ಕಾಸರಗೋಡಿನಲ್ಲಿ ಶೇ.70 ರಷ್ಟು ಕನ್ನಡಿಗರು ಇದ್ದು, ಅವರ ಮೇಲೆ ಮಲಯಾಳಂ ಭಾಷೆಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಕೇರಳ ಸಿಎಂ ಮಾತಿಗೆ ಮಣಿದು ಬೆಂಗಳೂರಿನ ಕೋಗಿಲೆ ಬಡಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ಮನೆ ನಿರ್ಮಿಸಿಕೊಡಲಾಗುತ್ತಿದೆ. ಇದೇ ರೀತಿ ಇದೀಗ ಕೇರಳದ ಮೇಲೆ ಒತ್ತಡ ಹೇರಿ ಕೇರಳದಲ್ಲಿ 200 ಕನ್ನಡ ಶಾಲೆಗಳನ್ನು ರಾಜ್ಯ ಸರ್ಕಾರದಿಂದ ನಿರ್ಮಾಣ ಮಾಡಲು ಜಾಗ ನೀಡುವಂತೆ ಕೇರಳ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಬಿ.ಎ. ಶಿವಶಂಕರ್, ವೇಣು ಗೋಪಾಲ್, ನಾಗಮ್ಮ, ಹರದನಹಳ್ಳಿ ಬಸವರಾಜ ಹಾಗೂ ಇತರರು ಪಾಲ್ಗೊಂಡಿದ್ದರು.