ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ

 ಪಿರಿಯಾಪಟ್ಟಣದ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಪ್ರಶಾಂತ್, ರವಿ ಪ್ರಸನ್ನ, ರೇವಣ್ಣಯ್ಯ, ಪಿ.ಸಿ.ಕೃಷ್ಣ, ನಿರಂಜನ್, ಕುಮಾರ್, ಕೆ.ಎಲ್.ಸುರೇಶ್, ಗಿರೀಶ್, ಸುದರ್ಶನ್, ರಮೇಶ್ ಇದ್ದರು.
ಪಿರಿಯಾಪಟ್ಟಣದ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಪ್ರಶಾಂತ್, ರವಿ ಪ್ರಸನ್ನ, ರೇವಣ್ಣಯ್ಯ, ಪಿ.ಸಿ.ಕೃಷ್ಣ, ನಿರಂಜನ್, ಕುಮಾರ್, ಕೆ.ಎಲ್.ಸುರೇಶ್, ಗಿರೀಶ್, ಸುದರ್ಶನ್, ರಮೇಶ್ ಇದ್ದರು.
Published on
ಪಿರಿಯಾಪಟ್ಟಣ: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದ್ದಲ್ಲಿ ಮಾತ್ರ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್ ತಿಳಿಸಿದರು.
ಪಟ್ಟಣದ ಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2025-26 ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಯಾವುದೇ ಖಾಸಗಿ ಶಾಲೆಗೆ ಸರಿಸಮನಾಗಿ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದ್ದು ನುರಿತ ಶಿಕ್ಷಕರಿಂದ ಪಾಠ ಪ್ರವಚನಗಳು ನಡೆಯುತ್ತಿವೆ ಎಂದರು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಲ್ಲಿ ಅನೇಕರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೊಡ್ಡ ದೊಡ್ಡ ಉದ್ದಿಮೆಗಳನ್ನೂ ನಡೆಸುತ್ತಿದ್ದಾರೆ. ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬಂದು ಸರ್ಕಾರಿ ಶಾಲೆಗಳಲ್ಲಿ ತಮ್ಮ ಮಕ್ಕಳನ್ನು ದಾಖಲಾತಿ ಮಾಡಲು ಮನಸ್ಸು ಮಾಡಬೇಕಿದೆ ಎಂದರು.
ಶಾಲೆಗೆ ಹೊಸದಾಗಿ ಪೇಯಿಂಟ್ ಮಾಡಿಸಿದ ಉಜ್ಜೀವನ್ ಬ್ಯಾಂಕ್ ಹಾಗೂ ಇದಕ್ಕಾಗಿ ಸಹಕರಿಸಿದ ದಾನಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಉಜ್ಜೀವನ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ ಪಿರಿಯಾಪಟ್ಟಣ ಶಾಖೆಯ ವ್ಯವಸ್ಥಾಪಕ ಶಿವಕ್ರಾಂತಿ ಕುಮಾರ್ ಮಾತನಾಡಿ, ನಮ್ಮ ಶಾಖೆ ವತಿಯಿಂದ ಚೋಟೆ ಕದಂ ಸ್ಕೀಮಿನಲ್ಲಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಉನ್ನತೀಕರಣಗೊಳಿಸಲಾಗಿದೆ. ಸರ್ಕಾರಿ ಶಾಲೆಗಳ ಆವರಣವನ್ನು ಸ್ವಚ್ಛ ಹಾಗೂ ಸುಂದರಗೊಳಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಪ್ರಸನ್ನ, ಶಾಲೆಯ ಮುಖ್ಯ ಶಿಕ್ಷಕ ರೇವಣ್ಣಯ್ಯ, ಸಿಆರ್‌ಪಿ ಸುದರ್ಶನ್, ಪಿಇಒ ರಮೇಶ್, ಶಿಕ್ಷಕರಾದ ಸುಶೀಲಾ, ಸರ್ವಮಂಗಳಾ, ಯಶಸ್ವಿನಿ, ಸುಜಾತಾ, ಸುಮಿ, ಎಚ್.ಸುರೇಶ್, ಕೆ.ಟಿ.ಸುರೇಶ್, ಅನಿತಾ, ಅಮೃತ್, ಪ್ರೇಮಾ, ರೇಣುಕಾ, ನಿವೃತ್ತ ಮುಖ್ಯ ಶಿಕ್ಷಕ ನಟರಾಜ ನಾಯಕ್, ಬ್ಯಾಂಕ್ ಸಿಬ್ಬಂದಿ ಡಿ.ಎಂ.ಪ್ರಭಾಕರ್, ಆರ್.ವೆಗೆಸ್, ಎಂ.ಸುಮಿತ್ ಕುಮಾರ್, ಪುರಸಭೆ ಮಾಜಿ ಸದಸ್ಯ ಪಿ.ಸಿ.ಕೃಷ್ಣ, ನಿರಂಜನ್, ಕುಮಾರ್, ಕೆ.ಎಲ್. ಸುರೇಶ್, ಗಿರೀಶ್ ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net