೂರುಗಳ ಸುರಿಮಳೆಗೈದರು.
ಕುಡಿಯುವ ನೀರು, ಆಶ್ರಯ ಮನೆ, ನಾಲೆ ನೀರಿನ ಸಮಸ್ಯೆ, ವಿದ್ಯುತ್, ಟಿಸಿ ಮತ್ತು ಲೈನ್‌ಮನ್‌ಗಳ ಸಮಸ್ಯೆ, ವದ್ಧಾಪ್ಯ ಮತ್ತು ವಿಧವಾ ವೇತನಗಳ ಸಮಸ್ಯೆ, ಭೂಮಿ ಸರ್ವೇ ಮತ್ತು ಖಾತೆಗಳ ಸಮಸ್ಯೆ ಸೇರಿದಂತೆ ಹತ್ತಾರು ಸಮಸ್ಯೆಗಳ ಬಗ್ಗೆ ಶಾಸಕರ ಮುಂದೆ ಸಾರ್ವಜನಿಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
ಮನವಿ ಆಲಿಸಿದ ಶಾಸಕ ಡಿ.ರವಿಶಂಕರ್ ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಇಷ್ಟೊಂದು ಸಮಸ್ಯೆಗಳು ಉದ್ಭವವಾಗುವವರೆಗೆ ತಾಲೂಕು ಮಟ್ಟದ ಅಧಿಕಾರಿಗಳು ಏನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ಪ್ರತಿ ವಾರಕ್ಕೊಮ್ಮೆ ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಜನರ ಸಮಸ್ಯೆ ಆಲಿಸಿ. ಮುಂದಿನ ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳನ್ನು ದೂರುವಂತಹ ಸಮಸ್ಯೆಗಳು ಇರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ ಶಾಸಕರು ಬೇಜವಾಬ್ದಾರಿ ವಹಿಸುವ ಅಧಿಕಾರಿಗಳ ವಿರುದ್ಧ ಕ್ರಮ ವಹಿಸುವುದಾಗಿ ತಿಳಿಸಿದರು.
ತಾಲೂಕು ಮಟ್ಟದ ಅಧಿಕಾರಿಗಳ ಮಾತು ಕೇಳದ ಸ್ಥಳೀಯ ಅಧಿಕಾರಿಗಳ ಪಟ್ಟಿಯನ್ನು ಕೊಡಿ. ಅವರಿಗೆ ಏನು ಮಾಡಬೇಕು ಎಂದು ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ಮಾತನಾಡಿ ಕ್ರಮ ಕೈಳ್ಳುವುದಾಗಿ ಎಚ್ಚರಿಕೆ ನೀಡಿದರು. ನಮಗೆ ಜನಗಳ ಸಮಸ್ಯೆ ಆಲಿಸಿ ಕೆಲಸ ಮಾಡುವಂತಹ ಅಧಿಕಾರಿಗಳು ಮಾತ್ರ ಬೇಕು. ಬೇಜವಾಬ್ದಾರಿ ಅಧಿಕಾರಿಗಳು ಬೇಕಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕೆಂಡಮಂಡಲರಾದರು. ಇಲಾಖೆ ಮಟ್ಟದಲ್ಲಿ ಬಗೆಹರಿಸುವಂತಹ ಕೆಲಸಗಳನ್ನು ಮಾಡಿ, ಮೇಲ್ಮಟ್ಟದ ಅಧಿಕಾರಿಗಳಿಂದ ಕೆಲಸ ಆಗಬೇಕಿದ್ದರೆ ನಾನು ಮಾಡಿಸುತ್ತೇನೆ. ಸುಮ್ಮನೆ ಜನಗಳನ್ನು ಅಲೆದಾಡಿಸಬೇಡಿ ಎಂದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ತೇಜೋಮೂರ್ತಿ ಮಾತನಾಡಿ, ಶಾಸಕರು ಪಶುಪತಿ ಗ್ರಾಮದ ಮಾರಮ್ಮ ದೇವಸ್ಥಾನಕ್ಕೆ 4 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಜತೆಗೆ ಕುರ್ಜು ಕಾಮಗಾರಿಗೆ 2.5 ಲಕ್ಷ ರೂ. ಅನುದಾನ ನೀಡಿದ್ದಾರೆ. ದೇವಸ್ಥಾನಗಳ ಅಭಿವೃದ್ಧಿ ಮತ್ತು ಆಶ್ರಯ ಮನೆಗಳು ಹಾಗೂ ಮಳೆಗಾಳಿಗೆ ಬಿದ್ದು ಹೋಗಿರುವ ಮನೆಗಳಿಗೆ ಪರಿಹಾರ ಕೊಡಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.
ತಹಸೀಲ್ದಾರ್ ರುಕಿಯಾ ಬೇಗಂ, ಲೋಕೋಪಯೋಗಿ ಇಲಾಖೆ ಎಇಇ ಸುಮಿತಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶಂಕರಮೂರ್ತಿ, ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್, ಪಿಡಿಒ ಧನಂಜಯ್, ಗ್ರಾಪಂ ಸದಸ್ಯರಾದ ಜಯಲಕ್ಷ್ಮಮ್ಮ, ಅಣ್ಣಯ್ಯ, ಪಿ.ಎಂ.ರೇಣುಕೇಶ್, ಚಂದ್ರಶೇಖರ್, ಅಯ್ಯಣ್ಣ, ಹನಸೋಗೆ ಪ್ರಕಾಶ್, ಧರ್ಮ, ಶಿವಲಿಂಗಪ್ಪ, ಪಿ.ಎಸ್.ರೇಣುಕೇಶ್, ರಾಜಣ್ಣ, ಪ್ರದೀಪ್, ಶಿವರುದ್ರಪ್ಪ, ಪಿ.ಎಂ. ಗುರುಮೂರ್ತಿ, ಪಿ. ಎಂ. ಪ್ರಕಾಶ್, ಸುರೇಶ್ ಸಿದ್ದಲಿಂಗಯ್ಯ, ರಾಜಶೇಖರಯ್ಯ, ಪಿ.ಸಿ. ಅಣ್ಣಯ್ಯ,ರಾಜಣ್ಣ, ಪ್ರಕಾಶ್, ಮೂರ್ತಿ, ಕಾಳಯ್ಯ ಸ್ವಾಮಿರೇಣು, ವಿಜಯ್, ಪುಟ್ಟರಾಜ್, ದೇವರಾಜ್ ಗೌಡ, ಎಫ್‌ಡಿಎ ಮಂಜೇಗೌಡ, ಡಾಟಾ ಎಂಟ್ರಿ ಕಾರ್ತಿಕ್, ತಂದ್ರೆ ಧರ್ಮ ಸೇರಿದಂತೆ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net